ದೆಹಲಿ:ಕಳೆದ ವಾರ ದೆಹಲಿಯ ತಿಲಕ್ ನಗರದಲ್ಲಿ ತಂದೆ ಮೃತಪಟ್ಟ ಬೆನ್ನಲ್ಲೇ ಹೆತ್ತ ತಾಯಿ ತನ್ನನ್ನು ಹಾಗೂ ತನ್ನ ಸಹೋದರಿಯನ್ನು ಬಿಟ್ಟುಹೋದ ಕಾರಣ, 10 ವರ್ಷದ ಬಾಲಕನೊಬ್ಬ ವಿಧಿಯಿಲ್ಲದೆ, ಕುಟುಂಬದ ನಿರ್ವಹಣೆಗಾಗಿ ಬೀದಿಬದಿಯಲ್ಲಿ ಎಗ್​ರೋಲ್ ವ್ಯಾಪಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಬಾಲಕ ಕಷ್ಟಪಟ್ಟು, ಯಾರ ಮೇಲೂ ಅವಲಂಬಿತನಾಗದೆ, ರಸ್ತೆಬದಿಯಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದನ್ನೂ ಓದಿ:ರೈಲಿನ ಮೇಲೆ ಮರ ಬಿದ್ದು ಲೋಕೋ ಪೈಲೆಟ್‌ಗೆ ಗಾಯ: ಇಲಾಖೆಯಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
ಬಾಲಕ ಪಟ್ಟ ಕಷ್ಟ ನೋಡಿದ ಬಾಲಿವುಡ್​ ನಟ ಅರ್ಜುನ್ ಕಪೂರ್ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಜಸ್ಪ್ರೀತ್​ ಸಿಂಗ್​ಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ದೆಹಲಿಯ ತಿಲಕ್ ನಗರದ 10 ವರ್ಷದ ಬಾಲಕ ಜಸ್ಪ್ರೀತ್ ಸಿಂಗ್​ನ ಕರುಳು ಹಿಂಡುವ ಕಥೆ ಕೇಳಿ ಭಾವುಕರಾದ ನೆಟ್ಟಿಗರು, ಇಂತಹ ತಾಯಿ ಯಾರಿಗೂ ಸಿಗಬಾರದು, ಇವರಿಗೆಲ್ಲಾ ಏಕೆ ಮಕ್ಕಳು, ಜೀವನ ಎಂದು ಕಿಡಿಕಾರಿದ್ದರು. ಆದರೆ, ಇದೀಗ ಹೊಸ ಟ್ವಿಸ್ಟ್​ ಎದುರಾಗಿದ್ದು, ಬಾಲಕನ ತಾಯಿ ವಿಡಿಯೋ ಮೂಲಕ ವಾಪಾಸ್ ಆಗಿದ್ದು, ಮಗನ ಬಗ್ಗೆ ಇರುವ ಕಾಳಜಿಯನ್ನು ಈ ರೀತಿ ಹಂಚಿಕೊಂಡಿದ್ದಾರೆ.
Remember the Viral Egg roll boy Jaspreet from Tilak Nagar whose Mother allegedly left him and his sister after the death of his Father. Now the Mother Simran Kaur shared her version of the story:Mother denied the allegation and termed it a conspiracy hatched by her In Laws…pic.twitter.com/wI17JqljWw
— NCMIndia Council For Men Affairs (@NCMIndiaa)May 13, 2024

ವಿಡಿಯೋದಲ್ಲಿ ಜಸ್ಪ್ರೀತ್ ತಾಯಿ ಸಿಮ್ರಾನ್ ಕೌರ್, ತನ್ನ ಮೇಲೆ ಕೇಳಿಬಂದ ಆರೋಪಗಳನ್ನು ತಳ್ಳಿಹಾಕಿದ್ದು, “ಇದೆಲ್ಲಾ ನನ್ನ ಅತ್ತೆ ಮನೆಯವರು ಮಾಡಿರುವ ಪಿತೂರಿ ಬಿಟ್ಟರೆ, ಮತ್ತೇನೂ ಅಲ್ಲ. ನನ್ನ ಮಗನ ಬಗ್ಗೆ ಅವರಿಗೆ ಕಾಳಜಿ ಇದ್ದಿದ್ದರೆ, ಏಕೆ ಅವನನ್ನು ರಸ್ತೆಬದಿ ವ್ಯಾಪಾರ ಮಾಡಲು ಬಿಡುತ್ತಿದ್ದರು? ನನ್ನ ಮಕ್ಕಳನ್ನು ನನ್ನ ವಶಕ್ಕೆ ನೀಡದಿದ್ದರೆ, ಶೀಘ್ರವೇ ಪೊಲೀಸ್ ಠಾಣೆ ಮೆಟ್ಟಿಲೇರಿ, ದೂರು ದಾಖಲಿಸುವೆ” ಎಂದು ಎಚ್ಚರಿಸಿದ್ದಾರೆ. ಸದ್ಯ ಇದು ಭಾರೀ ಗೊಂದಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್).
ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಪಕ್ಕಾ ಆರ್​ಸಿಬಿ ಪ್ಲೇಆಫ್​ಗೆ ಹೋಗೋದಿಲ್ಲ! ಹೇಗೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
