ನವದೆಹಲಿ:ಕೈಯಲ್ಲಿ ಫೋನ್​ ಇದ್ದರೆ ಜಗತ್ತನ್ನೆ ಮರೆಯುವ ಕಾಲ ಇದು. ಫೋನ್​ ಅನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಉಪಯೋಗ ಇದೆ, ಹಾಗೇಯೆ ಅತಿಯಾದ ಫೋನ್​ ಬಳಕೆ ಕೂಡಾ  ಜನರ ಜೀವನಕ್ಕೆ ಅಪಾಯ ತರಬಹುದು. ಇಂಥಹದ್ದೆ ಒಂದು ಅಪಾಯದಿಂದ ಎಚ್ಚರ ಇರಿ ಎಂದು ಹೇಳುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?:ಮನೆಯಲ್ಲಿ ತಾಯಿಯೊಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದಾರೆ. ಮಗುವೊಂದು ನೆಲದ ಮೇಲೆ ಆಟವಾಡುತ್ತಿದೆ. ಸ್ವಲ್ಪ ಸಮಯದ ನಂತರ ಅವಳು ತರಕಾರಿಗಳನ್ನು ಕತ್ತರಿಸಿದಳು. ಆಗಲೂ ಫೋನ್ ಮಾತಾಡುತ್ತಲೇ ಇತ್ತು. ಮಗು ಆಟವಾಡುತ್ತಿದೆ. ತರಕಾರಿ ಇರುವ ಬುಟ್ಟೆ ಎಂದು ಭಾವಿಸಿ  ಮಗುವನ್ನು ತೆಗೆದುಕೊಂಡು ಹೋಗಿ ಫ್ರಿಡ್ಜ್ ನಲ್ಲಿಟ್ಟಳು. ನಂತರ ಫೋನಿನಲ್ಲಿ ಮಾತನಾಡುತ್ತಾ ಅಡುಗೆ ಕೋಣೆಗೆ ಹೋದಳು.
ಸ್ವಲ್ಪ ಹೊತ್ತಿನ ನಂತರ ಗಂಡ ಮನೆಗೆ ಬಂದ. ಮಗು ಚೆನ್ನಾಗಿದೆಯಾ? ಎಂದು ಕೇಳಿದಾಗ.. ಹೌದು ಏನಾಯಿತು.. ಅವನು ಇಲ್ಲಿ ಆಡುತ್ತಿರುವುದನ್ನು ನೋಡಿದೆ ಎಂದಳು. ಆದರೆ ಮಗು ಕಾಣಿಸಲಿಲ್ಲ, ಇಬ್ಬರು ಮಗುಗಾಗಿ ಹುಡುಕಾಡಿದ್ದಾರೆ.  ಮಗುವಿನ ಅಳು ಕೇಳಿಸಿತು ಕೊನೆಗೆ ಫ್ರಿಡ್ಜ್‌ನಿಂದ ಅಳು ಬರುತ್ತಿದೆ ಎಂದು ಊಹಿಸಿ.. ಫ್ರಿಡ್ಜ್‌ನ ಬಾಗಿಲು ತೆರೆದು ನೋಡಿದೆ. ಒಳಗೆ  ಮಗು ಇದೆ. ಆಮೇಲೆ ಯಾಕೆ ಹಾಗೆ ಮಾಡಿದೆ? ಎಂದು ಕೇಳಿದಾಗ ಮಹಿಳೆ ಕಣ್ಣೀರು ಹಾಕುತ್ತಾ ಮಗುವನ್ನು ಎತ್ತಿಕೊಂಡಿದ್ದಾಳೆ.  x ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿಯಿಂದ ಅಪಾಯಕಾರಿ ಚಟ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಆ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
Horrible Addiction 😰pic.twitter.com/D3Pl0a4rsv
— Prof cheems ॐ (@Prof_Cheems)March 30, 2024

ಈ ವೀಡಿಯೋ ನೋಡಿದ ನೆಟಿಜನ್‌ಗಳಲ್ಲಿ ಹಲವರು ಫೋನ್‌ನಲ್ಲಿ ಮಾತನಾಡುತ್ತಲೇ ಕಮೆಂಟ್ ಮಾಡುತ್ತಿದ್ದಾರೆ. ಇದು ನಿಜವಾದ ವಿಡಿಯೋ ಅಲ್ಲ.. ಇದೆಲ್ಲ ನಾಟಕ ಎಂಬ ವಾದವಿದೆ. ಇದು ಡ್ರಾಮಾ ವಿಡಿಯೋ ಎಂದು ನನಗನ್ನಿಸುತ್ತದೆ. ಫ್ರಿಡ್ಜ್‌ನಲ್ಲಿದ್ದ ಸ್ಥಳವನ್ನು ಮೊದಲು ತೆರವುಗೊಳಿಸಿ ನಂತರ ವೀಡಿಯೊ ಮಾಡಲಾಗಿದೆಯಂತೆ. ಹಾಗಾದರೆ ಇದು ನಿಜವಾಗಿಯೂ ನಡೆದಿದೆಯೇ ಅಥವಾ ಬರೀ ನಾಟಕವೇ ಎಂಬುದನ್ನು ಕಾದು ನೋಡಬೇಕಿದೆ. ಏನೇ ಆಗಿರಲಿ ಮೊಬೈಲ್​ನಲ್ಲಿ ಮಾತನಾಡುವಾಗ ಇಂಥಹ ಕೆಲಸದಿಂದ ಬೇರೆಯವರ ಪ್ರಾಣಕಲ್ಕೆ ಕುತ್ತು ತರುತ್ತದೆ ಎಚ್ಚರಿಕೆ ಇಂದ ಇರಿ ಎನ್ನುವುದು ಈ ವಿಡಿಯೋ ಸಂದೇಶವಾಗಿದೆ.
ಬಂಡಿ ಚಕ್ರ ಕಳಚಿ ಬಿದ್ದಿದ್ದರು ಸಹಯಾಕ್ಕೆ ಬರದ ಜನ; ಸಂಕಷ್ಟದಲ್ಲಿದ್ದ ರೈತನಿಗೆ ಎಎಸ್‌ಐ ಮಾಡಿದ್ದೇನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
