ಅಹಮದಾಬಾದ್​:ಗರ್ಭಿಣಿಯೊಬ್ಬಳು ತನ್ನ ಅತ್ತೆಯ ಮೇಲೆ ರಾಡ್​ನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.
ರೇಖಾ ಅಗರ್ವಾಲ್​ (52) ಮೃತ ದುರ್ದೈವಿ. ಆರೋಪಿ ನಿಖಿತಾ ಅಗರ್ವಾಲ್​ (29) ಅತ್ತೆಯನ್ನು ಕೊಲೆ ಮಾಡಿ, ಇಡೀ ಪ್ರಕರಣವನ್ನು ಮುಚ್ಚಿಹಾಕಲು ಆಕೆಯ ಶವವನ್ನು ಸುಟ್ಟು ಹಾಕಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕಳೆದ ಮಂಗಳವಾರ ನಡೆದಿದೆ.
ಮೇಲ್ನೋಟಕ್ಕೆ ಮಾವನೊಂದಿಗೆ ನಿಖಿತಾ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪವಿದೆ. ಗಂಡನೊಂದಿಗೆ ಮಲಗಿದ್ದನ್ನು ಮೃತ ರೇಖಾ (ಅತ್ತೆ) ನೋಡಿದ್ದು ನಿಖಿತಾ ಗರ್ಭಿಣಿ ಆಗುವುದಕ್ಕೆ ತನ್ನ ಗಂಡನೇ ಕಾರಣವೆಂದು ಸೊಸೆಯ ವಿರುದ್ಧ ಮಾತನಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ನಂಬಿದ್ದಾರೆ.
ಮನೆಯಲ್ಲಿ ಜಗಳ ನಡೆಯುತ್ತಿದೆ ಎಂದು ತಂದೆ ಹೇಳಿದ್ದನ್ನು ಕೇಳಿ ಮಗ ದೀಪಕ್​ ಗುಜರಾತ್​ನ ಗೋಟಾದಲ್ಲಿರುವ ತಮ್ಮ ಮನೆಗೆ ಓಡೊಡಿ ಬರುತ್ತಾನೆ. ಬಾಗಿಲು ಹಾಕಿರುವುದನ್ನು ನೋಡಿ ಕಿಟಕಿ ಹತ್ತಿ ಮನೆಯೊಳಗೆ ಬರಲು ಯತ್ನಿಸುತ್ತಾನೆ. ಬಾಗಿಲು ತೆರೆಯುವ ಪತ್ನಿ, ಬೆಡ್​ರೂಮ್​ನಲ್ಲಿ ಲಾಕ್​ ಮಾಡಿರುವುದಾಗಿ ಹೇಳುತ್ತಾಳೆ. ನಂತರ ಬಾಗಿಲು ಮುರಿದು ಒಳಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ, ದೇಹ ಭಾಗಶಃ ಸುಟ್ಟಿರುವ ಸ್ಥಿತಿಯಲ್ಲಿ ತಾಯಿಯ ಮೃತದೇಹ ದೀಪಕ್​ ಕಣ್ಣಿಗೆ ಬೀಳುತ್ತದೆ. ಅಲ್ಲಿಗೆ ಪತ್ನಿಯೇ ತಾಯಿಯನ್ನು ಕೊಂದಿರುವುದು ಗೊತ್ತಾಗುತ್ತದೆ.
ಇದನ್ನೂ ಓದಿ:ಕ್ರಿಶ್ಚಿಯನ್​ ಬಾಲಕಿ ಅಪಹರಿಸಿದ ಪಾಕ್​ ವ್ಯಕ್ತಿ: ಮದ್ವೆಯಾದ ಬಾಲಕಿ ಎರಡೇ ದಿನದಲ್ಲಿ ಯುವತಿಯಾದಳು!
ಕಳೆದ ಜನವರಿಯಲ್ಲಿ ಮದುವೆ ಆದಾಗಿನಿಂದ ಅತ್ತೆ-ಸೊಸೆ ಇಬ್ಬರು ಜಗಳ ಆಡುತ್ತಿದ್ದರು ಎಂದು ದೀಪಕ್​ ಹೇಳಿದ್ದಾನೆ. ತಾಯಿ ಶವವಿದ್ದ ಕೋಣೆಯನ್ನು ನೋಡಿದಾಗ ರಕ್ತ ಕಲೆಯಿದ್ದ ಕಬ್ಬಿಣದ ಸಲಾಕೆಯು ಸಹ ಹತ್ತಿರದಲ್ಲಿ ಪತ್ತೆಯಾಗಿದೆ. ಬಳಿಕ ಬೆಡ್​ರೂಮ್​ನಲ್ಲಿ ಇದ್ದ ದೀಪಕ್​ ಪತ್ನಿ ನಾನು ನಿಮ್ಮ ಅಮ್ಮನನ್ನು ಕೊಂದಿಲ್ಲ ಎಂದು ಪದೇಪದೆ ಹೇಳತ್ತಿದ್ದಳು ಎಂದು ದೀಪಕ್​ ತಿಳಿಸಿದ್ದಾರೆ.
ಬಳಿಕ ಪೊಲೀಸರಿಗೆ ಕರೆ ಮಾಡಿ ದೀಪಕ್​ ಮಾಹಿತಿ ನೀಡಿದ್ದಾರೆ. ಮನೆಗೆ ಆಗಮಿಸಿದ ಪೊಲೀಸರು ನಾಲ್ಕು ತಿಂಗಳ ಗರ್ಭಿಣಿಯಾಗಿರುವ ನಿಖಿತಾಳನ್ನು ಬಂಧಿಸಿ ಕೊರೆದೊಯ್ದಿದ್ದರು. ಇದೀಗ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ರೇಖಾ ಅಗರ್ವಾಲ್​ ಮೃತದೇಹ ಸೇರಿದಂತೆ ರಕ್ತದ ಕಲೆಗಳಿದ್ದ ಬೆಡ್​ಶೀಟ್​ ಮತ್ತು ಬಟ್ಟೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.(ಏಜೆನ್ಸೀಸ್​)
ಟರ್ಕಿಯಲ್ಲಿ ಭೂಕಂಪ: 24ಕ್ಕೇರಿದ ಸಾವಿನ ಸಂಖ್ಯೆ, ಮಾಲೀಕನ ರಕ್ಷಣೆಗೆ ಗೋಳಿಡುತ್ತಿರುವ ಶ್ವಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
