ನವದೆಹಲಿ:ಗೂಗಲ್​ ಸಂಸ್ಥೆ ಭಾರತ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಶೋಧವಾದ ವಿಚಾರಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಅದರಂತೆ ಟ್ವಿಟ್ಟರ್​ ಕೂಡ ಅತಿ ಹೆಚ್ಚು ಲೈಕ್ಸ್​ ಪಡೆದ ಹಾಗೂ ರಿಟ್ವೀಟ್​ ಆದ ಟ್ವೀಟ್​ಗಳು ಯಾವುದೆಂದು ಬಹಿರಂಗಪಡಿಸಿತ್ತು. ಇದೀಗ ಯೂಟ್ಯೂಬ್ ಕೂಡ 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ವಿಡಿಯೋಗಳು ಯಾವುದು ಎಂದು ಪಟ್ಟಿ ರಚಿಸಿದೆ.
ಇದನ್ನೂ ಓದಿ:ಐಫೋನ್​ ಕಾರ್ಖಾನೆ ಮೇಲಿನ ದಾಳಿಯಲ್ಲಿ ಸಾವಿರಾರು ಐಫೋನ್​ ಕಳವು! ಕಂಪನಿಗೆ ಉಂಟಾದ ನಷ್ಟವೆಷ್ಟು ಗೊತ್ತಾ?
2020ರಲ್ಲಿ ವೀಕ್ಷಣೆಯಾದ ಮ್ಯೂಸಿಕ್​ ವಿಡಿಯೋಗಳಲ್ಲಿ ಸೋನಿ ಮ್ಯೂಸಿಕ್​ನ ಬಾದ್​ಶಾ- ಗೆಂಡಾ ಫೂಲ್​ ವಿಡಿಯೋ ಮೊದಲ ಸ್ಥಾನದಲ್ಲಿದೆ. ಇದರ ನಂತರ ಡಿಐಎಲ್ ಮ್ಯೂಸಿಕ್‌ನ ಮೋಟೋ (ಅಧಿಕೃತ ವಿಡಿಯೋ), ಆದಿತ್ಯ ಮ್ಯೂಸಿಕ್‌ನ ಬುಟ್ಟಬೊಮ್ಮ ಪೂರ್ಣ ವಿಡಿಯೋ ಸಾಂಗ್ (4 ಕೆ), ಸೋನಿ ಮ್ಯೂಸಿಕ್ ಇಂಡಿಯಾದ ಸುಮಿತ್ ಗೋಸ್ವಾಮಿ – ಫೀಲಿಂಗ್ಸ್ ಮತ್ತು ಟಿ-ಸರಣಿಯ ಇಲ್ಲೀಗಲ್​ ವೆಪನ್ 2.0 – ಸ್ಟ್ರೀಟ್ ಡ್ಯಾನ್ಸರ್ 3D ವಿಡಿಯೋಗಳು ಪಟ್ಟಿಯಲ್ಲಿವೆ.
ಇದನ್ನೂ ಓದಿ:ಶೂದ್ರರಿಗೆ ಅರ್ಥವೇ ಆಗುವುದಿಲ್ಲ, ಅದಕ್ಕೇ ಅವರು ಸಿಟ್ಟಾಗುತ್ತಾರೆ! ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿಕೆ
ಅತಿ ಹೆಚ್ಚು ವೀಕ್ಷಣೆಗೊಂಡ ವಿಡಿಯೋಗಳಲ್ಲಿ ಕ್ಯಾರಿಮಿನಾಟಿಯ ಸ್ಟಾಪ್ ಮೇಕಿಂಗ್ ಅಸೆಂಪ್ಷನ್​ ವಿಡಿಯೋ ಮೊದಲ ಸ್ಥಾನದಲ್ಲಿದೆ. ನಂತರ ಜೆಕೆ ಎಂಟರ್‌ಟೈನ್‌ಮೆಂಟ್​ನ ಚೋಟು ದಾದಾ ಟ್ರ್ಯಾಕ್ಟರ್ ವಾಲಾ, ಜೋಕ್ ಆಫ್ ದಿ ಲಾಕ್‌ಡೌನ್ ಕಾಣಿಸಿಕೊಂಡಿದೆ. ಕ್ಯಾರಿಮಿನಾಟಿ, ಟೋಟಲ್ ಗೇಮಿಂಗ್, ಟೆಕ್ನೋ ಗೇಮರ್ಜ್, ಜೆಕೆ ಎಂಟರ್‌ಟೈನ್‌ಮೆಂಟ್ ಮತ್ತು ಆಶಿಶ್ ಚಾಂಚ್ಲಾನಿರನ್ನು ವರ್ಷದ ಅತ್ಯುತ್ತಮ ಕ್ರಿಯೇಟರ್​ಗಳು ಎಂದು ಯೂಟ್ಯೂಬ್​ ಹೇಳಿದೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
