ಅಗರ್ತಲಾ:ತಾಯಿಯ ಸಾಕ್ಷ್ಯದ ಮೇರೆಗೆ ಜಿಲ್ಲಾ ನ್ಯಾಯಾಲಯವು ಆಕೆಯ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ತ್ರಿಪುರಾದ ಸೆಪಹಿಜಾಲಾದಲ್ಲಿ ನಡೆದಿದೆ.ಇದನ್ನೂ ಓದಿ:2 ಗಂಟೆಯಲ್ಲಿ ಮಗಳ ಮದುವೆ: ಅಷ್ಟರಲ್ಲಿ ಕುಸಿದು ಬಿದ್ದ ಅಪ್ಪ, ಆಮೇಲೆ ನಡೆದಿದ್ದು ದುರಂತ..
ಈ ಪ್ರಕರಣ ತ್ರಿಪುರಾದ ಸೆಪಹಿಜಾಲಾ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಬಿಶಾಲ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ 55 ವರ್ಷದ ವಿಧವೆ ಕೃಷ್ಣ ದಾಸ್ ಕೊಲೆ ಪ್ರಕರಣದಲ್ಲಿ ಸುಮನ್ ದಾಸ್ (24) ಮತ್ತು ಆತನ ಸ್ನೇಹಿತ ಚಂದನ್ ದಾಸ್ (26) ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಏನಿದು ಪ್ರಕರಣ?ಈ ಪ್ರಕರಣವು ಏಪ್ರಿಲ್ 2020 ರಲ್ಲಿ ನಡೆದಿದ್ದು, ಸೆಪಹಿಜಾಲಾದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಕೃಷ್ಣಾ ದಾಸ್​ ಎಂಬಾಕೆಯನ್ನು ಯುವಕರಿಬ್ಬರು ಬರ್ಬರವಾಗಿ ದಾಳಿ ಮಾಡಿ ಹತ್ಯೆಗೈದಿದ್ದರು. ಪೊಲೀಸರ ಪ್ರಕಾರ, ಇಬ್ಬರೂ ಅಪರಾಧಿಗಳು ಆಕೆಯ ಕತ್ತು ಹಿಸುಕಿ ಸಾಯಿಸುವ ಮೊದಲು ಆಕೆಯ ಮನೆಯಲ್ಲಿ ಅತ್ಯಾಚಾರವೆಸಗಿ ಬಳಿಕ ಮೃತದೇಹವನ್ನು ಬಾವಿಯಲ್ಲಿ ಎಸೆದಿದ್ದರು. ಹಲವು ದಿನಗಳ ನಂತರ ಶವ ಪತ್ತೆಯಾದ ಬಳಿಕ ಈ ಕುರಿತು ಮೃತಳ ಸೊಸೆ ಸುಮಿತ್ರಾ ದಾಸ್ ಎಫ್‌ಐಆರ್ ದಾಖಲಿಸಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಇಬ್ಬರೂ ಆರೋಪಿಗಳನ್ನು ಬಂಧಿಸಿ, ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಮಗನ ವಿರುದ್ಧ ಹೇಳಿಕೆ ನೀಡಿದ ಸುಮನ್ ತಾಯಿ ಸೇರಿದಂತೆ 25 ಮಂದಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಮಗನಿಗೆ ಮರಣದಂಡನೆಗೆ ವಿಧಿಸಬೇಕೆಂದು ಒತ್ತಾಯ:ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್, ಸುಮನ್ ಎಂಬಾತನ ತಾಯಿ ನಮಿತಾ ದಾಸ್ ಪ್ರಕರಣಕ್ಕೆ ಬೆಂಬಲ ನೀಡಲು ನಿರ್ಧರಿಸಿ ಸುಮಾರು ಒಂದು ತಿಂಗಳ ಹಿಂದೆ ವಿಚಾರಣೆಯ ಸಮಯದಲ್ಲಿ ಮಗ ಮತ್ತು ಅವನ ಸ್ನೇಹಿತನಿಗೆ ಮರಣದಂಡನೆಯನ್ನು ವಿಧಿಸಬೇಕೆಂದು ಕೋರಿದ್ದರು. ನ್ಯಾಯಲಯದಲ್ಲಿ ಸಾಕ್ಷಿ ಹೇಳುವಾಗ, ನಮಿತಾ ತನ್ನ ಮಗನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು.ಅತ್ಯಾಚಾರ ಆರೋಪದಿಂದ ಆರೋಪಿ ಖುಲಾಸೆ:ಕೊಲೆಯಾದ ಒಂದು ವಾರದ ನಂತರ ಕೊಳೆತ ದೇಹವನ್ನು ಹೊರತೆಗೆಯಲಾಗಿದ್ದು, ಅತ್ಯಾಚಾರವನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಆರೋಪಿಗಳನ್ನು ಅತ್ಯಾಚಾರದ ಆರೋಪದಿಂದ ಖುಲಾಸೆಗೊಳಿಸಲಾಗಿದೆ. ಇಬ್ಬರಿಗೂ ಹೆಚ್ಚುವರಿ ಮೂರು ವರ್ಷ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + fifteen =
Remember me
