ನವದೆಹಲಿ:ಅಪಹರಣಕಾರನಿಂದ ನಾಲ್ಕು ವರ್ಷದ ತಮ್ಮ ಮಗಳನ್ನು ಬಚಾವ್‌ ಮಾಡಿದ ಮಹಿಳೆಯ ವಿಡಿಯೋ ಇದೀಗ ವೈರಲ್‌ ಆಗಿದೆ.
ಮಗಳನ್ನು ಅಪಹರಿಸಲು ಬೈಕ್‌ನಲ್ಲಿ ಬಂದಿದ್ದ ಅಪಹರಣಕಾರನನ್ನು ಬೈಕ್‌ನಿಂದ ಬೀಳಿಸಿ, ಮಗುವನ್ನು ಕಾಪಾಡಿರುವ ಈ ಘಟನೆ ದೆಹಲಿಯ ಶಕರ್‍ಪುರದಲ್ಲಿ ನಡೆದಿದೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿ ಅನ್ವಯ ಅದೊಂದು ಗಲ್ಲಿ. ಅಲ್ಲಿಗೆ ಬೈಕ್‌ನಲ್ಲಿ ಒಬ್ಬ ಬಾಲಕಿಯ ಮನೆಗೆ ಬಂದು ಬೆಲ್‌ ಮಾಡಿದ್ದಾನೆ. ಮಹಿಳೆ ಬಂದು ಬಾಗಿಲು ತೆರೆದಿದ್ದಾರೆ. ಜತೆಯಲ್ಲಿ ಮಗುವೂ ಇದೆ. ನೀರು ಬೇಕು ಎಂದು ಆತ ಕೇಳಿದ್ದಾನೆ. ಮಹಿಳೆ ನೀರು ತರಲು ಒಳಕ್ಕೆ ಹೋದಾಗ ಹೊರಗೆ ಇದ್ದ ಮಗುವನ್ನು ಎತ್ತಿಕೊಂಡು ಆತ ಬೈಕಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.
#WATCH: Mother of a 4-yr-old girl saved her daughter from kidnappers in Shakarpur area on July 21. Two persons including uncle of the child arrested. A motorcycle with fake number plate, one loaded country-made pistol, .315 bore cartridge&original number plate were seized.#Delhipic.twitter.com/nG6R14pUnp
— ANI (@ANI)July 22, 2020

ಮಗು ಕೂಗಿಕೊಂಡಾಗ ಅಮ್ಮ ಗಾಬರಿಯಿಂದ ಹೊರಕ್ಕೆ ಬಂದಿದ್ದಾರೆ. ಬೈಕ್‌ ಸ್ಟಾರ್ಟ್‌ ಮಾಡುವಷ್ಟರಲ್ಲಿಯೇ ಅಲ್ಲಿಗೆ ಓಡಿ ಹೋದ ತಾಯಿ ಅಪಹರಣಕಾರನನ್ನು ಕೆಳಕ್ಕೆ ಬೀಳಿಸಿ ಮಗಳನ್ನು ಕಾಪಾಡಿಕೊಂಡಿದ್ದಾರೆ. ನಂತರ ಬೈಕ್‌ ಸವಾರ ತಪ್ಪಿಸಿಕೊಂಡು ಬೈಕ್‌ನಿಂದ ಹೋಗುವಲ್ಲಿ ಸಫಲನಾಗಿದ್ದಾನೆ.
ಗಲ್ಲಿಯ ಜನ ಸೇರಿ ಕಳ್ಳನನ್ನು ಹಿಡಿಯಲು ಉಪಾಯ ಮಾಡಿದ್ದಾರೆ. ಸ್ವಲ್ಪ ದೂರದಲ್ಲಿ ಅದೇ ಗಲ್ಲಿಯ ಇನ್ನೊಬ್ಬರು ತಮ್ಮ ಬೈಕ್ ಅನ್ನು ದಾರಿಗೆ ಅಡ್ಡ ಹಾಕಿ, ಅಪಹರಣಕಾರನನ್ನು ಕೆಳಕ್ಕೆ ಬೀಳಿಸಿದ್ದಾರೆ. ಅಪಹರಣಕಾರ ಬೈಕ್‌ ಬಿಟ್ಟು ಓಡಿ ಹೋಗಿದ್ದಾನೆ.
ಇದನ್ನೂ ಓದಿ:ಅಮ್ಮಾ ಕ್ಷಮಿಸಿಬಿಡು, ಅವನೂ ನನ್ನ ಮದ್ವೆ ಆಗಲ್ಲ, ಬೇರೆಯವರನ್ನೂ ಆಗಲು ಬಿಡಲ್ಲ…
ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿದೆ. ಪೊಲೀಸರು ಅಪಹರಣಕಾರರು ಬಿಟ್ಟುಹೋದ ಬೈಕ್‌ ಪತ್ತೆ ಹಚ್ಚಿ, ಅಪಹರಣಕಾರರನ್ನು ಪತ್ತೆ ಹಚ್ಚಿದ್ದಾರೆ. ಆಮೇಲೆ ನೋಡಿದರೆ ಆ ಮಗುವಿನ ಚಿಕ್ಕಪ್ಪ ಅಂದರೆ ತಂದೆಯ ತಮ್ಮ ಉಪೇಂದ್ರ ಕುಮಾರ್ ಗುಪ್ತಾ (35) ಈ ಕೃತ್ಯ ಎಸಗಿರುವುದು ತಿಳಿದಿದೆ. ಮಗುವಿನ ಅಪ್ಪನಿಂದ ಹಣ ವಸೂಲಿ ಮಾಡುವ ಸಲುವಾಗಿ ಧೀರಜ್ ಎಂಬಾತನಿಗೆ ಅಪಹರಣ ಮಾಡಲು ಹೇಳಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಡಿಸಿಪಿ ಜಸ್ಮೀತ್ ಸಿಂಗ್ ಅಮ್ಮ ಹಾಗೂ ಸ್ಥಳೀಯರ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಚಿಕ್ಕಪ್ಪನದ್ದೇ ಕೃತ್ಯದ ಕುರಿತು ಹೇಳಿದ್ದಾರೆ. ದೂರು ದಾಖಲಾಗಿದೆ.
ರಕ್ತನೂ ಕೊಟ್ಟು, ಚಿಕಿತ್ಸೆಯನ್ನೂ ಮಾಡಿ ಜೀವ ಉಳಿಸಿದ ವೈದ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + twelve =
Remember me
