ಪಾಟ್ನಾ:ದುಷ್ಕರ್ಮಿಗಳಿಂದ ಥಳಿತಕ್ಕೊಳಗಾಗಿ ಮೃತಪಟ್ಟ ಪೊಲೀಸ್ ಆಫೀಸರ್ ಅಶ್ವಿನ್ ಕುಮಾರ್ ​ ತಾಯಿ ಕೂಡ ಮಗನ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ಭಾನುವಾರ ನಡೆದಿದೆ.
ದರೋಡೆ ಪ್ರಕರಣ ಬೇದಿಸಲು ಬಿಹಾರದ ಕೃಷ್ಣಾಗಂಜ್ ಜಿಲ್ಲೆಯ ಪೊಲೀಸ್ ಇನ್ಸಪೆಕ್ಟರ್ ಅಶ್ಚಿನ್ ಕುಮಾರ್ (40) ಅವರು ಪಕ್ಕದ ಪಶ್ಚಿಮ ಬಂಗಾಳದಲ್ಲಿರುವ ಉತ್ತರ ದಿನಜಪುರ್ ಜಿಲ್ಲೆಯ ಪಂತಪಡಾ ಎಂಬ ಹಳ್ಳಿಗೆ ಶುಕ್ರವಾರ ರಾತ್ರಿ ಹೋಗಿದ್ದರು. ಈ ವೇಳೆ ಅಶ್ವಿನ್ ಕುಮಾರ್ ಅವರಿಗೆ ಅಲ್ಲಿನ ಸ್ಥಳೀಯ ಪೊಲೀಸರು ಸಹಕಾರ ಕೊಟ್ಟಿದ್ದಿಲ್ಲ ಎಂದು ಆರೋಪಿಸಲಾಗಿದೆ.
ಇದನ್ಣೂ ಓದಿ:ರಸಗೊಬ್ಬರ ಬೆಲೆ ಹೆಚ್ಚಳಕ್ಕೆ ಎಚ್​ಡಿ ಕುಮಾರಸ್ವಾಮಿ ತೀವ್ರ ವಿರೋಧ
ಕಳ್ಳರನ್ನು ಬೆನ್ನಟ್ಟಿ ಹಿಡಿಯುವಾಗ ಇನ್ಸಪೆಕ್ಟರ್ ಅಶ್ವಿನ್ ಕುಮಾರ್ ಅವರನ್ನು ಸುತ್ತುವರೆದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಅಶ್ವಿನ್ ಅವರ ತಾಯಿ ರುಕ್ಮಿಣಿಬಾಯಿ (65) ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಅಶ್ಚಿನ್ ಅವರ ಸಾವಿಗೆ ಕಾರಣರಾದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಿಹಾರದಲ್ಲಿ ತಲ್ಲಣ ಸೃಷ್ಟಿಸಿದೆ.
ಪಶ್ಚಿಮ ಬಂಗಾಳ ಹಿಂಸಾಚಾರ: ಮೌನ ಮುರಿದ ಗೃಹ ಸಚಿವ ಅಮಿತ್ ಶಾ

ಶಾಕಿಂಗ್ : ಯುವಕನ ಮರ್ಮಾಂಗವನ್ನು ಕತ್ತರಿಸಿದ ತೃತೀಯಲಿಂಗಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
