ಒಡಿಷಾ:ಅಮ್ಮ ಎಂದರೇನೇ ಹಾಗೆ. ಮಕ್ಕಳಿಗೆ ಏನಾದರೂ ಆದಾಗ ಆಕೆಯಷ್ಟು ಮರುಗುವವರು, ಮಿಡಿಯುವವರು ಇನ್ಯಾರೂ ಇರುವುದಿಲ್ಲ. ಮಕ್ಕಳಿಗಾಗಿ ಅಮ್ಮ ಅದೆಂಥ ರಿಸ್ಕ್​ ಬೇಕಿದ್ದರೂ ತೆಗೆದುಕೊಳ್ಳುತ್ತಾಳೆ. ಅಗತ್ಯ ಬಿದ್ದರೆ ತನ್ನ ಜೀವವನ್ನೂ ಲೆಕ್ಕಿಸದೆ ಸಹಾಯಕ್ಕೂ ಧುಮುಕುತ್ತಾಳೆ. ಅಂಥದ್ದೇ ಒಂದು ಮಹಾತಾಯಿಯ ಕುರಿತ ಸುದ್ದಿ ಇದು.
ಅಷ್ಟಕ್ಕೂ ಇದು ಗೋಮಾತೆಯೊಂದರ ಮಾತೃಪ್ರೇಮದ ಅನಾವರಣ. ತನ್ನ ಕರುವೊಂದು ಗಾಯಗೊಂಡಾಗ ಅದು ನಡೆದುಕೊಂಡ ರೀತಿ ಇದೀಗ ಜಗತ್ತಿನ ಗಮನ ಸೆಳೆಯಲಾರಂಭಿಸಿದ್ದು, ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂಥದ್ದೊಂದು ಘಟನೆ ಒಡಿಷಾದಲ್ಲಿ ಕಂಡುಬಂದಿದೆ.
ಕರುವೊಂದಕ್ಕೆ ವಾಹನವೊಂದು ಡಿಕ್ಕಿ ಹೊಡೆದು ಅದು ತೀವ್ರ ಗಾಯಕ್ಕೊಳಗಾಗಿತ್ತು. ಅದರ ಪಕ್ಕದಲ್ಲೇ ಇದ್ದ ಗೋಮಾತೆ ಅದನ್ನು ನೋಡಿ ಮರುಗುತ್ತಿತ್ತು. ಆ ಸನ್ನಿವೇಶವನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಆ ಕರುವನ್ನು ತಳ್ಳುಗಾಡಿಯೊಂದರಲ್ಲಿ ಹಾಕಿಕೊಂಡು ಜಿಲ್ಲಾ ಪಶುವೈದ್ಯ ಕೇಂದ್ರಕ್ಕೆ ಕರೆದೊಯ್ದರು.
ಇದನ್ನೂ ಓದಿ:ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!
ಹೀಗೆ ಗಾಯಗೊಂಡ ಕರುವನ್ನು ಸ್ಥಳೀಯರು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಸುಮ್ಮನಿರದ ತಾಯಿಗೋವು ಆ ಗಾಡಿಯನ್ನು ಹಿಂಬಾಲಿಸಿದೆ. ಗಾಡಿಯ ವೇಗ ಹೆಚ್ಚಿದರೂ ಹಿಂಬಾಲಿಸಿದ ಗೋಮಾತೆ, ಹೆಚ್ಚೂಕಡಿಮೆ ಮೂರು ಕಿಲೋಮೀಟರ್ ದೂರ ಓಡಿದೆ. ಗಾಯಗೊಂಡ ತನ್ನ ಕರುವಿಗಾಗಿ ಮರುಗಿದ ಆ ಗೋಮಾತೆಯ ಮಾತೃಪ್ರೇಮದ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆ ವಿಡಿಯೋ ಮತ್ತಷ್ಟು ವೈರಲ್ ಆಗುತ್ತಿದೆ. ಮತ್ತೊಂದೆಡೆ ಗಾಯಾಳು ಕರುವಿನ ರಕ್ಷಣೆಗಾಗಿ ಧಾವಿಸಿದ ಸ್ಥಳೀಯರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಆ ಕರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಮಾತೃಪ್ರೇಮದ ಅನಾವರಣವಿವರಗಳಿಗೆhttps://t.co/YaFZZbZDD9ನೋಡಿpic.twitter.com/MxVdrrXbSO
— Vijayavani (@VVani4U)December 22, 2020

ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

ವಾಟರ್​ ಟ್ಯಾಂಕ್​ನಲ್ಲಿದ್ದವು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!

ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seven =
Remember me
