ಕೇರಳ:ಮಕ್ಕಳ ಚಿಕಿತ್ಸೆಗೆ ಹಣ ಹೊಂದಿಸಲಾಗದ ತಾಯಿ, ತನ್ನ ಅಂಗಾಂಗಳನ್ನೇ ಮಾರಾಟಕ್ಕಿಟ್ಟು ಗಮನ ಸೆಳೆದಿದ್ದಾರೆ. ಕೇರಳದ ಕೊಚ್ಚಿಯ ಹೊರವಲಯದಲ್ಲಿ ನೆಲೆಸಿರುವ ಈ ಮಹಾತಾಯಿ ದೊಡ್ಡ ತ್ಯಾಗಕ್ಕೆ ಸಜ್ಜಾಗಿದ್ದರು.
ಈಕೆಗೆ ಐವರು ಮಕ್ಕಳಿದ್ದು, ಆ ಪೈಕಿ ಹಿರಿಯ ಇಬ್ಬರು ಗಂಡು ಮಕ್ಕಳಿಗೆ ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಹೆಣ್ಣು ಮಗಳಿಗೆ ದೀರ್ಘಕಾಲದಿಂದ ನರರೋಗವಿದ್ದು ಆಕೆಯ ದೃಷ್ಟಿಗೂ ತೊಂದರೆ ಉಂಟಾಗಿದೆ. ಜತೆಗೆ ಈಕೆ ಪತಿಯಿಂದ ಪರಿತ್ಯಕ್ತಳಾಗಿದ್ದು, ಮನೆ ಬಾಡಿಗೆ ಕಟ್ಟಲಾಗದೆ ಗುಡಿಸಲಿನಲ್ಲಿ ವಾಸವಾಗಿದ್ದರು.
ಹೀಗೆ ಅನಾರೋಗ್ಯದಲ್ಲಿರುವ ಮಕ್ಕಳ ಚಿಕಿತ್ಸೆಗೆ ಹಣ ಹೊಂದಿಸಲಾಗದ ಈಕೆ, “ಮಕ್ಕಳ ಚಿಕಿತ್ಸೆಗಾಗಿ ಹಾಗೂ ಸಾಲ ತೀರಿಸಲು ಹೃದಯವೂ ಸೇರಿ ತಾಯಿಯ ಅಂಗಾಂಗಳು ಮಾರಾಟಕ್ಕಿವೆ” ಎಂದು ಗುಡಿಸಲಿನ ಮುಂದೆ ಬರೆದು ನೇತು ಹಾಕಿದ್ದರು.
ಭಾನುವಾರ ಈ ವಿಷಯ ಅಲ್ಲಿನ ಸರ್ಕಾರದ ಗಮನಕ್ಕೆ ಬಂದಿದ್ದು, ಕುಟುಂಬವನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಗಿದ್ದು, ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಭರವಸೆ ಸರ್ಕಾರದಿಂದ ಸಿಕ್ಕಿದೆ. ಜತೆಗೆ ಕೆಲವು ಸ್ವಯಂಸೇವಾ ಸಂಸ್ಥೆಗಳೂ ಸಹಾಯಕ್ಕೆ ಮುಂದಾಗಿವೆ. ಹೀಗಾಗಿ, ಕುಟುಂಬ ಕೊನೆಗೆ ಬಾಡಿಗೆ ಮನೆಗೆ ಮರಳಿದೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + eight =
Remember me
