ಮೀರತ್:ಪಾಪಿ ಮಗನಿದ್ದರೂ ಕೆಟ್ಟ ತಾಯಿ ಇಲ್ಲ ಎಂಬ ಗಾದೆ ಮಾತಿದೆ. ಆದರೆ ಈ ಮಹಿಳೆ ಮಾತ್ರ ತನ್ನ ಮಕ್ಕಳನ್ನೇ ಪ್ರಿಯಕರನ ಜತೆ ಸೇರಿ ಕೊಂದಿದ್ದಾಳೆ. ಈ ಪಾಪಿ ತಾಯಿ 10 ವರ್ಷದ ಬಾಲಕ ಮತ್ತು ಆತನ 6 ವರ್ಷದ ಸಹೋದರಿಯನ್ನು ತನ್ನ ಪ್ರಿಯಕರನ ಸಹಾಯದಿಂದ ಬುಧವಾರ ಕೊಲೆ ಮಾಡಿದ್ದಾಳೆ.
ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಆದರೂ, ಕಾಲುವೆಗೆ ಎಸೆಯಲಾದ ಮಕ್ಕಳ ಶವಗಳನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಮಾತಲ್ಲೇ ಹೇಳುವುದಾದರೆ “ಮಾರ್ಚ್ 22 ರಂದು 10 ವರ್ಷದ ಬಾಲಕ ಮತ್ತು 6 ವರ್ಷದ ಬಾಲಕಿಯನ್ನು ಅವರ ತಾಯಿ ಮತ್ತು ಆಕೆಯ ಪ್ರಿಯಕರ ಕೊಲೆ ಮಾಡಿ ಶವಗಳನ್ನು ಕಾಲುವೆಗೆ ಎಸೆದಿದ್ದಾರೆ. ಮಕ್ಕಳು ಕಾಣೆಯಾದಾಗ, ಪ್ರಕರಣ ದಾಖಲಿಸಲಾಯಿತು ಮತ್ತು ತನಿಖೆಯ ಸಮಯದಲ್ಲಿ ಸಂಚು ಬಹಿರಂಗವಾಯಿತು.
ಬಾಲಕಿಯನ್ನು ಆಕೆಯ ಮನೆಯಲ್ಲೇ ಕೊಲೆ ಮಾಡಲಾಗಿದ್ದು ಆಕೆಯ ಸಹೋದರನನ್ನು ಅವರ ನೆರೆಹೊರೆಯ ಮನೆಯಲ್ಲಿ ಕೊಲೆ ಮಾಡಲಾಗಿದೆ” ಪೊಲೀಸ್ ಮೂಲಗಳ ಪ್ರಕಾರ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಈ ಕೊಲೆಗಳಲ್ಲಿ ಭಾಗಿಯಾಗಿದ್ದು ಅವರೆಲ್ಲರನ್ನೂ ಬಂಧಿಸಲಾಗಿದೆ.
ಬಾಲಕಿಯನ್ನು ತನ್ನ ಸ್ವಂತ ಮನೆಯಲ್ಲಿ ಮತ್ತು ಹುಡುಗನನ್ನು ನೆರೆಹೊರೆಯ ಮನೆಯಲ್ಲಿ ಕೊಲ್ಲಲಾಯಿತು. ಮಕ್ಕಳ ಮೃತ ದೇಹಗಳನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್.ಪಿ ಪಿಯೂಷ್ ತಿಳಿಸಿದ್ದಾರೆ.(ಏಜೆನ್ಸೀಸ್)
3 women and 3 men are involved in the murders. The girl was killed in her own home and the boy was killed in the neighbour’s house. Dead bodies of the children not yet recovered. All the accused have been arrested: Piyush Singh, SP City (24/03)pic.twitter.com/8A2ds94UUD
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
