ಗುಜರಾತ್​:ಇಲ್ಲಿನ ಮಾರ್ಬಿ ಪ್ರದೇಶದಲ್ಲಿ ಮಚ್ಚೂ ನದಿಗೆ ಅಡ್ಡಲಾಗಿ ಹಾಕಿರುವ ತೂಗು ಸೇತುವೆ ಮುರಿದು ಬಿದ್ದ ಪರಿಣಾಮವಾಗಿ 35ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು ಎಂದು ಈ ಹಿಂದೆ ಅಂದಾಜಿಲಾಗಿತ್ತು. ಆದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿದ್ದು, ಸತ್ತವರ ಸಂಖ್ಯೆ 60ಕ್ಕೂ ಅಧಿಕ ಎಂಬುದು ತಿಳಿದುಬಂದಿದೆ.
ಇಂದು ಸಂಜೆ ಸಂಭವಿಸಿದ ಈ ಅವಘಡಕ್ಕೆ ಸಂಬಂಧಿಸಿದಂತೆ ಗುಜರಾತ್ ಸಚಿವ ಬ್ರಿಜೇಶ್ ಮೇರ್ಜಾ ಪ್ರತಿಕ್ರಿಯಿಸಿದ್ದು, ಸಾವಿಗೀಡಾದವರ ಸಂಖ್ಯೆ 60ಕ್ಕೂ ಅಧಿಕ ಎಂಬುದಾಗಿ ಹೇಳಿದ್ದಾರೆ.
ಇನ್ನು ಸೇತುವೆ ಕೆಳಗೆ ಬಹಳಷ್ಟು ಹೂಳು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಲ್ಲಿಂದ ನೀರನ್ನು ಪಂಪ್ ಮಾಡಿ ಹೊರಗೆ ಹಾಕುವ ಪ್ರಯತ್ನಕ್ಕೂ ಮುಂದಾಗಲಾಗಿದೆ ಎಂದು ಬಿಜೆಪಿ ಸಂಸದ ಮೋಹನ್​ಭಾಯ್​ ಕಲ್ಯಾಣ್​ಜಿ ಕುಂಡರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ:ಮುರಿದು ಬಿದ್ದ ಕೇಬಲ್ ಬ್ರಿಡ್ಜ್​: ಕನಿಷ್ಠ 35 ಮಂದಿ ಸಾವು, ಸತ್ತವರ ಸಂಖ್ಯೆ ಏರುವ ಸಾಧ್ಯತೆ..
ತೂಗು ಸೇತುವೆ ಮಿತಿಮೀರಿದ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ ತೂಗು ಸೇತುವೆ ಮೇಲಿದ್ದವರು ಸಂಭ್ರಮಿಸುವ ಭರದಲ್ಲಿ ಅತಿಯಾಗಿ ತೂಗುವಂತೆ ಕುಣಿದಾಡಿದ್ದೂ ಕಾರಣ ಎನ್ನಲಾಗುತ್ತಿದ್ದು, ಹಾಗೆ ಓಲಾಡುತ್ತಿರುವ ದೃಶ್ಯಾವಳಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

ಭಗತ್ ಸಿಂಗ್ ಪಾತ್ರಕ್ಕೆಂದು ರಿಹರ್ಸಲ್ ಮಾಡುತ್ತಿದ್ದ ಬಾಲಕ ನಿಜವಾಗಿಯೂ ಉರುಳಿಗೆ ಬಲಿಯಾದ!

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: ಇಸ್ರೋ ಶಿವನ್, ನಟರಾದ ದತ್ತಣ್ಣ-ಅವಿನಾಶ್ ಸೇರಿ 67 ಸಾಧಕರು, 10 ಸಂಸ್ಥೆಗಳಿಗೆ ಪ್ರಶಸ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 1 =
Remember me
