ಗೋರಖ್​ಪುರ್​:ಮೂರು ಮಕ್ಕಳ ತಾಯಿಯೊಬ್ಬಳು 8ನೇ ತರಗತಿ ವಿದ್ಯಾರ್ಥಿ ಜತೆ ಓಡಿ ಹೋಗಿದ್ದಾಳೆನ್ನಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯಾರು ಊಹಿಸಿರದ ಈ ಸುದ್ದಿ ರಾಜ್ಯಾದ್ಯಂತ ಜನರಲ್ಲಿ ಆಘಾತದ ಅಲೆ ಎಬ್ಬಿಸಿದೆ.
ಬಾಲಕನ ಕುಟುಂಬದವರು ಕ್ಯಾಂಪಿಯರ್‌ಗಂಜ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಈವರೆಗೂ ಇಬ್ಬರ ಸುಳಿವು ಪತ್ತೆಯಾಗಿಲ್ಲ.
ಇದನ್ನೂ ಓದಿರಿ:23ರ ಯುವಕನ ಜತೆ 41ರ ಮಹಿಳೆಯ ಲವ್ವಿಡವ್ವಿ: ಮಾಡಬಾರದ್ದನ್ನು ಮಾಡಿ ಪೊಲೀಸ್​ ಬಲೆಗೆ ಬಿದ್ದ ಜೋಡಿ!
29 ವರ್ಷದ ವಿವಾಹಿತ ಮಹಿಳೆ ಮತ್ತು 15 ವರ್ಷದ ಬಾಲಕ ಕಳೆದ ಬುಧವಾರ ಶಿವರಾತ್ರಿ ಜಾತ್ರೆಯಂದು ನಾಪತ್ತೆಯಾಗಿದ್ದಾರೆ. ಎರಡು ಕುಟುಂಬದವರು ಎಷ್ಟೇ ಹುಡುಕಾಡಿದರೂ ಗುರುವಾರದವರೆಗೂ ಇಬ್ಬರ ಸುಳಿವು ಪತ್ತೆಯಾಗದಿದ್ದಾಗ ಶುಕ್ರವಾರ ಸಂಜೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಲಗಳ ಪ್ರಕಾರ ಮಹಿಳೆ ಮತ್ತು ಬಾಲಕ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರ ನಡುವಿನ ವಯಸ್ಸಿನ ಅಂತರ ತುಂಬಾ ಇದ್ದಿದ್ದರಿಂದ ಯಾರು ಸಹ ಅವರ ಮೇಲೆ ಸಂಶಯ ಹೊಂದಿರಲಿಲ್ಲವಂತೆ. ಇಬ್ಬರು ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಪಾಲಕರು ಮಾಹಿತಿ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) 363 (ಅಪಹರಣಕ್ಕಾಗಿ ಶಿಕ್ಷೆ) ಮತ್ತು 365 ( ವ್ಯಕ್ತಿಯನ್ನು ಮಿತಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದ ರಹಸ್ಯವಾಗಿ ಮತ್ತು ತಪ್ಪಾಗಿ ಅಪಹರಿಸುವುದು) ಸೆಕ್ಷನ್​ ಅಡಿಯಲ್ಲಿ ಬಾಲಕ ಕುಟುಂಬ ಮಹಿಳೆ ವಿರುದ್ಧ ದೂರು ದಾಖಲಿಸಿದೆ.
ಈ ಬಗ್ಗೆ ಮಾತನಾಡಿರುವ ಕ್ಯಾಂಪಿಯರ್‌ಗಂಜ್​ ವೃತ್ತ ನಿರೀಕ್ಷಕ ರಾಹುಲ್​ ಭಟಿ, ಬಾಲಕನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ಅವರ ಜಾಡನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆಂದು ಹೇಳಿದ್ದಾರೆ.
ಇದನ್ನೂ ಓದಿರಿ:ಪರಿಸ್ಥಿತಿ ಕೈ ಮೀರಲು ಬಿಡಬಾರದು: ಪ್ರಶಾಂತ್​ ಸಂಬರಗಿಗೆ​ ಕಿಚ್ಚ ಸುದೀಪ್​ ಖಡಕ್​ ವಾರ್ನಿಂಗ್​..!
ಮಹಿಳೆಗೆ ಈಗಾಗಲೇ ಮದುವೆಯಾಗಿ ಮೂವರು ಪುಟ್ಟ ಮಕ್ಕಳಿದ್ದಾರೆ. ಕೆಲವು ದಿನಗಳಿಂದ ಗಂಡನ ಜತೆಯಲ್ಲಿ ಆಕೆಯ ವರ್ತನೆ ತುಂಬಾ ವಿಚಿತ್ರವಾಗಿತ್ತಂತೆ. ಸ್ವತಃ ಈ ಬಗ್ಗೆ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ. ಆದರೆ, ಈ ರೀತಿ ಮಾಡುತ್ತಾರೆಂದು ಯೋಚನೆ ಸಹ ಮಾಡಿರಲಿಲ್ಲ ಎಂದು ಮಹಿಳೆ ಪತಿ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಜಯಲಲಿತಾ ಸಾವಿಗೆ ಯಾರು ಹೊಣೆ? ಸ್ಫೋಟಕ ಹೇಳಿಕೆ ನೀಡಿದ ಸಿಎಂ ಪಳನಿಸ್ವಾಮಿ!

ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿದ್ದ ಯುವತಿಗೆ ಹಿಗ್ಗಾಮುಗ್ಗ ಥಳಿತ: ದುಪ್ಪಟ್ಟ ಕಿತ್ತೆಸೆದ ಕಿರಾತಕರು!

ಸಣ್ಣ ಹುಳಿತೇಗು ದೊಡ್ಡ ಸಮಸ್ಯೆಯಾದೀತು ಹುಷಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
