ಇಂಫಾಲ್:ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮುಂದುವರೆದಿದ್ದು, ಪ್ರತಿಭಟನಾ ನಿರತರು ಎಂಟು ವರ್ಷದ ಬಾಲಕ, ಆತನ ತಾಯಿ ಸೇರಿದಂತೆ ಮೂವರನ್ನು ಜೀವಂತ ಸುಟ್ಟು ಹಾಕಿರುವ ಘಟನೆ ರಾಜ್ಯ ರಾಜಧಾನಿ ಇಂಫಾಲ್​ನಲ್ಲಿ ನಡೆದಿದೆ.
ಘಟನೆಯೂ ಭಾನುವಾರ ಸಂಜೆ ಇಂಫಾಲ್​ನ ಐರೋಸೆಂಬಾ ಎಂಬ ಪ್ರದೇಶದಲ್ಲಿ ನಡೆದಿದ್ದು, ಗಲಭೆಯಲ್ಲಿ ಗುಂಡೇಟು ತಿಂದಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ನಿಂತಿದ್ದ ಲಾರಿಗೆ ಆಂಬ್ಯುಲೆನ್ಸ್​​ ಡಿಕ್ಕಿ; ಶವ ಕೊಂಡೊಯ್ಯುತ್ತಿದ್ದವರು ಮಸಣ ಸೇರಿದರು
ಮೃತರನ್ನು ಟಾನ್ಸಿಂಗ್ ಹ್ಯಾಂಗ್ಸಿಂಗ್ (8). ಮೀನಾ(45), ಲಿಡಿಯಾ ಲೌರೆಂಬಮ್​(37) ಎಂದು ಗುರುತಿಸಲಾಗಿದ್ದು, ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿದ್ದ ಆಶ್ರಯ ಪಡೆದಿದ್ದ ಬಾಲಕ ಹೊರಬಂದ ವೇಳೆ ಆತನ ಮೇಲೆ ದಾಳಿಯಾಗಿದೆ. ಕೂಡಲೇ ಅಧಿಕಾರಿಗಳು ಗಾಯಾಳುವನ್ನು ಆಂಬ್ಯುಲೆನ್ಸ್​ ಮೂಲಕ ಕಳುಹಿಸಿಕೊಟ್ಟಿದ್ದಾರೆ.
ಕೆಲ ದೂರದವರೆಗೆ ಆಂಬ್ಯುಲೆನ್ಸ್​ ಬೆಂಗಾವಲಾಗಿ ಬಂದ ಅಸ್ಸಾಂ ರೈಫಲ್​ ಸಿಬ್ಬಂದಿ ಸೂಕ್ಷ್ಮ ಪ್ರದೇಶ ದಾಟಿದ ಬಳಿಕ ವಾಪಸ್​ ಆಗಿದೆ. ರೈಫೈಲ್ಸ್ ಭದ್ರತಾ ವಾಹನ ಮರಳಿದ ಕೆಲ ಹೊತ್ತಲ್ಲೇ ಆಂಬ್ಯುಲೆನ್ಸ್ ಮೇಲೆ ದಾಳಿಯಾಗಿದ್ದು ಎಂಟು ವರ್ಷದ ಬಾಲಕ, ಆತನ ತಾಯಿ ಸೇರಿದಂತೆ ಮೂವರನ್ನು ಸಜೀವ ದಹನವಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + nineteen =
Remember me
