ತಮಿಳುನಾಡು:ಸರಿಯಾದ ರಸ್ತೆ ಇರದೆ ಆ್ಯಂಬುಲೆನ್ಸ್ ಅರ್ಧಕ್ಕೇ ನಿಂತ ಕಾರಣ ದಿಕ್ಕುತೋಚದ ತಾಯಿ, ಬಳಿಕ ಮಗುವನ್ನು 6 ಕಿ.ಮೀ. ದೂರ ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದಾಗ್ಯೂ ಚಿಕಿತ್ಸೆ ವಿಳಂಬವಾದ್ದರಿಂದ ಮಗುವನ್ನು ಬದುಕಿಸಿಕೊಳ್ಳಲು ಆಗಲಿಲ್ಲ.
ತಮಿಳುನಾಡಿನ ವೆಲ್ಲೂರ್​ನ ಅಣ್ಣೈಕಟ್ಟು ಸಮೀಪ ಈ ಪ್ರಕರಣ ನಡೆದಿದೆ. ಮಹಿಳೆಯೊಬ್ಬರು ತನ್ನ 18 ತಿಂಗಳ ಮಗುವಿಗೆ ಹಾವು ಕಚ್ಚಿದ್ದರಿಂದ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಮುಂದೆ ಸರಿಯಾದ ರಸ್ತೆ ಇರದ್ದರಿಂದ ಆ್ಯಂಬುಲೆನ್ಸ್ ಚಾಲಕ ಮಾರ್ಗಮಧ್ಯೆಯೇ ನಿಲ್ಲಿಸಿದ್ದ. ನಂತರ ಈಕೆ ಬೈಕೊಂದರಲ್ಲಿ ಮಗುವನ್ನು 6 ಕಿ.ಮೀ. ದೂರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿದ್ದರಿಂದ ಚಿಕಿತ್ಸೆ ಫಲಿಸದೆ ಮಗು ಸಾವಿಗೀಡಾಗಿದೆ.
ಇದನ್ನೂ ಓದಿ:ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್
ಬೆಟ್ಟದ ಬುಡದಲ್ಲಿ ಮಿನಿ ಆ್ಯಂಬುಲೆನ್ಸ್ ಲಭ್ಯವಿತ್ತು, ಸಂಬಂಧಪಟ್ಟವರು ಆಶಾ ಕಾರ್ಯಕರ್ತರನ್ನು ಸಂಪರ್ಕಿಸಿದ್ದರೆ ಅವರು ಬಂದು ಪ್ರಥಮ ಚಿಕಿತ್ಸೆ ನೀಡಿ ನೆರವಾಗುತ್ತಿದ್ದರು. ಆದರೆ ಅವರು ಹಾಗೆ ಮಾಡದೆ ಮಗುವನ್ನು ಬೈಕ್​ನಲ್ಲಿ ಕರೆದೊಯ್ದರು ಎಂಬುದಾಗಿ ವೆಲ್ಲೂರ್ ಕಲೆಕ್ಟರ್​ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಒಂಟಿಯಾಗಿದ್ದ, 3 ಮಕ್ಕಳ ವೃದ್ಧತಾಯಿ ಕೋಣೆಯಲ್ಲಿ ಶವವಾಗಿ ಪತ್ತೆ!; ಪ್ರಕರಣ ಸಂಬಂಧ 5 ತಂಡಗಳ ರಚನೆ
ಸುಮಾರು 1,500 ಮಂದಿ ಇರುವ ಈ ಪ್ರದೇಶಕ್ಕೆ ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಸೂಕ್ತ ರಸ್ತೆ ವ್ಯವಸ್ಥೆಗಾಗಿ ಅರಣ್ಯ ಇಲಾಖೆಯ ಅನುಮತಿಗಾಗಿ ಆನ್​ಲೈನ್ ಅರ್ಜಿ ಸಲ್ಲಿಸಲಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅಣ್ಣೈಕಟ್ಟು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. –ಏಜೆನ್ಸೀಸ್
ಲಾರಿಯೊಳಕ್ಕೇ ಸಿಲುಕಿತು ಅರ್ಧ ಕಾರು, 6 ಮಂದಿ ಸ್ಥಳದಲ್ಲೇ ಸಾವು: ಭೀಕರತೆಗೆ ಎದೆ ನಲುಗಿತು ಎಂದ ಸಿಎಂ, ಪರಿಹಾರ ಘೋಷಣೆ

ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
