ನಾಗರಕೋಯಿಲ್:ತಾಯಿಯೊಬ್ಬಳು ತನ್ನ ಮಕ್ಕಳಿಬ್ಬರ ಮನವೊಲಿಸಿ ಅವರೊಂದಿಗೆ ಸಾವಿನ ಹಾದಿ ಹಿಡಿದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಅಂಜುಗ್ರಾಮಮ್​ನಲ್ಲಿ ನಡೆದಿದೆ.
ಮೃತರನ್ನು ಯೇಸುದಾಸ್​ ಅವರ ಪತ್ನಿ ಅನಿತಾ (45), ಪುತ್ರಿಯರಾದ ಸಹಾಯಾ ದಿವ್ಯಾ (19) ಮತ್ತು ಸಹಾಯಾ ಪೂಜಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಯೇಸುದಾಸನ್ ಅವರು ಗಲ್ಫ್​ ದೇಶದಲ್ಲಿ ಕೆಲಸ ಮಾಡುತ್ತಿರುವಾಗ 10 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಬಳಿಕ ಇಡೀ ಕುಟುಂಬದ ಜವಾಬ್ದಾರಿಯನ್ನು ಅನಿತಾ ಹೊತ್ತುಕೊಂಡಿದ್ದರು. ಆದಾದ್ಯೂ, ತನ್ನ ಗಂಡನ ಅಕಾಲಿಕ ಮರಣದ ಆಘಾತದಿಂದ ಉಂಟಾದ ಅನೇಕ ಆತಂಕದ ದಾಳಿಗಳಿಂದ ಅನಿತಾ ಅವರು ನಿರಂತರವಾಗಿ ಬಳಲುತ್ತಿದ್ದರು.
ಇದನ್ನೂ ಓದಿ:ಯುವರಾಜ್​ ಸಿಂಗ್​ ನಂತರ ಆ ಸ್ಥಾನಕ್ಕೆ ಯಾರೂ ಬರಲೇ ಇಲ್ಲ ಎಂದ ರೋಹಿತ್​ ಶರ್ಮ
ಅನಿತಾ ಅವರ ಹಿರಿಯ ಮಗಳು ದಿವ್ಯಾ, ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದರೆ, ಎರಡನೆಯವಳಾದ ಪೂಜಾ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ಬೆಳಗ್ಗೆ ಹಲವು ಗಂಟೆಗಳ ನಂತರವೂ ಮನೆಯ ಎಲ್ಲ ಬಾಗಿಲುಗಳು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿತು. ಬಳಿಕ ಮನೆಯ ಕಿಟಕಿಗಳನ್ನು ನೋಡಿದಾಗ ಮೂವರ ಮೃತದೇಹಗಳು ಮನೆಯ ಚಾವಣಿಯಲ್ಲಿ ನೇತಾಡುತ್ತಿರುವುದನ್ನು ಕಂಡು ನೆರೆಹೊರೆಯವರೇ ಆಘಾತಕ್ಕೆ ಒಳಗಾದರು.
ತಕ್ಷಣ ಈ ಮಾಹಿತಿಯನ್ನು ಅಂಜುಗ್ರಾಮಮ್​ ಪೊಲೀಸರಿಗೆ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಅಸರಿಪಲ್ಲಮ್​ ಮೆಡಿಕಲ್​​ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಪೋಲೀಸರ ಪ್ರಕಾರ ಯೇಸುದಾಸನನ್ನು ಕಳೆದುಕೊಂಡ ದುಃಖದಲ್ಲಿ ಬದುಕುವುದಕ್ಕಿಂತ ತಮ್ಮ ಜೀವನವನ್ನು ಕೊನೆಗೊಳಿಸುವುದೇ ಉತ್ತಮ ಅಂತಾ ಅನಿತಾ, ಮಕ್ಕಳಿಬ್ಬರ ಮನವೊಲಿಸಿರಬಹುದು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಬಾವಿಗೆ ಬಿದ್ದ ಕಾಡೆಮ್ಮೆ ಮರಿ; ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಒಂದೇ ಭಾವಚಿತ್ರ ಬಳಸಿ 658 ಸಿಮ್​ ವಿತರಣೆ: ಎಲ್ಲೆಂದರಲ್ಲಿ ಫೋಟೋ ಕೊಡುವ ಮುನ್ನ ಎಚ್ಚರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 16 =
Remember me
