ಬೆಂಗಳೂರು: ಕಳೆದ ವಾರ ಬೆಂಗಳೂರಿನಲ್ಲಿ ನಡೆದ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ವಿಚಾರವಾಗಿ ಮಾಡಿದ ಭಾಷಣದ ಅಂಶ ವಿವಾದಕ್ಕೀಡಾದ ಸಂಸದ ಅನಂತ ಕುಮಾರ್ ಹೆಗಡೆ ಶುಕ್ರವಾರ ಮತ್ತೆ ಟ್ವೀಟ್ ಮಾಡಿದ್ದು, ಹಿಂದೆ ಎಲ್ಲೋ ಮಾಡಿದ ಸಂವಹನ, ಪ್ರಸ್ತುತ ವಿದ್ಯಮಾನಕ್ಕೆ ಹತ್ತಿರವಾಗಿದೆ…. ಎಂಬ ಶೀರ್ಷಿಕೆಯನ್ನೂ ನೀಡಿ ಗಮನಸೆಳೆದಿದ್ದಾರೆ.
ಇದನ್ನೂ ಓದಿ:‘ಸ್ವಾತಂತ್ರ್ಯಕ್ಕಾಗಿ ಅಡ್ಜಸ್ಟ್​ಮೆಂಟ್ ಮಾಡಿಕೊಂಡವರು ಮಹಾತ್ಮರೆನಿಸಿಕೊಂಡರು’: ವಿವಾದಕ್ಕೀಡಾಯಿತು ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿಕೆ
ಆ ಟ್ವೀಟ್ ನಲ್ಲಿ ಜೋಡಿಕೊಂಡಿರುವ ವಿಡಿಯೋದಲ್ಲಿ “ಕೆಲವರು ಹೇಳ್ತಾರೆ ಅನಂತ ಕುಮಾರ್ ವಿವಾದದ ಮಾತುಗಳನ್ನು ಹೇಳ್ತಾರೆ. ನಾನು ಹೇಳಿದರೇನೇ ವಿವಾದವಾಗುತ್ತದೆ….” ಮಾತಿನೊಂದಿಗೆ ವಿವರಣೆ ಮುಂದುವರಿಯುತ್ತದೆ.
ಸಂಬಂಧಿತ ಸುದ್ದಿ:ಲೋಕಸಭೆಯಲ್ಲಿ ಅನಂತ್​ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದು…
ಅನಂತ ಕುಮಾರ್ ಹೆಗಡೆ ಅವರ ಭಾಷಣದ ಅಂಶವನ್ನು ಮುಂದಿಟ್ಟು ಕಾಂಗ್ರೆಸ್​ ನಾಯಕರು ತೀವ್ರವಾಗಿ ಟೀಕಿಸಿದ್ದಲ್ಲದೆ, ಪ್ರಧಾನಿಯವರ ಕ್ಷಮೆಯಾಚನೆಗೂ ಆಗ್ರಹಿಸಿದ್ದರು. ಇದರ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರಿಂದ ಶೋಕಾಸ್ ನೋಟಿಸ್ ಪಡೆದಿದ್ದ ಹೆಗಡೆ, ಮಹಾತ್ಮ ಗಾಂಧಿಯವರನ್ನು ಭಾಷಣದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ, ಅವರಿಗೆ ಅವಮಾನಿಸಿಲ್ಲ ಎಂಬ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು.
ಹಿಂದೆ ಎಲ್ಲೋ ಮಾಡಿದ ಸಂವಹನ, ಪ್ರಸ್ತುತ ವಿದ್ಯಮಾನಕ್ಕೆ ಹತ್ತಿರವಾಗಿದೆ….pic.twitter.com/C7QLjbBC6i— Anantkumar Hegde (@AnantkumarH)February 7, 2020
ಹಿಂದೆ ಎಲ್ಲೋ ಮಾಡಿದ ಸಂವಹನ, ಪ್ರಸ್ತುತ ವಿದ್ಯಮಾನಕ್ಕೆ ಹತ್ತಿರವಾಗಿದೆ….pic.twitter.com/C7QLjbBC6i

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
