ಶ್ರೀನಗರ:ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಉನ್ನತ ಕಮಾಂಡರ್​, ಮೋಸ್ಟ್​ ವಾಂಟೆಡ್​ ಲಿಸ್ಟ್​ನಲ್ಲಿದ್ದ ಉಗ್ರ ರಿಯಾಜ್ ನಾಯ್ಕೂ ಭಾರತೀಯ ಸೇನೆಯ ಬಲೆಗೆ ಬಿದ್ದಿದ್ದಾನೆ.
ದಕ್ಷಿಣ ಕಾಶ್ಮೀರದ ಆವಂತಿಪುರದ ಬೀಗ್ಪೊರಾದಲ್ಲಿರುವ ರಿಯಾಜ್​ನ ಗ್ರಾಮದಲ್ಲಿಯೇ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಮಂಗಳವಾರ ತಡರಾತ್ರಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ರಿಯಾಜ್​ ಸಿಕ್ಕಿಬಿದ್ದಿದ್ದಾನೆ.
ಜಮ್ಮು-ಕಾಶ್ಮೀರ ಪೊಲೀಸರು, 55 ರಾಷ್ಟ್ರೀಯ ರೈಫಲ್ಸ್​ ಟೀಂ ಮತ್ತು ಸಿಆರ್​​ಪಿಎಫ್​ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ರಿಯಾಜ್​ ತನ್ನ ಊರಲ್ಲೇ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಸಿಕ್ಕಿದ್ದರಿಂದಲೇ ಆತನನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮಾಡಲಾಗಿತ್ತು. ರಿಯಾಜ್​ ಜತೆ ಇನ್ನೂ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಉಗ್ರರಿಂದ ಜನರನ್ನು ರಕ್ಷಿಸಿ ಹುತಾತ್ಮರಾದ ಐವರು ಭಾರತೀಯ ಯೋಧರು
ಸದ್ಯ ಸ್ಥಳದಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದ್ದು, ಮೊಬೈಲ್​, ಇಂಟರ್​ನೆಟ್​ ಸೇವೆಗಳನ್ನು ಬಂದ್ ಮಾಡಲಾಗಿದೆ.
ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಹಳೇ ಮುಖಂಡರಲ್ಲಿ ಒಬ್ಬ ರಿಯಾಜ್​ ನಾಯ್ಕೂ.ರಿಯಾಜ್​ ಎ++ (ಉನ್ನತ ದರ್ಜೆ) ಕೆಟೆಗರಿಯ ಉಗ್ರ. ಈತನ ಸುಳಿವು ನೀಡಿದವರಿಗೆ 12 ಲಕ್ಷ ರೂ.ನೀಡುವುದಾಗಿ ಈ ಹಿಂದೆಯೇ ಘೋಷಿಸಲಾಗಿತ್ತು.
ಆವಂತಿಪುರ ಜಿಲ್ಲೆಯ ರಿಯಾಜ್​ ನಾಯ್ಕೂ ಅನೇಕ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿ.
ಇದನ್ನೂ ಓದಿ:ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಪತಿ ಮೃತದೇಹದ ಮುಂದೆ ಪತ್ನಿಯ ಶೋಕ: ಭಾವುಕರಾದ ನೆಟ್ಟಿಗರು
2016ರ ಜನವರಿಯಲ್ಲಿ ಮೊದಲ ಬಾರಿಗೆ ಈತ ಮುನ್ನೆಲೆಗೆ ಬಂದಿದ್ದಾನೆ. ಎನ್​ಕೌಂಟರ್​​ನಲ್ಲಿ ಹತ್ಯೆಯಾಗಿದ್ದ ಉಗ್ರ ಶರೀಕ್​ ಅಹ್ಮದ್ ಭಟ್​ನ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ. ಅಹ್ಮದ್​ ಮೃತದೇಹವನ್ನು ಹೊತ್ತು ತರುವಾಗ ನಾಯ್ಕೂ ಹಲವು ಬಾರಿ ಗಾಳಿಯಲ್ಲಿ ಗುಂಡು ಹೊಡೆದಿದ್ದ. ಈ ಮೂಲಕ ಮೃತ ಉಗ್ರನಿಗೆ ಗೌರವ ಸಲ್ಲಿಸಿದ್ದ.
2017ರಲ್ಲಿ ರಿಯಾಜ್​ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದ. ಅದರಲ್ಲಿ ಕಾಶ್ಮೀರಿ ಪಂಡಿತರನ್ನು ವಾಪಸ್​ ಬರುವಂತೆ ಕೇಳಿಕೊಂಡಿದ್ದ. ಅಲ್ಲದೆ, ಉಗ್ರರು ಕಾಶ್ಮೀರಿ ಪಂಡಿತರಿಗೆ ಶತ್ರುಗಳಲ್ಲ ಎಂದು ಹೇಳಿದ್ದ. (ಏಜೆನ್ಸೀಸ್​)
ಇದನ್ನೂ ಓದಿ:ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್​ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಾಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
