ಹೈದರಾಬಾದ್:ಇಲ್ಲಿನ ಮಸೀದಿಯೊಂದು ಈ ಕರೊನಾ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿ ಬದಲಾಗಿದೆ. ಅಷ್ಟೇ ಅಲ್ಲ ಎಲ್ಲ ಧರ್ಮದ ಬಡವರಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿದೆ.
ಆಸ್ಪತ್ರೆಯಾಗಿ ಬದಲಾದ ಈ ಮಸೀದಿಯಲ್ಲಿ ಲ್ಯಾಬೋರೇಟರಿ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರೊಂದಿಗೆ ಇಲ್ಲಿ ಇನ್ನುಮುಂದೆ 10 ವರ್ಷದವರೆಗಿನ ಮಕ್ಕಳಿಗೆ ಮಧ್ಯಾಹ್ನದ ಊಟವನ್ನೂ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅದರಲ್ಲೂ, ಈ ಮಸೀದಿ ಇರುವ ಸ್ಥಳವಾದ ರಾಜೇಂದ್ರ ನಗರ ಮಂಡಲದ ಸುಮಾರು 31 ಸ್ಲಮ್​ಗಳಲ್ಲಿರುವ ಜನರಿಗೆ ಉಚಿತ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗುವುದು. ಅದರಲ್ಲೂ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು. ಅಲ್ಲಿರುವ ಗರ್ಭಿಣಿಯರಿಗೆ ವೈದ್ಯಕೀಯ ಸೇವೆ, ಡಯಟ್​ ಸಲಹೆಗಳನ್ನು ನೀಡಿ, ಆದಷ್ಟು ಸಹಜ ಹೆರಿಗೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಯುಎಸ್ ಮೂಲದ ಸೀಡ್​ ಫೌಂಡೇಶನ್​ ಸಹಯೋಗದಲ್ಲಿ ಹೈದರಾಬಾದ್​ನ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್​ ಎಂಬ ಎನ್​ಜಿಒ ಈ ಕ್ಲಿನಿಕ್​​ನ್ನು ಶುರು ಮಾಡುತ್ತಿದೆ.
ಹಾಗೇ ಈ ಕ್ಲಿನಿಕ್​​ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಜನರಲ್​ ಫಿಸಿಷಿಯನ್​, ಮಕ್ಕಳ ತಜ್ಞರು, ಡೆಂಟಿಸ್ಟ್​, ಸ್ತ್ರೀರೋಗ ತಜ್ಞರು, ನರ್ಸ್​ಗಳು, ಡಯೆಟಿಷಿಯನ್ಸ್​ಗಳೆಲ್ಲರೂ ಮಹಿಳೆಯರೇ ಆಗುತ್ತಾರೆ. ಹಾಗೇ ಇಲ್ಲಿ ಕೊವಿಡ್​-19ಗೆ ಸಂಬಂಧಪಟ್ಟ ಎಲ್ಲ ಶಿಷ್ಟಾಚಾರಗಳನ್ನೂ ಪಾಲಿಸಲಾಗುತ್ತದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)
ಗೊತ್ತಾಗದೆ ಗಡಿ ದಾಟಿದ ಇವರು ಮರಳಿ ದೇಶಕ್ಕೆ ಕಾಲಿಡಲು 5 ವರ್ಷಗಳೇ ಬೇಕಾದವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
