ಹೈದರಾಬಾದ್​:ಪೊಲೀಸರೆಂದರೆ ಇಂದು ಮೂಗು ಮುರಿಯುವರೇ ಹೆಚ್ಚು. ಆದರೆ, ಎಲ್ಲ ಪೊಲೀಸರು ಒಂದೇ ರೀತಿಯಲ್ಲ, ಅವರಲ್ಲೂ ಮಾನವೀಯ ಗುಣಗಳು ಹಾಗೂ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ ಎಂಬುದನ್ನು ತೆಲಂಗಾಣ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಸಾಬೀತು ಮಾಡುವ ಮೂಲಕ ಓರ್ವ ಸರ್ಕಾರಿ ನೌಕರನ ಕರ್ತವ್ಯ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅಂದಹಾಗೆ ಈ ಸ್ಟೋರಿಯಲ್ಲಿ ಬರುವ ಪೊಲೀಸ್​ ಹೀರೋ ಹೆಸರು ಗುಂದ್ರಥಿ ಸತೀಶ್​, ಇವರು ಪಲಕುರ್ತಿ ಠಾಣೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಾಡಿರುವ ಮಾನವೀಯ ಕೆಲಸದ ಬಗ್ಗೆ ಹೇಳುವುದಾರೆ, ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರ್ಗತಿಕಳಾಗಿದ್ದ ವಾರಂಗಲ್​ ಜಿಲ್ಲೆಯ ಲಕ್ಷ್ಮಿನಾರಾಣಪುರಂ ಗ್ರಾಮದ 70 ವರ್ಷದ ಮಹಿಳೆಗೆ ತಮ್ಮದೇ ಹಣದಲ್ಲಿ ದೊಡ್ಡ ಮನಸ್ಸಿನಿಂದ ಒಂದು ಪುಟ್ಟ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಆ ಕ್ಷಣ | ರಾಮಾಪುರ ಪೊಲೀಸ್ ಠಾಣೆ ಮೇಲೆ ಭೀಕರ ದಾಳಿ

ಸ್ಟೋರಿಯ ವಿವರಣೆಗೆ ಬರುವುದಾದರೆ, ಸತೀಶ್​, ರಾಜಮ್ಮರನ್ನು ಕಳೆದ ಅಕ್ಟೋಬರ್​ನಲ್ಲಿ ಭೇಟಿಯಾಗಿದ್ದರು. ಭೇಟಿಗೆ ಮೂಲ ಕಾರಣವೇ ತೆಲಂಗಾಣದಲ್ಲಿ ಸಂಭವಿಸಿದ ಪ್ರವಾಹ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ರಾಜಮ್ಮರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಈ ವೇಳೆ ರಾಜಮ್ಮರ ಮನೆ ಸಂಪೂರ್ಣ ಹಾಳಾಗಿದ್ದನ್ನು ಸತೀಶ್​ ನೋಡಿ ದುಃಖಿತರಾಗಿದ್ದರು. ಅಲ್ಲದೆ, ಪ್ರವಾಹ ಭೀತಿ ಹೆಚ್ಚಾಗಿದ್ದರಿಂದ ರಾಜಮ್ಮರನ್ನು ಸರ್ಕಾರಿ ಆಶ್ರಯ ಶಿಬಿರಕ್ಕೆ ರವಾನಿಸಿ ಅವರೊಂದಿಗೆ ಮಾತನಾಡಿ ಕಷ್ಟವನ್ನು ಆಲಿಸಿದ್ದರು.
ಇದನ್ನೂ ಓದಿ:4 ಕೆ.ಜಿ. ಚಿನ್ನಾಭರಣ ಜಪ್ತಿ: ಕಳ್ಳತನಕ್ಕೆ ಉತ್ತರ ಪ್ರದೇಶದಿಂದ ಬರ್ತಿದ್ದ ಖತರ್ನಾಕ್​ ಗ್ಯಾಂಗ್​ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!
ಇನ್ನು ರಾಜಮ್ಮ ಕಡುಬಡವರು. ಯಾರೊಬ್ಬರ ಅವರನ್ನು ನೋಡಿಕೊಳ್ಳುತ್ತಿಲ್ಲ. ಅವರ ಸೊಸೆ ಮತ್ತು ಮೊಮ್ಮಗಳು ಹಾವು ಕಡಿತದಿಂದ ದುರಂತ ಸಾವಿಗೀಡಾಗಿದ್ದಾರೆ. ಆಕೆಯ ಮಗ ವಿಕಲಾಂಗನಾಗಿದ್ದು, ತಾಯಿಯನ್ನು ನೋಡಿಕೊಳ್ಳದೆ ಆಕೆಯನ್ನು ತೊರೆದಿದ್ದಾನೆ. ಆ ಪುಟ್ಟ ಮನೆಯಲ್ಲಿ ಮೂವರು ಅದು ಹೇಗೆ ವಾಸಿಸುತ್ತಿದ್ದರೋ ತಿಳಿಯುತ್ತಿಲ್ಲ. ಒಬ್ಬನೇ ವ್ಯಕ್ತಿ ಆ ಮನೆಯಲ್ಲಿ ವಾಸಿಸುವಷ್ಟು ಯೋಗ್ಯವಾಗಿರಲಿಲ್ಲ ಎಂದು ಎಸ್​ಐ ಸತೀಶ್​ ಭಾವುಕರಾದರು.
ಇತ್ತ ಆಕೆಯ ನೋವಿನ ಕತೆ ಕೇಳಿದ್ದ ಸತೀಶ್​ ರಕ್ಷಣಾ ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ರಾಜಮ್ಮರನ್ನು ಭೇಟಿ ಮಾಡಿ ಹೊಸ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಮಾತು ಕೊಟ್ಟಂತೆ ನಡೆದುಕೊಂಡ ಎಸ್​ಐ ಪ್ರವಾಹದಿಂದ ಹಾಳಾಗಿದ್ದ ಮನೆಯನ್ನು ಕೆಡವಿ ಕೇವಲ 3 ತಿಂಗಳ ಒಳಗೆ ದಾನಿಗಳ ಸಹಾಯದಿಂದ 1,60,000 ರೂ. ಖರ್ಚಿನಲ್ಲಿ ಹೊಸ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಒಟ್ಟು ಖರ್ಚಿನಲ್ಲಿ ಎಸ್​ಐ ಸತೀಶ್​ ಅರ್ಧದಷ್ಟು ಹಣ ನೀಡಿದ್ದಾರೆ.
#WarangalPolice#PalakurthySI Gundrathi Satish build a house for the old woman as New year's gift which collapsed during rains in monsoon. @cpwrlcpic.twitter.com/uYRxJNJa1n
— Telangana State Police (@TelanganaCOPs)January 1, 2021

ಈ ಬಗ್ಗೆ ಮಾತನಾಡಿರುವ ಸತೀಶ್​, ರಾಜಮ್ಮ ಅವರ ಕತೆ ಕೇಳಿ ನನಗೆ ನೋವಾಯಿತು. ದುಃಖದಿಂದ ಅವರನ್ನು ಹೊರ ಕರೆತರಲು ಏನಾದರೂ ಸಹಾಯ ಮಾಡಬೇಕೆಂದು ಬಯಸಿದೆ. ಹೀಗಾಗಿ ಮನೆ ನಿರ್ಮಿಸಿಕೊಡುವ ಯೋಚನೆ ಬಂತು. ಬಳಿಕ ದಾನಿಗಳ ನೆರವು ಪಡೆದು ಸದೃಢವಾದ ಮನೆಯನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ:ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ
ಇನ್ನು ಸತೀಶ್​ ಅವರ ಪರೋಪಕಾರಿ ಕೆಲಸ ಇದೇ ಮೊದಲೇನಲ್ಲ. ಅನೇಕ ವರ್ಷಗಳಿಂದ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿದ್ದಾರೆ. ಸತೀಶ್​ ಅವರ ಕಾರ್ಯಕ್ಕೆ ಅವರ ಸಹೋದ್ಯೋಗಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪೊಲೀಸರೆಂದರೆ ನೂರು-ಇನ್ನೂರಕ್ಕೆ ಕೈ ಒಡ್ಡುವವರು ಎಂದು ಹಾಡಿಕೊಳ್ಳುವ ಜನರೆದುರು ಪೊಲೀಸರೆಂದರೆ ಹೀಗಿರಬೇಕು ಎಂದು ಸತೀಶ್​ ತೋರಿಸಿಕೊಟ್ಟಿದ್ದಾರೆ. ಅವರ ಸೇವೆ ಇನ್ನಷ್ಟು ಜನರಿಗೆ ಲಭಿಸುವಂತಾಗಲಿ ಮತ್ತು ಅವರೂ ಸಹ ದೇವರ ಆಶೀರ್ವಾದದೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಿ ಎಂಬುದೇ ಎಲ್ಲರ ಹಾರೈಕೆಯಾಗಿದೆ.(ಏಜೆನ್ಸೀಸ್​)
ನಿಮ್ಮ ಮೂಡ್ ಸದಾ ನಿಮ್ಮದೇ ಹಿಡಿತದಲ್ಲಿರಲಿ; ನಟ ರಮೇಶ್ ಅರವಿಂದ್ ಅವರ ಅಂಕಣ

ಮದ್ವೆಗೆ ಹುಡ್ಗಿನೇ ಸಿಗ್ತಿಲ್ಲ, ನಾನಿನ್ನೂ ‘ಮಿ.ಬ್ಯಾಚುಲರ್’​ ಅಂತಿದಾರೆ ಡಾರ್ಲಿಂಗ್​ ಕೃಷ್ಣ!

ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷವಲ್ಲ! ಮತ್ತೆಷ್ಟು ಗೊತ್ತಾ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 + ten =
Remember me
