ಬೈತೂಲ್​:ಕಬ್ಬಿಣದ ರಾಡ್​ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ನಿಯಂತ್ರಣ ತಪ್ಪಿ ತವಾ ನದಿ ಸೇತುವೆಯಿಂದ ಕೆಳಕ್ಕುರುಳಿದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಸ್ಥಾನದಿಂದ 50 ಕಿ.ಮೀ. ದೂರದಲ್ಲಿ ನಿನ್ನೆ ತಡರಾತ್ರಿ ಈ ದುರಂತ ಸಂಭವಿಸಿದೆ. ಕಬ್ಬಿಣದ ರಾಡ್ ತುಂಬಿದ್ದ ಟ್ರಕ್​ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದೆ. ಪರಿಣಾಮ ಟ್ರಕ್​ನಲ್ಲಿದ್ದ ಐವರು ಕಾರ್ಮಿಕರು ಅದರ ನಡುವೆ ಸಿಲುಕಿ ಮೃತಪಟ್ಟರೆ, ಅಪಘಾತಕ್ಕೀಡಾದ ಬೆನ್ನಿಗೆ ಚಾಲಕ ಮೃತಪಟ್ಟಿದ್ದಾನೆ. ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ದಾಂಪತ್ಯ ಕಲಹ- ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯೂರಿಟಿ ಗಾರ್ಡ್ !
ಮೃತರನ್ನು ರಿಕೇಶ್ (25), ಬಬ್ಲು ಭಾಲವಿ (24), ದಿಲೀಪ್ ಉಯ್ಕೆ (26), ಸಂಜು ಬಟ್ಕೆ (40), ಮುನ್ನಾ ಸಲಾಂ (24), ಚಾಲಕ ಮನೋಹರ್ ಸಾಹು (38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೈತೂಲ್​ ಜಿಲ್ಲೆಯ ಪಿಪ್ರಿ ಗ್ರಾಮದವರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು. ತನಿಖೆ ನಡೆದಿದೆ. (ಏಜೆನ್ಸೀಸ್)
ಸೋನಿಯಾ ಜಿ, ರಾಹುಲ್​ ಜೀ.. ನೀವು ಗುಪ್ಕರ್ ಗ್ಯಾಂಗ್​ ನ ಬೆನ್ನಿಗಿದ್ದೀರಾ? – ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
