ಕೋಲ್ಕತ್ತಾ:‘ ಆಕೆಗ ಮಕ್ಕಳಿಲ್ಲ, ಮಗಳನ್ನು ಕಳೆದುಕೊಂಡ ನಮ್ಮ ನೋವು ಹೇಗೆ ಅರ್ಥವಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆ ತಾಯಿ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ರೈಲಿಗೆ ಸಿಲುಕಿದ ಮಹಿಳೆಯನ್ನು ಶರವೇಗದಲ್ಲಿ ಬಂದು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ: ರೋಚಕ ವೀಡಿಯೋ ವೈರಲ್.​.
ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ(ಆ.30)ಪಾಲ್ಗೊಂಡು ಮಾತನಾಡಿ, ಪ್ರತಿಭಟನಾ ನಿರತ ವೈದ್ಯರ ಮೇಲೆ ಎಫ್​ಐಆರ್​ ಹಾಕಿದರೆ ಅವರ ಭವಿಷ್ಯ ನಾಶವಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು ಈ ನಿಟ್ಟಿನಲ್ಲಿ ಸಂತ್ರಸ್ತೆಯ ತಾಯಿ ಕಿಡಿ ಕಾರಿದರು.
ಸಿಎಂ ಮಮತಾ ಹೇಳಿಕೆಯಿಂದ ನಮ್ಮ ಕುಟುಂಬ ಸದಸ್ಯರು ತುಂಬಾ ನೊಂದಿದ್ದೇವೆ. ನಾನು ಬಿಜೆಪಿ ವಿರುದ್ಧವೂ ಮಾತನಾಡಿದ್ದೇನೆ. ವೈದ್ಯರು ನ್ಯಾಯಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನನ್ನ ಬೆಂಬಲವಿದೆ. ಆದರೆ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ವೈದ್ಯರು ಪ್ರತಿಭಟನೆಗಿಳಿದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ಟೀಕಿಸಿದರು.
ವೈದ್ಯರ ಹತ್ಯೆಯ ನಂತರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಸಿಬ್ಬಂದಿಯ ವರ್ತನೆ ನಿರ್ಲಕ್ಷ್ಯದಿಂದ ಕೂಡಿತ್ತು. ತಮ್ಮ ಮಗಳು ಸತ್ತ ತಕ್ಷಣ ತಮಗೆ ಮಾಹಿತಿ ನೀಡಿಲ್ಲ. ಮಗಳ ಮೃತದೇಹವನ್ನು ತಕ್ಷಣ ನೋಡುವ ಅವಕಾಶವನ್ನೂ ನೀಡಿಲ್ಲ. ಸುಮಾರು 3 ಗಂಟೆ ಕಾಲ ನಮ್ಮನ್ನು ಆಸ್ಪತ್ರೆಯಲ್ಲಿ ಕಾಯಿಸಿದರು. ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಪ್ರಶ್ನಿಸಲಾಗಿದೆ. ಈ ವಿಚಾರವಾಗಿ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಟ್ರೈನಿ ವೈದ್ಯೆ ಸಾವಿನ ನಿಗೂಢತೆ ಇನ್ನೂ ಹೊರಬಂದಿಲ್ಲ. ಸಿಬಿಐ ತನಿಖೆ ನಡೆಸುತ್ತಿದ್ದರೂ ಅಸಲಿ ವಿಷಯ ಹೊರ ಬರುತ್ತಿಲ್ಲ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ಸಂತ್ರಸ್ತೆಯ ಪೋಷಕರು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತಿದ್ದಾರೆ.
‘ಅರ್ಧಗಂಟೆಯಲ್ಲಿ ಮೂರು ಬಾರಿ ಕರೆ ಮಾಡಿದ್ರು, ಶವ ನೋಡಲು 3ಗಂಟೆ ಸತಾಯಿಸಿದ್ರು’: ಕೋಲ್ಕತ್ತಾ ಟ್ರೈನಿ ವೈದ್ಯೆ ತಾಯಿ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 14 =
Remember me
