ನವದೆಹಲಿ:ಮದರ್ ಸೆಂಟಿಮೆಂಟ್​ ಎನ್ನುವುದು ಭಾರಿ ಪರಿಣಾಮ ಬೀರುವಂಥದ್ದು. ಅದೇ ಕಾರಣಕ್ಕೆ ಹಲವಾರು ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಇದ್ದೇ ಇರುತ್ತದೆ. ನಿಜ ಜೀವನದಲ್ಲಿ ತಾಯಿಯ ಪ್ರೀತಿಯಿಂದಲೇ ಗೆದ್ದವರಿದ್ದರೆ, ಮದರ್ ಸೆಂಟಿಮೆಂಟ್​​ನಿಂದಲೇ ಗೆದ್ದ ಸಿನಿಮಾಗಳೂ ಬಹಳಷ್ಟಿವೆ. ಕನ್ನಡದ ಕೆಜಿಎಫ್​, ಜೋಗಿ, ಅಣ್ಣಯ್ಯ.. ಹೀಗೆ ಹಲವು ಸಿನಿಮಾಗಳು ಅಂಥ ಪಟ್ಟಿಯಲ್ಲಿವೆ.
ಇನ್ನು ದೊಡ್ಡ ದೊಡ್ಡ ನಾಯಕರೆಲ್ಲ ಆಗಾಗ ತಮ್ಮ ಮಾತೃಪ್ರೇಮವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಿದ್ದಕ್ಕೂ ಹಲವು ಉದಾಹರಣೆಗಳಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಇದಕ್ಕೆ ಹೊರತಲ್ಲ. ಅವರು ಕೂಡ ಆಗಾಗ ಗುಜರಾತ್​ಗೆ ತೆರಳಿ ಅಮ್ಮನನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡು ಬರುತ್ತಿರುತ್ತಾರೆ. ಆ ಕುರಿತ ಫೋಟೋಗಳೂ ಅವರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿರುತ್ತವೆ. ಇದಕ್ಕೆ ಬಿಜೆಪಿಯ ಬೆಂಬಲಿಗರಿಂದಷ್ಟೇ ಅಲ್ಲದೆ ಇತರ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಮೆಚ್ಚುಗೆಗಳು ವ್ಯಕ್ತವಾಗುತ್ತಿರುತ್ತವೆ.
ಇದೀಗ ರಾಹುಲ್ ಗಾಂಧಿ ಕೂಡ ತಮ್ಮ ಮದರ್​ ಸೆಂಟಿಮೆಂಟ್ ವ್ಯಕ್ತಪಡಿಸಿದ್ದಾರೆ. ಅಮ್ಮನನ್ನು ಅಪ್ಪಿಕೊಂಡ ಫೋಟೋವೊಂದನ್ನು ಅವರು ಟ್ವೀಟ್ ಮಾಡಿದ್ದು, ಅದಕ್ಕೊಂದು ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ. ‘ಅಮ್ಮನಿಂದ ಸಿಕ್ಕಿದ್ದು ಈ ಪ್ರೀತಿ, ಅದನ್ನೇ ನಾನು ದೇಶದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ ಎಂದು ಫೋಟೋ ಜತೆ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಅನುಸರಿಸುತ್ತಿದ್ದಾರಾ ಎನ್ನುವಂಥ ಲಕ್ಷಣಗಳು ಗೋಚರಿಸುತ್ತಿವೆ. ಮೋದಿಯಂತೆಯೇ ಕುರುಚಲು ಗಡ್ಡ ಬಿಟ್ಟಿರುವ ರಾಹುಲ್, ಪ್ರಧಾನಿ ಮೋದಿಯಂತೆ ಮಾತೃಪ್ರೇಮವನ್ನು ಅಮ್ಮ ಸೋನಿಯಾ ಜತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಮಧ್ಯಾಹ್ನವಷ್ಟೇ ಹಂಚಿಕೊಳ್ಳಲಾಗಿರುವ ಈ ಫೋಟೋಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. 94 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 14 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ 16 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.
जो मोहब्बत इनसे मिली है,वही देश से बांट रहा हूं।pic.twitter.com/y1EfLqxluU— Rahul Gandhi (@RahulGandhi)December 24, 2022
जो मोहब्बत इनसे मिली है,वही देश से बांट रहा हूं।pic.twitter.com/y1EfLqxluU
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!
ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ
ಶೂಟಿಂಗ್​ ಸೆಟ್​​ನಲ್ಲೇ ನೇಣು ಹಾಕಿಕೊಂಡು ಪ್ರಾಣ ಕಳ್ಕೊಂಡ ನಟಿ!
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 − two =
Remember me
