ಚಂಡೀಗಢ:ಖಲಿಸ್ತಾನಿ ಬೆಂಬಲಿಗ ಹಾಗೂ ಖದೂರ್ ಸಾಹಿಬ್ ಸಂಸದ ಅಮೃತಪಾಲ್ ಸಿಂಗ್ ಅವರ ಸಹೋದರ ಹರ್​​ ಪ್ರೀತ್​ಸಿಂಗ್​ನನ್ನು ಡ್ರಗ್ ಪ್ರಕರಣದಲ್ಲಿ ಜಲಂಧರ್ ಪೊಲೀಸರು ಬಂಧಿಸಿದ್ದಾರೆ. ಹರ್​​​ಪ್ರೀತ್ ಜತೆಗೆ ​ಆತನ ಸಹಚರ ಲವ್‌ಪ್ರೀತ್ ಸಿಂಗ್ ಅಲಿಯಾಸ್ ಲುವ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ(ಜುಲೈ 12) ತಿಳಿಸಿದ್ದಾರೆ.
ಇದನ್ನು ಓದಿ:ಭೂಕುಸಿತದಿಂದ ನದಿಗೆ ಬಿದ್ದ ಎರಡು ಬಸ್​; ಕಣ್ಮರೆಯಾದ 63 ಮಂದಿಗಾಗಿ ಹುಡುಕಾಟ
ಇವರಿಬ್ಬರು ಪ್ರಯಾಣಿಸುತ್ತಿದ್ದ ಕಾರನ್ನು ಪರಿಶೀಲಿಸಿದಾಗ ಆತನಿಂದ ಐದು ಗ್ರಾಂ ICE (ಮೆಥಾಂಫೆಟಮೈನ್​​ನ ಒಂದು ರೂಪ) ಅನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್​ ಸಾಗಿಸುತ್ತಿದ್ದ ಕಾರಣ ಫಿಲ್ಲೌರ್​​​ನಿಂದ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರ ತಂದೆ ತಾರ್ಸೆಮ್ ಸಿಂಗ್​​, ನಮ್ಮ ಕುಟುಂಬ ಹಾಗೂ ಅಮೃತಪಾಲ್ ಸಿಂಗ್ ಅವರ ಸಹಾಯಕರು ಮತ್ತು ಬೆಂಬಲಿಗರ ವಿರುದ್ಧದ ಪಿತೂರಿ ಮಾಡಲಾಗಿದೆ. ನಮ್ಮನ್ನು ದೂಷಿಸಲು ಸರ್ಕಾರ ಈ ಸಂಚು ರೂಪಿಸಿದೆ. ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಹೀಗೆ ಮಾಡುತ್ತಿದ್ದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನಾಲ್ಕು ದಿನಗಳ ಕಸ್ಟಡಿ ಪೆರೋಲ್ ಮೇಲೆ ದೆಹಲಿಗೆ ಬಂದಿದ್ದ ಹರ್​​ ಪ್ರೀತ್​ಸಿಂಗ್​ ಸಹೋದರ ಅಮೃತಪಾಲ್ ಸಿಂಗ್, ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯ ಅಪರಾಧದಲ್ಲಿ ಅಸ್ಸಾಂನ ದಿಬ್ರುಗಢ್ ಜಿಲ್ಲೆಯ ಜೈಲಿನಲ್ಲಿದ್ದಾರೆ. ಇತನ ಒಂಬತ್ತು ಸಹಚರರನ್ನು ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ.
ಕಳೆದ ವರ್ಷ ಫೆಬ್ರವರಿ 23ರಂದು ಅಮೃತಪಾಲ್​ ಸಿಂಗ್​ ಮತ್ತು ಸಹಚರರು, ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧನದಿಂದ ಮುಕ್ತಗೊಳಿಸಲು ಬ್ಯಾರಿಕೇಡ್‌ಗಳನ್ನು ಮುರಿದು ಕತ್ತಿಗಳು ಮತ್ತು ಬಂದೂಕುಗಳನ್ನು ಝಳಪಿಸುತ್ತಾ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್​ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದರು. ಇದರ ನಂತರ ಅವರನ್ನು ಬಂಧಿಸಲಾಯಿತು.
ಅಮೃತಪಾಲ್ ಪಂಜಾಬ್‌ನಲ್ಲಿ ಡ್ರಗ್ ವಿರೋಧಿ ಅಭಿಯಾನವನ್ನು ನಡೆಸುವ ಮೂಲಕ ಬೆಳಕಿಗೆ ಬಂದರು. ಅಷ್ಟೇ ಅಲ್ಲ ಅಮೃತಪಾಲ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಡ್ರಗ್​​ ಡಿಅಡಿಕ್ಷನ್ ಸೆಂಟರ್ ನಡೆಸುತ್ತಿದ್ದರು. ಆದರೆ ವಿಪರ್ಯಾಸ​ ಎಂಬತೆ ಆತನ ಸಹೋದರನನ್ನು ಈಗ ಡ್ರಗ್ಸ್‌ನೊಂದಿಗೆ ಬಂಧಿಸಲಾಗಿದೆ. (ಏಜೆನ್ಸೀಸ್​​)
ತಂಬಾಕು ಉದ್ಯಮದಲ್ಲಿ ಎಫ್​ಡಿಐ ಸಡಿಲಗೊಳಿಸುವುದಿಲ್ಲ; ಪಿಯೂಷ್ ಗೋಯಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 20 =
Remember me
