ಚಿಕ್ಕಬಳ್ಳಾಪುರ:ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಬೊಗಸೆ ಕಂಗಳಲ್ಲಿ ದಾಂಪತ್ಯದ ಜೀವನ ಎದುರು ನೋಡುತ್ತಿದ್ದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರ ಸೇರಿ ನಾಲ್ವರು ಧಾರಣವಾಗಿ ಕೊಂದಿದ್ದಾರೆ.
ತಾಯಿ ಮತ್ತು ಸಂಬಂಧಿಕರ ಕ್ರೌರ್ಯಕ್ಕೆ ಬಲಿಯಾದ ಹೆಣ್ಣುಮಗಳೇ ಆಂಧ್ರದ ಹಿಂದೂಪುರ ತಾಲೂಕಿನ ತೂಮಕುಂಟೆಯ ಸಂಧ್ಯಾ(19). ಜೂ.26 ರಂದು ಗೌರಿಬಿದನೂರು ತಾಲೂಕಿನ ಹುಲಿಕುಂಟೆಯ ಗೋಕುಂಟೆಯಲ್ಲಿ ಸಂಧ್ಯಾಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಶವದ ಜಾಡುಹಿಡಿದ ಪೊಲೀಸರು ಕೊಲೆಯ ರಹಸ್ಯ ಭೇದಿಸಿದ್ದು, ಕುಟುಂಬದ ಪ್ರತಿಷ್ಠೆಗಾಗಿ ಮಗನೊಂದಿಗೆ ಸೇರಿ ತಾಯಿಯೇ ಮಗಳನ್ನು ಕೊಂದಿರುವ ರಹಸ್ಯ ಬಯಲಾಗಿದೆ.ಇದನ್ನೂ ಓದಿರಿನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ
ಘಟನೆ ವಿವರ:ಸಂಧ್ಯಾಗೆ ಮನೆಯಲ್ಲಿ ಮದುವೆ ಮಾಡಲು ಕುಟುಂಬಸ್ಥರು ಬಯಸಿದ್ದರು. ಇದಕ್ಕೆ ಆಕೆ ಒಪ್ಪುತ್ತಿರಲಿಲ್ಲ. ಅಪರಾಧ ಪ್ರಕರಣ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಸಂಧ್ಯಾ, ಆತನನ್ನೇ ಮದುವೆ ಆಗಲು ಪಟ್ಟು ಹಿಡಿದಿದ್ದಳು.
ಇದರಿಂದ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದು ಭಾವಿಸಿದ ತಾಯಿ ರಾಮಾಂಜಿನಮ್ಮ (38) ಮತ್ತು ಅಣ್ಣ ಅಶೋಕ್(21), ಸಂಬಂಧಿಕರಾದ ಗೌರಿಬಿದನೂರು ತಾಲೂಕಿನ ರೆಡ್ಡಿದ್ಯಾವರಹಳ್ಳಿಯ ನೇತ್ರಾವತಿ(19) ಮತ್ತು ಬಾಲಕೃಷ್ಣ (28) ಒಟ್ಟು ನಾಲ್ವರು ಸೇರಿ ಸಂಧ್ಯಾಳ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಸಂಧ್ಯಾಳ ಕತ್ತುಹಿಸುಕಿ ಸಾಯಿಸಿದ ಬಳಿಕ ಮೃತದೇಹಕ್ಕೆ ದೊಡ್ಡಕಲ್ಲನ್ನು ವೈರಿನಿಂದ ಕಟ್ಟಿ ಗೌರಿಬಿದನೂರಿನ ಹುಲಿಕುಂಟೆಯ ಗೋಕುಂಟೆಯಲ್ಲಿ ಬಿಸಾಕಿದ್ದರು.
ಇದನ್ನೂ ಓದಿರಿಕುರಿಗಳಿಗೂ ಕ್ವಾರಂಟೈನ್​, ಮಾಂಸ ಪ್ರಿಯರೇ ಜಾಗ್ರತೆ!
ಕೊಳೆತ ಸ್ಥಿತಿಯಲ್ಲಿ ಸಂಧ್ಯಾಳ ಶವ ಪತ್ತೆಯಾಗುತ್ತಿದ್ದಂತೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ವೃತ್ತ ನಿರೀಕ್ಷಕ ರವಿ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್​ಸ್ಪೆಕ್ಟರ್ ಮೋಹನ್ ಸೇರಿ ಪೊಲೀಸ್ ಸಿಬ್ಬಂದಿ ತ್ವರಿತವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.
https://www.vijayavani.net/cheating-by-husband-to-wife-the-womans-struggle-for-justice/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
