ಲಖನೌ:ಇಷ್ಟವಿಲ್ಲದಿರುವ ಮದುವೆಯನ್ನು ಮಾಡಿಕೊಳ್ಳಲು ಯಾರು ಒಪ್ಪುವುದಿಲ್ಲ. ಒಂದು ವೇಳೆ ಕುಟುಂಬದವರ ಬಲವಂತಕ್ಕೆ ಒಪ್ಪಿಕೊಂಡು ಮದುವೆಗ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎಂದಾಗ ಓಡಿ ಹೋಗಿರುವುದನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಉತ್ತರಪ್ರದೇಶದ ಕಾಸ್​ಗಂಜ್​​ನಲ್ಲಿ  ವಿಚಿತ್ರ ಘಟನೆ ನಡೆದಿದ್ದು. ವಧುವಿನ ತಾಯಿಯೊಟ್ಟಿಗೆ ವರನ ತಂದೆ ಓಡಿ ಹೋಗಿದ್ದಾರೆ. ಈ ಸುದ್ದಿ ಈಗ ಸಖತ್​ ಸೌಂಡ್​ ಮಾಡುತ್ತಿದೆ.
ಉತ್ತರಪ್ರದೇಶದ ಕಾಸ್​ಗಂಜ್​ ನಿವಾಸಿಗಳಾದ ಶಕೀಲ್‌ ಮತ್ತು ಅಸ್ಮಾ ಖಾತುನ್‌ ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಓಡಿ ಹೋಗಿದ್ದು, ಇದೀಗ ಪೊಲೀಸರು ಈ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಮದುವೆ ದಿನಾಂಕ ಚೇಂಜ್​ ಮಾಡ್ಬೇಡ ನಾನ್ ಬರ್ತೀನಿ! ತರುಣ್​ ಮುಂದೆ ದಚ್ಚು ಬಿಚ್ಚಿಟ್ರು ರಿಲೀಸ್​ ರಹಸ್ಯ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕಾಸ್​ಗಂಜ್​ ನಿವಾಸಿಗಳಾದ ಶಕೀಲ್​ ಮಗನೊಂದಿಗೆ ಅಸ್ಮಾಳ ಮಗಳಿಗೆ ಮದುವೆ ನಿಶ್ಚಯಿಸಲಾಗಿತ್ತು. ಸ್ಥಳೀಯರು ಹೇಳುವ ಪ್ರಕಾರ ಮದುವೆ ಮಾತುಕತೆಯ ನೆಪದಲ್ಲಿ ಶಕೀಲ್‌, ಅಸ್ಮಾಳ ಮನೆಗೆ ಹೋಗುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿಯಾಗಿದೆ. ಈ ವಿಚಾರ ತಿಳಿದರೆ ಸಮಸ್ಯೆಯಾಗುತ್ತದೆಂದು ಭಾವಿಸಿದ ಇವರಿಬ್ಬರು ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಓಡಿ ಹೋಗಿದ್ದಾರೆ. ಘಟನೆ ಸಂಬಂಧಿ ಅಸ್ಮಾಳ ಪತಿ ದೂರು ದಾಖಲಿಸಿದ್ದು, ಓಡಿ ಹೋಗಿರುವವರನ್ನು ಹುಡುಕಲು ವಿಶೇಷ ತಂಡ ರಚಿಸಲಾಗಿದೆ.
ವರದಿಗಳ ಪ್ರಕಾರ ಶಕೀಲ್‌ಗೆ 10 ಮತ್ತು ವಧುವಿನ ತಾಯಿಗೆ 6 ಮಕ್ಕಳಿದ್ದಾರೆ. ಆದ್ರೆ ಪ್ರೀತಿಯ ಬಲೆಗೆ ಬಿದ್ದ ಈ ಇಬ್ಬರು ಮಕ್ಕಳ ಜವಬ್ದಾರಿಯನ್ನೂ ಮರೆತು ಇದೀಗ ಮನೆ ಬಿಟ್ಟು ಓಡಿ ಹೋಗುವ ಮೂಲಕ ಸುದ್ದಿಯಾಗಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − eight =
Remember me
