ಭೋಪಾಲ್​:ಲಡಾಖ್​ ಪೂರ್ವಭಾಗದಲ್ಲಿನ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಚೀನಾ ವಿರೋಧಿ ಮನೋಭಾವ ವ್ಯಕ್ತವಾಗುತ್ತಿದೆ. ಚೀನಾ ಮೂಲದ ಆ್ಯಪ್​ಗಳ ಬಳಕೆ ಸ್ಥಗಿತಗೊಳಿಸುವಲ್ಲಿಂದ ಆರಂಭವಾದ ಈ ಚೀನಾ ವಿರೋಧಿ ಮನೋಭಾವ ಇದೀಗ ನ್ಯಾಯಾಲಯಗಳಿಗೂ ವಿಸ್ತರಿಸಿದೆ.
ಪ್ರಕರಣ ಒಂದರ ವಿಚಾರಣೆ ನಡೆಸುತ್ತಿದ್ದ ಮಧ್ಯಪ್ರದೇಶ ಹೈಕೋರ್ಟ್​ನ ನ್ಯಾಯಮೂರ್ತಿ ಅವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ಶ್ಯೂರಿಟಿಯ ಜತೆಗೆ ಆಸ್ಪತ್ರೆಯೊಂದರಲ್ಲಿ ಚೀನಾ ಮೂಲದ್ದಲ್ಲದ ಬೃಹತ್​ ಟಿವಿ ಪರದೆಯೊಂದನ್ನು ಕೊಡಿಸುವಂತೆ ಷರತ್ತು ವಿಧಿಸಿದೆ.
ಇದನ್ನೂ ಓದಿ:ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…
ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ಬಡೋನಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 2020ರ ಫೆಬ್ರವರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಇಬ್ಬರು ಆರೋಪಿತರು ಅರ್ಜಿ ಸಲ್ಲಿಸಿದ್ದರು. ಜೂ.26ರಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೀಲ್​ ನಾಗು ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 18ರಂದು ಆರೋಪಪಟ್ಟಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇಲ್ಲ. ಸದ್ಯ ದೇಶಾದ್ಯಂತ ಕೋವಿಡ್​-19 ಪಿಡುಗು ಹಬ್ಬಿದೆ. ಪ್ರಕರಣದ ವಿಚಾರಣೆ ಬೇಗನೆ ಮುಗಿಯುವ ಲಕ್ಷಣಗಳೂ ಕಾಣುತ್ತಿಲ್ಲ. ಹಾಗಾಗಿ ವಿಚಾರಣಾಧೀನ ಬಂಧನ ವಿಸ್ತರಣೆಯ ಅಗತ್ಯವೂ ಇಲ್ಲ. ಆದ್ದರಿಂದ ಇವರಿಬ್ಬರಿಗೂ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನಿರ್ಧಾರಕ್ಕೆ ಬಂದಿತು.
ಈ ಹಿನ್ನೆಲೆಯಲ್ಲಿ ತಲಾ 25 ಸಾವಿರ ರೂ. ಶ್ಯೂರಿಟಿಯ ಜತೆಗೆ, ರೆನ್​ಬಸೇರಾದಲ್ಲಿರುವ ಮೊರಾರ್​ನ (ಗ್ವಾಲಿಯರ್​) ಜಿಲ್ಲಾ ಆಸ್ಪತ್ರೆಗೆ 25 ಸಾವಿರ ರೂ. ಮೌಲ್ಯದ ಚೀನಾ ಹೊರತುಪಡಿಸಿ ಭಾರತ ಅಥವಾ ಬೇರಾವುದೇ ದೇಶದಲ್ಲಿ ಉತ್ಪಾದಿಸಲಾಗಿರುವ ಕಪ್ಪು ಬಣ್ಣದ ಎಲ್​ಇಡಿ ಟಿವಿyನ್ನು ಕೊಡಿಸಬೇಕು ಎಂದು ಷರತ್ತುಗಳನ್ನು ವಿಧಿಸಿತು.
ದೇವರೇ ಕಾಪಾಡಬೇಕು; ಕರೊನಾ ನಿವಾರಣೆ ಮಾನವ ಯತ್ನ ಮೀರಿದ್ದು ಎಂದ ಸಿಎಂ ಉದ್ಧವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
