ಲಖನೌ:ಅಯೋಧ್ಯೆಯಲ್ಲಿ ರಾಮಮಂದಿನ ನಿರ್ಮಾಣ ಶುರುವಾಗಿದೆ. ಹಾಗೇ ಇನ್ನೊಂದೆಡೆ ಮಸೀದಿ ನಿರ್ಮಾಣಕ್ಕೆ ಟ್ರಸ್ಟ್​ ಕೂಡ ರಚನೆಯಾಗಿದೆ.
ಸುಪ್ರೀಂಕೋರ್ಟ್​ ತೀರ್ಪಿನ ಅನ್ವಯ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಉತ್ತರಪ್ರದೇಶ ಸರ್ಕಾರ ಮಸೀದಿ ನಿರ್ಮಾಣಕ್ಕಾಗಿ ನೀಡಿದೆ. ಅಲ್ಲಿ ನಿರ್ಮಾಣ ಆಗಲಿರುವ ಮಸೀದಿ ಬಾಬ್ರಿ ಮಸೀದಿಯಷ್ಟೇ ದೊಡ್ಡದಾಗಿರುತ್ತದೆ ಎಂದು ಟ್ರಸ್ಟ್​ ಕಚೇರಿ ಮೂಲಗಳು ತಿಳಿಸಿವೆ. ಹಾಗೇ ಆ ಐದು ಎಕರೆಯೊಳಗೆ ಆಸ್ಪತ್ರೆ, ಲೈಬ್ರರಿ, ಮ್ಯೂಸಿಯಂ, ಇಂಡೋ-ಇಸ್ಲಾಮಿಕ್​ ರಿಸರ್ಚ್​ ಸೆಂಟರ್​ ಗಳೂ ಇರುತ್ತವೆ. 15,000 ಚದರ ಅಡಿ ವಿಸ್ತೀರ್ಣದಲ್ಲಿ ಮಸೀದಿ ಇರಲಿದ್ದು, ಉಳಿದ ಜಾಗದಲ್ಲಿ ಇದನ್ನೆಲ್ಲ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
1992ರ ಡಿಸೆಂಬರ್​ 6ರಂದು ಅಯೋಧ್ಯೆಯಲ್ಲಿರುವ ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸ ಮಾಡಿದ್ದಾರೆ. ಇಲ್ಲಿ ರಾಮಮಂದಿರ ಇತ್ತು. ಅದನ್ನು ಒಡೆದು ಮಸೀದಿ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ಧ್ವಂಸ ಮಾಡಿದ್ದೇವೆ ಎಂದು ಪ್ರತಿಪಾದಿಸಿದ್ದರು. ಕಳೆದ ವರ್ಷ ಭೂವಿವಾದದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್​ ನೀಡಿದೆ. ತೀರ್ಪಿನ ಅನ್ವಯ ರಾಮಮಂದಿರ ನಿರ್ಮಾಣ ಶುರುವಾಗಿದೆ. ಮಸೀದಿ ನಿರ್ಮಾಣಕ್ಕೂ ಸಿದ್ಧತೆ ನಡೆಯುತ್ತಿದೆ. (ಏಜೆನ್ಸೀಸ್)
17,500 ಅಡಿ ಎತ್ತರ ಪ್ರದೇಶದಲ್ಲಿ ದಿಕ್ಕು ತೋಚದೆ ಪರದಾಟ: ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fifteen =
Remember me
