ಆಂಧ್ರಪ್ರದೇಶ:ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ಆದರೆ ಇಲ್ಲೊಬ್ಬಾಕೆಯ ಪತಿ, ತಂದೆ ಹಾಗೂ ಆಕೆ ಕೂಡ ಡಾಕ್ಟರ್ ಆಗಿದ್ದರೂ ಅವಳು ಮಾಡಿದ್ದು ಜೀವ ತೆಗೆಯೋ ಕೆಲಸ. ಅದರಲ್ಲೂ ಅವಳು ತನ್ನ ಏಳು ವರ್ಷದ ಮಗನಿಗೇ ನಿದ್ರೆ ಮಾತ್ರೆ ತಿನ್ನಿಸಿ ಜೀವ ಹೋಗುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಯಾಕೆ ಹಾಗೆ ಮಾಡಿದಳು ಎಂದು ಕೇಳಲು ಅವಳೇ ಇಲ್ಲ!
ಹೌದು.. ಮಗನಿಗೆ ನಿದ್ರೆ ಮಾತ್ರ ತಿನ್ನಿಸಿದ್ದಷ್ಟೇ ಅಲ್ಲದೆ ತಾನೂ ಅದನ್ನು ಸೇವಿಸಿದ್ದು, ಕೊನೆಗೆ ಇಬ್ಬರೂ ಜೀವ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿನ ದೊಂತಮ್​ಶೆಟ್ಟಿ ಲಾವಣ್ಯ ಎಂಬ 33 ವರ್ಷದ ಮಹಿಳೆಯೇ ಆ ವೈದ್ಯೆ. ಲಾವಣ್ಯ ಹಾಗೂ ಆಕೆಯ ಪುತ್ರ ನಿಶಾಂತ್ ಅತಿಯಾದ ನಿದ್ರೆ ಮಾತ್ರೆ ಸೇವನೆಯಿಂದ ಕೋಮಾಗೆ ತೆರಳಿದ್ದು, ಬಳಿಕ ಅವರನ್ನು ಹತ್ತಿರದ ರಾಜಮುಂಡ್ರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಇಬ್ಬರನ್ನೂ ಉಳಿಸಿಕೊಳ್ಳಲು ಆಗಿಲ್ಲ.
ಇದನ್ನೂ ಓದಿ:ಮೋದಿಜೀ ನಿಮ್ಮ ಬಗ್ಗೆ ಗೌರವವಿದೆ, ಆದರೆ ಕೆಳಮಟ್ಟದ ಅಧಿಕಾರಿಗಳಿಂದಾಗಿ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ!
ರಾಜಮುಂಡ್ರಿಯ ವೈದ್ಯರೊಬ್ಬರ ಪುತ್ರಿಯಾಗಿರುವ ಲಾವಣ್ಯ, ತೆಲಂಗಾಣದ ವೈದ್ಯರೊಬ್ಬರೊಂದಿಗೆ ಮದುವೆಯಾಗಿದ್ದಳು. ಬಳಿಕ ಪತಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ತಂದೆಯ ಮನೆಗೆ ಬಂದು ನೆಲೆಸಿದ್ದಳು. ಆದರೆ ಈ ಮಧ್ಯೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನೋಟಿಸ್ ಕಳಿಸಿದ್ದರು. ಇದರಿಂದ ಬೇಸತ್ತು ಆಕೆ ಇಂಥದ್ದೊಂದು ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)
‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ಲವ್​ ಜಿಹಾದ್​ ಎಂದು ಕೇಸ್ ಹಾಕಿದ್ಲು- ಆಮೇಲೆ ನೋಡಿದ್ರೆ ಎಲ್ಲಾ ಮೊದಲೇ ಮುಗಿಸಿದ್ಲು!

ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

ವಾಹನದ ಮೇಲೆ ಕರೊನಾ ಬೋರ್ಡ್; ಮಾಡುತ್ತಿದ್ದುದು ಮತ್ತೇರಿಸೋ ಕೆಲಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
