ಹೈದರಾಬಾದ್​:ತಾಯಿ ಮೃತಪಟ್ಟಳೆಂಬ ಸುದ್ದಿ ಕೇಳಿ ಮಗನು ಕೂಡ ಸಾವಿನ ಹಾದಿ ಹಿಡಿದಿರುವ ಘಟನೆ ಹೈದರಾಬಾದ್​ನ ಕಟೇದನ್​ ಏರಿಯಾದಲ್ಲಿ ಶನಿವಾರ ನಡೆದಿದೆ.
ಗಿಲ್ಲ ಶ್ರೀಹರಿ (22) ಮೃತ ಮಗ. ಮೈಲಾರ್ದೇವ್ಪಲ್ಲಿ ವಿಭಾಗದ ಮಧುಬನ ಕಾಲನಿಯ ನಿವಾಸಿಯಾದ ಶ್ರೀಹರಿ, ಇಂಜಿನಿಯರಿಂಗ್​ ಓದುತ್ತಿದ್ದ. ಕಾನ್ಸ್​ಟೇಬಲ್​ ಆಗಿ ಕೆಲಸ ಮಾಡುತ್ತಿದ್ದ ತಂದೆ ನಿವೃತ್ತಿ ಹೊಂದಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿರುವ ತಂದೆ ಹಾಸಿಗೆ ಹಿಡಿದಿದ್ದಾರೆ.
ಶ್ರೀಹರಿ ವಿದ್ಯಾಭ್ಯಾಸದ ಜತೆಗೆ ಸಣ್ಣ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ. ಏಪ್ರಿಲ್​ 22ರಂದು ತಾಯಿ ರುಕ್ಮಿಣಿಗೆ ಕರೊನಾ ಸೋಂಕು ತಗುಲಿತ್ತು. 37 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಹರಿ ತಾಯಿ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾರೆ.
ಇತ್ತ ತಾಯಿ ಮೃತಪಟ್ಟಳು ಎಂಬ ಸುದ್ದಿಯನ್ನು ಕೇಳಿ ನೋವು ಸಹಿಸದೇ ಸ್ನೇಹಿತನ ಬೈಕ್​ನಲ್ಲಿ ತೆರಳಿ ಹುಂಡಾಸಾಗರ್​ ಪ್ರದೇಶದಲ್ಲಿ ಪಾರ್ಕ್​ ಮಾಡಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಆತ್ಮಹತ್ಯೆಗು ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ತಂದೆಯ ಬಳಿ ಕ್ಷಮೆಯಾಚಿಸಿದ್ದಾನೆ.(ಏಜೆನ್ಸೀಸ್​)
ಧೋನಿಯೊಂದಿಗಿನ ಬಾಂಧವ್ಯವನ್ನು ಎರಡೇ ಪದದಲ್ಲಿ ವಿವರಿಸಿದ ಕೊಹ್ಲಿಗೆ ನೆಟ್ಟಿಗರ ಮೆಚ್ಚುಗೆ!

ಕಥೆಗಾರ್ತಿಯಾದ ರೋಶನಿ; ಲಾಕ್​ಡೌನ್​ನಲ್ಲಿ ಬರವಣಿಗೆ ಶುರು..

ರಾಜ್ಯಕ್ಕೆ ಬಾಂಗ್ಲಿಗರ ಕಂಟಕ: ಬೆಂಗ್ಳೂರು, ಹೊರವಲಯದಲ್ಲಿ 85 ಸಾವಿರ ಮಂದಿ ಅಕ್ರಮ ವಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − seven =
Remember me
