ಕೊಚ್ಚಿ:ಸಾಮಾನ್ಯವಾಗಿ ಅಪಘಾತವಾದರೆ ಗಂಭೀರ ಗಾಯ ಅಥವಾ ಸಾಯುವುದುಂಟು. ಆದರೆ, ಅಪಘಾತ ಇನ್ನೊಬ್ಬರನ್ನು ಬದುಕಿಸಿದೆ ಎಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಅದು ನಿಜವಾಗಿದೆ. ಕಾರು ಮತ್ತು ಜೆಸಿಬಿ ಯಂತ್ರದ ನಡುವೆ ನಡೆದ ಅಪಘಾತದಲ್ಲಿ ಬೈಕ್​ ಸವಾರನೊಬ್ಬ ಪಾರಾಗಿದ್ದಾನೆ.
ಇದನ್ನೂ ಓದಿ:ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಟ
ಈ ಘಟನೆ ಕೇರಳದ ಹೆದ್ದಾರಿಯಲ್ಲಿ ಶನಿವಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?:ಯುವಕನೊಬ್ಬ ತನ್ನ ಬೈಕ್​ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅದರ ಮೇಲೆ ಕುಳಿತಿರುತ್ತಾನೆ. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬರುವ ಜೆಸಿಬಿ ನಿಯಂತ್ರಣ ತಪ್ಪಿ ಯುವಕನತ್ತ ಧಾವಿಸಿ ಬರುತ್ತದೆ. ಅದೇ ವೇಳೆಗೆ ಎದುರಿಗೆ ಬರುವ ಬೊಲೆರೋ ಎಸ್​ಯುವಿ ಕಾರು ಜೆಸಿಬಿಗೆ ಡಿಕ್ಕಿ ಹೊಡೆಯುತ್ತದೆ. ಇಷ್ಟರಲ್ಲಾಗಲೇ ಯುವಕ ಬೈಕ್​ನಿಂದ ಕೆಳಗೆ ಹಾರಿರುತ್ತಾನೆ.
ಅದೃಷ್ಟವಶಾತ್​ ಬೈಕ್​ ಮೇಲೆ ಕುಳಿತಿದ್ದ ಯುವನಿಗೆ ಏನೂ ಆಗಿಲ್ಲ. ಇನ್ನು ಕಾರಿನಲ್ಲಿದ್ದ ಚಾಲಕನಿಗೂ ಸಹ ಗಾಯಗಳಾಗಿಲ್ಲ. ಆದರೆ, ಜೆಸಿಬಿ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಲ್ಯಾಂಬೋರ್ಗಿನಿ ಕಾರು ವಶ
(ವಿಡಿಯೋ ಕೃಪೆ: ಡೈಲಿ ಮೇಲ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
