ಮಧ್ಯಪ್ರದೇಶ:ಚುನಾವಣೆ ಹತ್ತಿರ ಬಂದ್ರೆ ಪ್ರಚಾರದ ನಿಮಿತ್ತವಾಗಿ ಮತಗಳನ್ನು ಸೆಳೆಯಲು ನಾನಾ ಟ್ರಿಕ್​ಗಳನ್ನು  ರಾಜಕಾರಣಿಗಲನ್ನು ಮಾಡಲಾಗುತ್ತದೆ. ಹೀಗೆ ಮಧ್ಯಪ್ರದೇಶದ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಾಸ್ ಸಕ್ಲೇಚಾ ವೃದ್ಧರೊಬ್ಬರಿಂದ ಚಪ್ಪಲಿ ಏಟು ತಿಂದಿರುವ ವೀಡಿಯೋ ವೈರಲ್ ಆಗಿದೆ.
ಸ್ವಇಚ್ಛೆಯಿಂದ ಮತ್ತು ಸಂತೋಷದಿಂದ ಹೊಡೆಸಿಕೊಂಡಿರುವುದಾಗಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಚಪ್ಪಲಿ ಏಟು ನೀಡಿದ ವೃದ್ಧನನ್ನು ಸ್ಥಳೀಯವಾಗಿ ಪವಾಡಪುರುಷ ಎಂದು ನಂಬುತ್ತಿದ್ದಾರೆ. ಅವರಿಂದ ಹೊಡೆಸಿಕೊಂಡರೆ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಿಂದ ಕಾಂಗ್ರೆಸ್ ಅಭ್ಯರ್ಥಿ ಚಪ್ಪಲಿಯಿಂದ ಹೊಡೆಸಿಕೊಂಡಿದ್ದಾರೆ.
ಮಧ್ಯಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಬಾಬಾ ಚಪ್ಪಲಿಯಿಂದ ಹೊಡೆದಿದ್ದಾನೆ. ಶುಕ್ರವಾರ ಮಧ್ಯಪ್ರದೇಶ ವಿಧಾನಸಭೆಗೆ ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ರತ್ಲಾಮ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಶುಕ್ರವಾರ ಬೆಳಗ್ಗೆ ರಸ್ತೆಬದಿಯಲ್ಲಿದ್ದ ಫಕೀರ್ ಬಾಬಾ ಬಳಿ ಹೋಗಿ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಪಡೆದರು.
रतलाम कांग्रेस पार्टी प्रत्याशी पारस सकलेचा।चुनाव जीतने के लिए चप्पल का प्रसाद 🤭कांग्रेस ही ये कर सकती है। 🤣@AlokTiwari9335😁pic.twitter.com/RaqdtNESkN
— Deepak Lahiri ✍️ (@DeepakLahiri5)November 17, 2023

ಬಾಬಾರನ್ನು ಭೇಟಿ ಮಾಡಿದ ನಂತರ, ಪಾರಸ್ ಸಕ್ಲೇಚಾ ಅವರು ಹೊಸ ಚಪ್ಪಲಿಗಳನ್ನು ಅರ್ಪಿಸಿದರು. ಬಾಬಾ ಅವರನ್ನು ಕರೆದುಕೊಂಡು ಹೋಗಿ ಪಾರಸ್ ನೆತ್ತಿಯನ್ನು ತಟ್ಟಿದರು. ಆ ನಂತರ ಎರಡೂ ಕೆನ್ನೆಗಳನ್ನು ಚಪ್ಪಲಿಯಿಂದ ಮುಟ್ಟುವಂತೆ ಕೇಳಿಕೊಂಡರು. ಈ ಹೊಡೆತಕ್ಕೆ ಮತಗಳು ಸಿಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಕ್ಲೇಚಾ ಈ ಹಿಂದೆ 2008 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರತ್ಲಂ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದರು. ಆದರೆ 2013ರಲ್ಲಿ ಸೋಲನ್ನು ಎದುರಿಸಿ ಮೂರನೇ ಸ್ಥಾನ ಪಡೆದರು. ಕಶ್ಯಪ್ 2018ರಲ್ಲಿ ಗೆದ್ದಿದ್ದರು. ಈಗ ಸತತ ಮೂರನೇ ಬಾರಿಗೆ ನಿಂತಿದ್ದಾರೆ. ಅವರು ಹಾಲಿ ಬಿಜೆಪಿ ಶಾಸಕ ಚೇತನ್ ಕಶ್ಯಪ್ ವಿರುದ್ಧ ಸ್ಪರ್ಧಿಸಿದ್ದಾರೆ.
success story; ಒಂದು ಕಾಲದಲ್ಲಿ ವಾಚ್‌ಮ್ಯಾನ್ ಈಗ ಖ್ಯಾತ ಬಾಲಿವುಡ್ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + six =
Remember me
