ನವದೆಹಲಿ:ದೇಶದಲ್ಲಿನ ಕೋವಿಡ್​ ಪರಿಸ್ಥಿತಿ ಕುರಿತು ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್​ವಾಲ್​, ಮಹತ್ವಪೂರ್ಣ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ದೇಶದ ಜನತೆ ಕೋವಿಡ್​ ಕುರಿತು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿರುವ ಅಗತ್ಯವನ್ನು ವಿವರಿಸಿದ್ದಾರೆ.
ಕಳೆದೊಂದು ವಾರದಲ್ಲಿ ದೇಶದಲ್ಲಿನ ಕೋವಿಡ್​-19 ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 8 ಇಳಿಕೆ ಕಂಡಿದ್ದರೂ, ಎಲ್ಲೆಡೆ ವೈರಸ್ ಹಾವಳಿ ಇನ್ನೂ ಇರುವುದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೆ ನಿರ್ಲಕ್ಷ ವಹಿಸುವಂತಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಇನ್ನು ಕಳೆದ ಒಂದು ವಾರದಲ್ಲಿ ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣ ಎರಡೇ ರಾಜ್ಯಗಳಲ್ಲಿ ಕಂಡುಬಂದಿದೆ. ಒಟ್ಟು ಪ್ರಕರಣಗಳ ಪೈಕಿ ಶೇ. 32 ಕೇರಳ ಹಾಗೂ ಶೇ. 21ರಷ್ಟು ಪ್ರಕರಣ ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಅದರಲ್ಲೂ ಕೇರಳದ 14 ಹಾಗೂ ಮಹಾರಾಷ್ಟ್ರದ 15 ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂಬುದನ್ನೂ ಹೇಳಿದ್ದಾರೆ. ಇನ್ನು ಕೇರಳ-ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿಹೆಚ್ಚಿನ ಕೋವಿಡ್​ ಪ್ರಕರಣ ಕಂಡುಬಂದಿರುವುದರಿಂದ ಗಡಿ ಹಂಚಿಕೊಂಡಿರುವ ಕರ್ನಾಟಕವೂ ಆತಂಕ ಪಡುವಂತಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಶುಕ್ರವಾರದ ಬುಲೆಟಿನ್ ಪ್ರಕಾರ ದೇಶದಲ್ಲಿ ಹೊಸದಾಗಿ 43,393 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ದೃಢಪಟ್ಟಿದ್ದು, ಇದುವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 3,07,52,950ಕ್ಕೆ ತಲುಪಿದೆ. ಇನ್ನು ಕೋವಿಡ್​ ದೈನಂದಿನ ಪ್ರಕರಣಗಳ ಪೈಕಿ ಟಾಪ್​-5 ರಾಜ್ಯಗಳಲ್ಲಿ ಕೇರಳ (13,772 ), ಮಹಾರಾಷ್ಟ್ರ (9,083), ತಮಿಳುನಾಡು (3,211 ), ಆಂಧ್ರಪ್ರದೇಶ (2,982) ಮತ್ತು ಅಸ್ಸಾಮ್ (2,644) ಇವೆ. (ಏಜೆನ್ಸೀಸ್​)
ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂದ್ರು 281 ವೈದ್ಯರು!; ಯಾಕೆ, ಯಾರಲ್ಲಿ?

ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
