ಗ್ವಾಲಿಯರ್‌:ಸುಗಂಧ ದ್ರವ್ಯ ಹಾಕಿಕೊಂಡಿದ್ದಕ್ಕೆ ಹೆಂಡತಿಯನ್ನು ಗುಂಡಿಕ್ಕಿರುವ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.ಇದನ್ನೂ ಓದಿ:ದೇವಸ್ಥಾನದ ಮೇಲೆ ದಾಳಿ: ಏಕಾಏಕಿ ಐದಾರು ವಿಗ್ರಹ ಧ್ವಂಸಗೊಳಿಸಿದ ಆರೋಪಿ ಅರೆಸ್ಟ್​​ಮಹೇಂದ್ರ ಜಾತವ್ ಎಂಬಾತನೇ ತನ್ನ ಹೆಂಡತಿಯ ಮೇಲೆ ಗುಂಡು ಹಾರಿಸಿರುವ ಆರೋಪಿಯಾಗಿದ್ದು, ನೀಲಮ್​ ಜಾತವ್​​ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಯ ನಂತರ ಆರೋಪಿಯು ಪರಾರಿಯಾಗಿದ್ದು, ನೀಲಂ ಕುಟುಂಬದವರು ನೀಡಿದ ದೂರಿನ ಮೇರೆಗೆ ಮಹೇಂದ್ರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಘಟನೆ ಹಿನ್ನೆಲೆ:ಬಿಜೋಯಿಲಿ ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ಮಹೇಂದ್ರ ಜಾತವ್​​, ಎಂಟು ವರ್ಷಗಳ ಹಿಂದೆ ನೀಲಮ್​ ಎಂಬಾಕೆಯೊಂದಿಗೆ ವಿವಾಹವಾಗಿದ್ದನು. ಕ್ರಿಮಿನಲ್ ಇತಿಹಾಸ ಹೊಂದಿರುವ ಮಹೇಂದ್ರ, ಕೆಲ ಸಮಯದವರೆಗೆ ಜೈಲು ಪಾಲಾಗಿದ್ದನು. ಅನಂತರದಲ್ಲಿ ನೀಲಮ್​​ ತನ್ನ ಪೋಷಕರೊಂದಿಗೆ ವಾಸಿಸಲು ಪ್ರಾರಂಭಿಸಿದ್ದಳು.ಇದನ್ನೂ ಓದಿ:ದೇವಸ್ಥಾನದ ಮೇಲೆ ದಾಳಿ: ಏಕಾಏಕಿ ಐದಾರು ವಿಗ್ರಹ ಧ್ವಂಸಗೊಳಿಸಿದ ಆರೋಪಿ ಅರೆಸ್ಟ್​​ನಾಲ್ಕು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ನಂತರ, ಮಹೇಂದ್ರ ಕಳೆದ ವರ್ಷದಿಂದ ತನ್ನ ಹೆಂಡತಿ ಮತ್ತು ಅವಳ ಹೆತ್ತವರ ಮನೆಯಲ್ಲಿ ವಾಸವಾಗಿದ್ದ. ಇಂದು ನೀಲಮ್​​ ತನ್ನ ಮನೆಯಿಂದ ಹೊರಡಲು ತಯಾರಿ ನಡೆಸುತ್ತಿದ್ದಾಗ ಆಕೆಯ ಗಂಡ, ಸುಗಂಧ ದ್ರವ್ಯವನ್ನು ಧರಿಸಿರುವ ಬಗ್ಗೆ ಪ್ರಶ್ನೆ ಕೇಳಿದ್ದು, ಇದು ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.ಕೂಡಲೇ ಜಗಳ ವಿಕೋಪಕ್ಕೆ ಹೋಗಿದ್ದು, ಕೋಪದ ಭರಾಟೆಯಲ್ಲಿ ಮಹೇಂದ್ರ, ಗನ್ ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿದ್ದಾನೆ. ನೀಲಮ್​ಳ ಸಹೋದರ ದಿನೇಶ್ ಕೂಡಲೇ ಸಂಬಂಧಿಕರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನೀಲಂ ಕುಟುಂಬದವರು ನೀಡಿದ ದೂರಿನ ಮೇರೆಗೆ ಮಹೇಂದ್ರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 2 =
Remember me
