ಹೈದರಾಬಾದ್​:ಇತ್ತೀಚೆಗೆ ವಿಶಾಖಪಟ್ಟಣ ಹಡಗುಗಟ್ಟೆಯಲ್ಲಿ ಕ್ರೇನ್​ವೊಂದು ಉರುಳಿ ಮೃತಪಟ್ಟಿದ್ದ ಅಳಿಯನ ಸಂಸ್ಕಾರಕ್ಕೆ ಬರುತ್ತಿದ್ದ ಒಂದೇ ಕುಟುಂಬದ ಇಬ್ಬರು ಸೇರಿ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ.
ನಾಗಮಣಿ (48), ಇವರ ಸೊಸೆ ಲಾವಣ್ಯ (23) ಮತ್ತು ಕಾರುಚಾಲಕ ರೌಟೌ ದ್ವಾರಕ (23) ಮೃತರು. ವಿಶಾಖಪಟ್ಟಣದ ಹಿಂದೂಸ್ತಾನ್​ ಹಡಗುಗಟ್ಟೆ ನಿಯಮಿತದಲ್ಲಿ ​ (ಎಚ್​ಎಸ್​ಎಲ್​) ಬೃಹತ್​ ಕ್ರೇನ್​ ಉರುಳಿದ ಪರಿಣಾಮ ಭಾಸ್ಕರ್​ ರಾವ್​ (35) ಮೃತಪಟ್ಟಿದ್ದರು. ಇವರು ಖಾಸಗಿ ಕಂಪನಿಯ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಉರುಳಿದ ಕ್ರೇನ್​ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!
ಇವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ ಖರಗ್​ಪುರ್​ನಿಂದ ನಾಗಮಣಿ ತಮ್ಮ ಕುಟುಂಬ ವರ್ಗದವರೊಂದಿಗೆ ವಿಶಾಖಪಟ್ಟಣಕ್ಕೆ ಬರುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರು ಶ್ರೀಕಾಕುಲಂ ಜಿಲ್ಲೆಯ ಕಂಚಿಲಿ ಎಂಬಲ್ಲಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ನಾಗಮಣಿ, ಲಾವಣ್ಯ ಮತ್ತು ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಮಣಿಯ ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಕೂಡ ಗಾಯಗೊಂಡಿದ್ದು, ಶ್ರೀಕಾಕುಲಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಿದ್ದಾರೆ. ವಿಶಾಖಪಟ್ಟಣದ ಹಿಂದುಸ್ಥಾನ್​ ಹಡಗುಟ್ಟೆ ನಿಯಮಿತದಲ್ಲಿ ಶನಿವಾರ ಬೃಹತ್​ ಕ್ರೇನ್​ ಉರುಳಿ ಒಟ್ಟು 11 ಮಂದಿ ಮೃತಪಟ್ಟಿದ್ದರು.
ಸಂದರ್ಶನದಲ್ಲಿ ಗರ್ಲ್‌ಫ್ರೆಂಡೇ ಇಲ್ಲ ಎಂದಿದ್ದ: ಲೈವ್‌ ಷೋನಲ್ಲಿ ಅರೆಬೆತ್ತಲೆ ಹುಡುಗಿಯಿಂದ ಸಿಕ್ಕಿಬಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 1 =
Remember me
