ನವದೆಹಲಿ:ಹಾಗೆ ನೋಡಿದರೆ ಪ್ರತಿ ದಿನವೂ ಅಮ್ಮನ ದಿನವೇ. ಆದರೆ ಧಾವಂತದ ಬದುಕಿನಲ್ಲಿ ಎಷ್ಟೋ ಮಂದಿ ಅಮ್ಮನ ಪ್ರೀತಿ, ವಾತ್ಸಲ್ಯ, ತ್ಯಾಗ ಎಲ್ಲವನ್ನೂ ಮರೆತುಬಿಡುತ್ತಾರೆ. ಅಂಥವರಿಗೆ ಅಮ್ಮನನ್ನು ನೆನಪಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ.
ವಿಶೇಷ ಸಂದರ್ಭಗಳನ್ನು ಗೂಗಲ್ ಕಂಪೆನಿ​, ಡೂಡಲ್​ ಮೂಲಕ ವಿಶಿಷ್ಟವಾಗಿ ಆಚರಿಸುತ್ತದೆ. ಯಾವುದಾದರೂ ಗಣ್ಯರ ಜನ್ಮದಿನ, ಪುಣ್ಯತಿಥಿ ಅಥವಾ ಇನ್ನಾವುದೇ ವಿಶೇಷ ದಿನಗಳನ್ನು ಡೂಡಲ್​ ಮೂಲಕ ಆಚರಿಸಿ ಗೌರವ ಸಲ್ಲಿಸುವ ವಾಡಿಕೆ ಗೂಗಲ್​ದ್ದು.
ಇದನ್ನೂ ಓದಿ:ಪಿಯುಸಿವರೆಗಿನ ಪಾಠ ಇನ್ಮುಂದೆ ಮನೆಯಲ್ಲಿಯೇ ಉಚಿತವಾಗಿ ಕಲಿಯಬಹುದು!
ಇಂದು ಕೂಡ ವಿಶ್ವ ಅಮ್ಮಂದಿರ ಸಲುವಾಗಿ ಎಲ್ಲಾ ಅಮ್ಮಂದಿರಿಗೆ ವಿಶೇಷ ಗೌರವ ಸಲ್ಲಿಸಿದೆ. ಬದುಕಿನ ಪ್ರತಿ ಹಂತದಲ್ಲಿಯೂ ದಾರಿತೋರುವ ನಿಮ್ಮ ನೆಚ್ಚಿನ ಅಮ್ಮನಿಗೆ ಲಾಕ್​ಡೌನ್​ ನಡುವೆ ಹೊರಗಡೆ ಹೋಗಿ ದುಬಾರಿ ಗಿಫ್ಟ್​ ತಂದುಕೊಡಲು ಸಾಧ್ಯವಾಗಿಲ್ಲ ಎಂಬ ಬೇಸರ ಬೇಡ, ಚಿಕ್ಕದಾಗಿ ಮನೆಯಲ್ಲಿಯೇ ಕೂತು ಆಕೆಗೊಂದು ವಿಶೇಷ ರೀತಿಯಲ್ಲಿ ಗ್ರೀಟಿಂಗ್​ ಕಾರ್ಡ್, ವರ್ಚುವಲ್​ ಕಾರ್ಡ್​​ ಮೂಲಕ ಧನ್ಯವಾದ ಅರ್ಪಿಸಿ ಎನ್ನುತ್ತಿದೆ ಗೂಗಲ್​.
ನೀವೇನೂ ಹೆಚ್ಚಿಗೆ ಮಾಡಬೇಕಾದದ್ದೇ ಇಲ್ಲ. ಗೂಗಲ್​ ಡಾಟ್​ ಕಾಮ್​ ಎಂದು ಟೈಪ್​ ಮಾಡಿದರೆ ಅಲ್ಲೇ ಎಲ್ಲವೂ ಸಿಕ್ಕಿಬಿಡುತ್ತದೆ. ‘ಹ್ಯಾಪಿ ಮದರ್ಸ್ ಡೇ, ಇಂದಿನ ಗೂಗಲ್ ಡೂಡಲ್ ಮೂಲಕ ನಿಮ್ಮ ಅಮ್ಮನಿಗಾಗಿ ಹೃದಯಾಂತರಾಳದಿಂದ ಕಲೆ ಮತ್ತು ಕಸೂತಿ ತಯಾರಿಸಿ ಹಂಚಿಕೊಳ್ಳಿ’ ಎಂಬ ಸಂದೇಶ ಬರುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿದರೆ ಗೂಗಲ್ ಲೆಟರ್ ಎಂದು ತೋರಿಸುತ್ತದೆ. ಅಲ್ಲಿ ಕಾರ್ಡು ತಯಾರಿಸಲು ಆಯ್ಕೆ ಕೊಟ್ಟಿರುತ್ತಾರೆ. ಅಲ್ಲಿ ವಿನ್ಯಾಸ(ಡಿಸೈನ್)ಕ್ಕೆ ಕ್ಲಿಕ್ ಮಾಡಿ ಖಾಲಿ ಕಾರ್ಡನ್ನು ಇರಿಸಬಹುದು.
ಇದನ್ನೂ ಓದಿ:ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.
ನಿಮಗಾಗಿ ಬಗೆಬಗೆಯ ವಿನ್ಯಾಸಗಳ ಕ್ರಾಫ್ಟ್ ಐಕಾನ್ ಇರಿಸಲಾಗಿದೆ. ಅದನ್ನು ಆಯ್ಕೆ ಮಾಡಿಕೊಂಡು ನಿಮಗಿಷ್ಟವಾದ ಗ್ರೀಟಿಂಗ್​ ಕಾರ್ಡ್​ ತಯಾರಿಸಿಕೊಳ್ಳಬಹುದು. ಕಾರ್ಡು ಪೂರ್ಣಗೊಂಡ ನಂತರ ಸೆಂಡ್ (ಕಳುಹಿಸು) ಆಪ್ಷನ್​ ಬರುತ್ತದೆ. ಅಲ್ಲಿ ನಿಮ್ಮ ಅಮ್ಮನ ಫೋಟೋ ಅಪ್​ಲೋಡ್​ ಮಾಡಲೂ ಅವಕಾಶ ನೀಡಲಾಗಿದೆ. ಇದನ್ನು ನೀವು ಫೇಸ್​ಬುಕ್​, ವಾಟ್ಸ್​ಆ್ಯಪ್​, ಟ್ವಿಟರ್​ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾಗಿದೆ.
ಬದುಕಿನುದ್ದಕ್ಕೂ ತನ್ನೆಲ್ಲ ನೋವುಗಳನ್ನು ಮರೆತು ಮಕ್ಕಳು, ಕುಟುಂಬಕ್ಕಾಗಿ ಜೀವನ ಮೀಸಲಿಡುವ ಅಮ್ಮನಿಗೊಂದು ಥ್ಯಾಂಕ್ಸ್​ ಹೇಳುವ ಸಂಬಂಧ ಅಮೆರಿಕದ ಅನ್ನಾ ಜಾರ್ವಿಸ್ 1914 ರಲ್ಲಿ ಅಮ್ಮನ ದಿನವನ್ನು ಆಚರಿಸುವ ಘೋಷಣೆ ಮಾಡಿದರು. ಪ್ರತಿ ವರ್ಷದ ಮೇ 2ನೇ ವಾರ ಈ ದಿನವನ್ನು ಆಚರಿಸಲಾಗುತ್ತದೆ.(ಏಜೆನ್ಸೀಸ್​)
ಇದನ್ನೂ ಓದಿ:ಸ್ಥಗಿತಗೊಂಡಿದ್ದ ರಾಮಜನ್ಮಭೂಮಿ ನಿರ್ಮಾಣ ಕಾರ್ಯ ಆರಂಭ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 − 4 =
Remember me
