ಪಶ್ಚಿಮ ಬಂಗಾಳ:ಹೆಣ್ಣಾನೆಯೊಂದು ತನ್ನ ಮರಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಕ್ಕೊಳಗಾಗಿ ಇಬ್ಬರ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ವೃದ್ಧರು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಇಂಟರ್‌ಸಿಟಿ ರ‍್ಯಾಪಿಡ್ ರೈಲಿಗೆ ಚಾಲನೆ ನೀಡಲಿರುವ ನರೇಂದ್ರ ಮೋದಿ- ಈ ರೈಲಿನ ವಿಶೇಷತೆಗಳೇನು ಗೊತ್ತಾ?
ಕೆಂಡಾಮಂಡಲಗೊಂಡ ಹೆಣ್ಣಾನೆ ನಯಾಗ್ರಾಮದ ಚಂದಬಿಲಾ ಅರಣ್ಯ ವ್ಯಾಪ್ತಿಯ ಜನಪ್ರಿಯ ರಾಮೇಶ್ವರ ದೇವಸ್ಥಾನದ ಬಳಿ ಖಾಲಿ ನಿಂತಿದ್ದ ಬಸ್, ಮೋಟಾರ್ ಸೈಕಲ್ ಮತ್ತು ಹಲವಾರು ಮನೆಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಇಬ್ಬರು ವೃದ್ಧರು ಆನೆಯ ಕೋಪಕ್ಕೆ ತುತ್ತಾಗಿದ್ದು, ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇಬ್ಬರು ವ್ಯಕ್ತಿಗಳ ಸಾವಿಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 60 ವರ್ಷದ ಇಬ್ಬರು ವೃದ್ಧರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದರೊಟ್ಟಿಗೆ ಹಾನಿಗೊಳಗಾದ ಮನೆಗಳನ್ನು ಸರ್ಕಾರ ದುರಸ್ತಿ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ:ಉಳಿತಾಯ ಹೆಚ್ಚಿಸಲು 14 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ ನೋಕಿಯಾ
ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಅಧಿಕಾರಿಗಳು, ಮರಿಯ ಶವವನ್ನು ನೋಡಲು ಅಲ್ಲಿಗೆ ಹೋದ ಜನರ ಗುಂಪಿನ ಮೇಲೆ ತಾಯಿ ಆನೆ ದಾಳಿ ಮಾಡಿದೆ. ದಾಳಿಯಲ್ಲಿ ಸಿಲುಕಿದ ಇಬ್ಬರನ್ನು ನೆಲಕ್ಕೆ ಬಡಿದು ಕೊಂದಿದೆ ಎಂದು ತಿಳಿಸಿದ್ದಾರೆ. ಮೃತರನ್ನು ನಯಾಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ದೇಲ್‌ಬಾರ್ ಗ್ರಾಮದ ನಿವಾಸಿ ಅನಂತ ಜನ (60) ಮತ್ತು ಶಶಧರ್ ಮಹಾತಾ ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).
ಹೊರಬಿತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಅಧಿಕೃತ ರಿಲೀಸ್​ ಡೇಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eight =
Remember me
