ಮಧ್ಯಪ್ರದೇಶ:ಜನರು ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿರುವುದರಿಂದ ಮೊರೆನಾ ಜಿಲ್ಲೆಯ ಶಂಕರ ಗ್ರಾಮದ ಮಹಿಳೆಯರು ಮದ್ಯ ನಿಷೇಧಕ್ಕಾಗಿ ಬಿಜೆಪಿ ಶಾಸಕರ ಬಳಿ ಮನವಿ ಮಾಡಿದರು. ಈ ಮನವಿ ಕುರಿತಾಗಿ ಬಿಜೆಪಿ ಶಾಸಕ ಸುಬೇದಾರ್ ಸಿಂಗ್ ರಾಜೋಧ ಹೇಳಿರುವ ವೀಡಿಯೋ ವೈರಲ್​ ಆಗಿದೆ.
ವಿಡಿಯೋದಲ್ಲಿ ಬಿಜೆಪಿ ಶಾಸಕರು, ಮದ್ಯದಂಗಡಿ ನಿಷೇಧದ ಮಹಿಳೆಯರ ಮನವಿಯನ್ನು ನಿರಾಕರಿಸಿದ್ದು, ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?” ಅಂಗಡಿಗಳನ್ನು ಹೇಗೆ ಮುಚ್ಚಲು ಸಾಧ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೊದಲ ಮೊಬೈಲ್ ಕರೆ ಮಾಡಿ 50 ವರ್ಷ; ಅಂದು ಮೊದಲು ಕರೆ ಮಾಡಿದ್ದು ಯಾರು!
ಬಿಜೆಪಿ ಶಾಸಕ ಸುಬೇದಾರ್ ಸಿಂಗ್ ರಾಜೋಧಾ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಕಟ್ಟಾ ಬೆಂಬಲಿಗ ಎಂದು ಪರಿಗಣಿಸಲಾಗಿದೆ. ಬಿಜೆಪಿ ಶಾಸಕನ ವಿಡಿಯೋ ವೈರಲ್ ಆದ ನಂತರ, ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ಪ್ರಶ್ನೆ ಮಾಡುತ್ತಾ ಶಾಸಕ ಸುಬೇದಾರ್ ಸಿಂಗ್ ರಾಜೋಧ ಹೇಳಿಕೆ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇದನ್ನೂ ಓದಿ:ಮುಸ್ಲಿಮರು ಆತ್ಮರಕ್ಷಣೆಗಾಗಿ ಬಾಂಬ್‌ ತಯಾರಿಸುತ್ತಿದ್ದಾರೆ: ಆರ್‌ಜೆಡಿ ಶಾಸಕಕಾಂಗ್ರೆಸ್ ರಾಜ್ಯ ವಕ್ತಾರ ಅಖಿಲೇಶ್ ಪ್ರತಾಪ್ ಸಿಂಗ್, ಸರ್ಕಾರ ಇಡೀ ರಾಜ್ಯವನ್ನು ಮದ್ಯದಲ್ಲಿ ಮುಳುಗಿಸಿದೆ ಎಂಬುದು ಈ ವೀಡಿಯೊದಲ್ಲಿರುವ ಸತ್ಯವಾಗಿದೆ. ಹಳ್ಳಿ, ನಗರಗಳ ಒಳಗಿನ ರಸ್ತೆಗಳಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಡಿಯೋದಲ್ಲಿ ಬಿಜೆಪಿ ಶಾಸಕ ತನ್ನನ್ನು ತಾನು ಮದ್ಯದ ಗುತ್ತಿಗೆದಾರ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ರೀತಿ ನೋಡಿದರೆ ಮಾಫಿಯಾ ಯಾರೆಂದು ಊಹಿಸಬಹುದು ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
