ಗೋಪಾಲ್ಗಂಗ್ (ಬಿಹಾರ):ನಾಲ್ವರು ಹೆಣ್ಣು ಮಕ್ಕಳನ್ನು ಕೆರೆಗೆ ಎಸೆದು, ಅದರಲ್ಲಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆಗೆ ತಾಯಿಯೇ ಕಾರಣ ಎಂಬ ಆರೋಪ ಕೇಳಿಬಂದಿರುವ ಘಟನೆ ಗೋಪಾಲ್ಗಂಜ್ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಚಾನು ಹೆಸರು ಒಲಿಂಪಿಕ್ಸ್ ಪದಕ ಪಟ್ಟಿಗೆ ಸೇರುತ್ತಿದ್ದಂತೆ ಅಣ್ಣನಿಗೆ ನೆನಪಾಯಿತು ಕಟ್ಟಿಗೆ!
ಕಾಥೇಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕೌಲ್ರಾಹಿ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಬದುಕುಳಿದಿರುವ ಓರ್ವ ಬಾಲಕಿಯನ್ನು ಉತ್ತರಪ್ರದೇಶದ ಪದ್ರೌನಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆರೆಗೆ ಎಸೆಯಲ್ಪಟ್ಟ ನಾಲ್ಕು ವರ್ಷದ ಓರ್ವ ಬಾಲಕಿ ಕೆರೆಯಲ್ಲಿನ ಹುಲ್ಲಿನ ರಕ್ಷಣೆ ಪಡೆದಿದ್ದಾಳೆ. ನಂತರ ದಾರಿಹೋಕರಿಗೆ ಬಾಲಕಿಯ ಅಳುವಿನ ಸದ್ದು ಕೇಳಿ ಆಕೆಯನ್ನು ರಕ್ಷಿಸಿ ಸಾವಿನಿಂದ ಪಾರು ಮಾಡಿದ್ದಾರೆ.
ಸಾವನ್ನಪ್ಪಿರುವ ಮೂವರು ಬಾಲಕಿಯರನ್ನು ಯಾತಿಬಾ (02 ವರ್ಷ), ಮುಸೈಬಾ (03 ವರ್ಷ), ಗುಲಾಬ್ಸರ್ (08 ವರ್ಷ) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರ ತಂದೆ ಗುಜರಾತ್​ನ​​ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎಂಟು ತಿಂಗಳ ಹಿಂದೆ ತೆರಳಿದ್ದ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ತಾಯಿಯೇ ತನ್ನ ಮಕ್ಕಳನ್ನು ಕೊಲ್ಲಲು ಮುಂದಾಗಿದ್ದಳು ಎಂಬುದು ತನಿಖೆಯಿಂದ ಹೊರ ಬರಬೇಕಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eleven =
Remember me
