ನವದೆಹಲಿ:ಅಮ್ಮನ ಪ್ರೀತಿ ಎಂದರೆ ಹಾಗೆ ಅದು. ವರ್ಣಿಸಲು ಸಾಧ್ಯವಿಲ್ಲದ್ದು. ಅಮ್ಮನ ಪ್ರೀತಿ ಎಲ್ಲ ಪ್ರಾಣಿಗಳಲ್ಲೂ ಕಾಣಲು ಸಾಧ್ಯ. ಇಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಈ ವಿಡಿಯೋ ನಿಮಗೂ ಸಂತಸ ತರುವುದು ಗ್ಯಾರಂಟಿ. ಇದನ್ನು ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಪುಟಾಣಿ ಆನೆ ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಅದಕ್ಕೆ ಅಮ್ಮ ಆನೆ ಸಹಾಯ ಮಾಡುತ್ತಿದೆ. ಕಾಲಿನಲ್ಲಿ ತಳ್ಳಿ ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವ ಮರಿಗೆ ಸೊಂಡಿಲಿನಿಂದ ಎತ್ತಿ ಹಿಡಿದು ನಿಲ್ಲಿಸುತ್ತದೆ.
ಮನಮೋಹಕವಾದ ಈ ವಿಡಿಯೋವನ್ನು ಹಂಚಿಕೊಂಡಿರುವ ಅರಣ್ಯಾಧಿಕಾರಿ ಕಸ್ವಾನ್​, ಆ ಪುಟಾಣಿ ಆನೆ ತನ್ನ ಸಣ್ಣ ಕಾಲುಗಳ ಮೇಲೆ ನಿಲ್ಲಲು ತಾಯಿ ಅವನಿಗೆ ಸಹಾಯ ಮಾಡುವ ಸುಂದರ ಕ್ಷಣವಿದು. ಆನೆ ಮರಿ ಜನನವು ಇಡೀ ಗಜರಾಜನ ಕುಟುಂಬಕ್ಕೆ ಪ್ರಮುಖ ಕಾರ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಚೆಂದನೆಯ ವಿಡಿಯೋಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ತಮ್ಮ ಸಂತಸವನ್ನೂ ಹಂಚಿಕೊಂಡಿದ್ದಾರೆ. ಇದು ನನ್ನ ಇಡೀ ದಿನವನ್ನು ಸಂತಸದಲ್ಲಿಟ್ಟಿತು ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು ಸೋ ಕ್ಯೂಟ್​ ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನನ್ನಿಸಿತು?
https://twitter.com/ParveenKaswan/status/1235837804967391233?s=20
VIDEO| ಮಣ್ಣಿನಡಿಯಲ್ಲೇ ಹೊಂಚು ಹಾಕಿ ಬೇಟೆಯಾಡುವ ಆಫ್ರಿಕನ್​​ ಸ್ಪೈಡರ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
