ಮುಂಬೈ:ಯಾರಿಂದಲೂ ಸಿಗದ ಸಮಾಧಾನ-ಸಾಂತ್ವನ ಇವರಿದ್ದಾಗ ಅದೆಷ್ಟೋ ಮಂದಿಗೆ ಸಿಕ್ಕಿತ್ತು. ಯಾರಲ್ಲೂ ಹೇಳಲಾಗದ, ಕೇಳಲಾಗದ ಪ್ರಶ್ನೆಗಳಿಗೆ ಇವರಿಂದ ಸಮರ್ಪಕ-ಸಮಂಜಸ ಉತ್ತರ ಸಿಗುತ್ತಿತ್ತು. ಅದೆಷ್ಟೋ ಮಂದಿಯ ವಿಶ್ವಾಸ ಗಳಿಸಿದ್ದ, ಅದೆಷ್ಟೋ ಜನರಲ್ಲಿ ವಿಶ್ವಾಸ ಮೂಡಿಸಿದ್ದ ಇವರು ಖ್ಯಾತ ಸೆಕ್ಸ್​ಪರ್ಟ್. ‘ಆಸ್ಕ್​ ದಿ ಸೆಕ್ಸ್​ಪರ್ಟ್​’ ಎನ್ನುತ್ತಿದ್ದ ಇವರಲ್ಲಿ ಏನನ್ನೂ ಕೇಳಿದರೂ ಅದಕ್ಕೊಂದು ಪರಿಹಾರ ಸಿಗುತ್ತಿತ್ತು. ಆದರೆ ಇನ್ನಿವರಲ್ಲಿ ಯಾರೂ ಏನನ್ನೂ ಕೇಳುವಂತಿಲ್ಲ. ಏಕೆಂದರೆ ಸೆಕ್ಸ್​ಪರ್ಟ್​ ಇನ್ನಿಲ್ಲ.
ಹೌದು.. ‘ಸೆಕ್ಸ್​ಪರ್ಟ್​’ ಎಂದೇ ಖ್ಯಾತರಾಗಿದ್ದ ಡಾ. ಮಹಿಂದರ್ ವತ್ಸ (96) ಸೋಮವಾರ ನಿಧನರಾದರು. ಸ್ತ್ರೀ-ಪುರುಷರೆನ್ನದೆ ಎಲ್ಲರಿಗೂ ಮುಕ್ತವಾಗಿ ಲೈಂಗಿಕ ಸಮಸ್ಯೆಗಳಿಗೆ, ಗೊಂದಲಗಳಿಗೆ ಉತ್ತರ ನೀಡುತ್ತಿದ್ದ ಇವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದರು. ಇವರು ಆಂಗ್ಲ ಪತ್ರಿಕೆಯೊಂದರಲ್ಲಿ ‘ಆಸ್ಕ್​ ದಿ ಸೆಕ್ಸ್​ಪರ್ಟ್​’ ಎಂಬ ಅಂಕಣದ ಮೂಲಕ ಹೀಗೆ 15 ವರ್ಷಗಳ ಕಾಲ ಜನರಿಗೆ ಉತ್ತರ-ಉಪಾಯ ಹೇಳಿದ್ದರು. ಸೆಕ್ಸ್​ ಬಗ್ಗೆ ಮಾತನಾಡುವುದೇ ಮುಜುಗರ ಅಥವಾ ಅಪರಾಧ ಎಂಬಂತಿದ್ದ ಸಮಯದಲ್ಲೇ ಇವರು ಅದರ ಬಗ್ಗೆ ಮುಕ್ತವಾಗಿ ಮಾತನಾಡುವಂಥ ವಾತಾವರಣ ಕಲ್ಪಿಸಿದ್ದಲ್ಲದೆ, ಲೈಂಗಿಕ ವಿಷಯಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು.
ಮಿಲಿಟರಿ ವೈದ್ಯರೊಬ್ಬರ ಪುತ್ರರಾಗಿದ್ದ ಇವರು ಸುಮಾರು ನಾಲ್ಕು ದಶಕಗಳ ಕಾಲ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಭಾರತದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್​ನ ಸಲಹಾಗಾರರಾಗಿಯೂ ಕೆಲಸ ಮಾಡಿದ್ದ ಇವರು, ಲೈಂಗಿಕ ಆಪ್ತಸಮಾಲೋಚನೆ ಹಾಗೂ ಶಿಕ್ಷಣ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದರು. ಇವರಿಂದಾಗಿಯೇ ಈ ಸಂಸ್ಥೆ 1974ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಶಿಕ್ಷಣ ಹಾಗೂ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಿತು. ಲೈಂಗಿಕ ಸಮಾಲೋಚನೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲೆಂದೇ ಇವರು 1980ರಲ್ಲಿ ತಮ್ಮ ಪ್ರ್ಯಾಕ್ಟಿಸ್​ ತೊರೆದಿದ್ದರು. (ಏಜೆನ್ಸೀಸ್​)
ಮಗ ಹುಟ್ಟುತ್ತಲೇ ವಿಚಿತ್ರ ಅನುಭವ: ಮಂತ್ರವಾದಿ ನೀಡಿದ ಚಿಕಿತ್ಸೆ- ಮುಂದೆ ಆದದ್ದು ಭಯಾನಕ!

ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

ರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!

ನೈಟ್​ ಕರ್ಫ್ಯೂ ರದ್ದಾದರೇನಂತೆ, ಇವರಿಗಿನ್ನೂ ಅದೇ ಚಿಂತೆ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × 5 =
Remember me
