ಚೆನ್ನೈ:ಮಕ್ಕಳ ಮಾರಾಟ ಜಾಲ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದಿನಿಂದಲೂ ಮಕ್ಕಳ ಮಾರಾಟ ನಡೆಯುತ್ತಿದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಮಗಳನ್ನು ಮಾರಾಟ ಮಾಡಿದ್ದು, ಪೊಲೀಸರು ಆಕೆಯನ್ನು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.
ಮಗುವಿನ ತಾಯಿ ಕಲೈಸೆಲ್ವಿ ಆಕೆಯ ಸಹಚರ ಕರುಪ್ಪುಸಾಮಿ, ಮಗುವನ್ನು ಖರೀದಿಸಿದ್ದ ದಂಪತಿ, ಏಜೆಂಟ್​​ಗಳಾದ ಮರಿಯಮ್ಮ, ಮಹೇಶ್ವರಿ ಹಾಗೂ ಇನ್ನು ಮೂವರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಹೊಚ್ಚ ಹೊಸ ಕಾರಿನಲ್ಲಿ ಅಂತಿಮ ಪ್ರಯಾಣ; ಇಬ್ಬರು ಸ್ನೇಹಿತರ ಬಲಿ ಪಡೆದವನಿಗೆ ಕೊನೆಗೂ ಜೈಲು ಶಿಕ್ಷೆ
ಸೇವಲ್​ಪಟ್ಟಿ ನಿವಾಸಿ ಕಲೈಸೆಲ್ವಿ ತನ್ನ ಪತಿಯ ಮರಣದ ಬಳಿಕ ಕರುಪ್ಪುಸಾಮಿ ಎಂಬಾತನ ಜತೆಗಿದ್ದಳು. ಇವರು ತಮಿಳುನಾಡು ವಿರುಧುನಗರ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು 2.3 ಲಕ್ಷ ರೂಪಾಯಿಗೆ ಮಾರಿದ್ದರು.
ಇದನ್ನೂ ಓದಿ:ಗೋವಾ-ಕೇರಳದಿಂದ ಕರ್ನಾಟಕಕ್ಕೆ ಬರಲು ಇನ್ನು ಕರೊನಾ ನೆಗೆಟಿವ್ ವರದಿ ಬೇಕಿಲ್ಲ; ಆದರೆ…
ಬುಧವಾರ ರಾತ್ರಿ ವಿರುಧನಗರ ಚೈಲ್ಡ್​ಲೈನ್​ಗೆ ಮಗುವಿನ ಮಾರಾಟವಾಗಿರುವ ಕುರಿತು ಅನಾಮಧೇಯ ಕರೆ ಬಂದಿತ್ತು. ಚೈಲ್ಡ್​ಲೈನ್​ಗೆ ಸಂಬಂಧಪಟ್ಟವರು ಕಲೈಸೆಲ್ವಿ ನೆಲೆಸಿದ್ದ ಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ ಮಗು ಮಾರಾಟವಾಗಿರುವುದು ದೃಢಪಟ್ಟಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.ಮದುವೆ ದಲ್ಲಾಳಿಗಳ ರೂಪದಲ್ಲಿ ಕೆಲವು ಏಜೆಂಟ್​ಗಳು ಮಕ್ಕಳ ಮಾರಾಟದಲ್ಲಿ ತೊಡಗಿದ್ದು, ಇಂಥ ಪ್ರಕರಣಗಳು ಹಲವು ನಡೆಯುತ್ತಿರುವುದರ ಶಂಕೆ ಮೂಡಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಪದವಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
