ನವದೆಹಲಿ:ಮಧ್ಯಪ್ರದೇಶದಲ್ಲಿ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಪದಚ್ಯುತಗೊಳಿಸಿ ಬಿಜೆಪಿ ಅಧಿಕಾರ ಹಿಡಿದ ಮೂರು ತಿಂಗಳ ನಂತರದಲ್ಲಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ತಮ್ಮ ಸಚಿವ ಸಂಪುಟವನ್ನು ಪೂರ್ಣಪ್ರಮಾಣಕ್ಕೆ ವಿಸ್ತರಿಸಿದ್ದಾರೆ.
ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದ ಜ್ಯೋತಿರಾದಿತ್ಯ ಸಿಂಧಿಯಾ ಅವರ 11 ಜನ ಬೆಂಬಲಿಗರು ಸೇರಿ 28 ಜನರು ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಭೋಪಾಲ್​ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್​ ಅವರು ಗೋಪಾಲ್​ ಭಾರ್ಗವ, ವಿಜಯ್​ ಷಾ, ಜಗದೀಶ್​ ದೇವ್ಡಾ, ಬಿಶಹುಲಾಲ್​ ಸಿಂಗ್​, ಯಶೋಧರ ರಾಜೆ ಸಿಂಧಿಯಾ, ಭೂಪೇಂದರ್​ ಸಿಂಗ್​, ಐದಾಲ್​ ಸಿಂಗ್​ ಕನ್ಸಾನಾ, ಬ್ರಿಜೇಂದ್ರ ಪ್ರತಾಪ್​ ಸಿಂಗ್​ ಮತ್ತು ವಿಶ್ವಾಸ್​ ಸಾರಾಂಗ್​ ಅವರು ಸೇರಿ ಎಲ್ಲ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಇದನ್ನೂ ಓದಿ:ಭಾರತದ ಅತ್ಯಂತ ಐಷಾರಾಮಿ ತಾಣ ಗೋವಾ ಇಂದಿನಿಂದ ದೇಸೀ ಪ್ರವಾಸಿಗರಿಗೆ ಮುಕ್ತ
ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆಂಬಲಿಗರಾದ ಇಮಾರ್ತಿ ದೇವಿ, ಡಾ. ಪ್ರಭುರಾಮ್​ ಚೌಧಾರ್​, ಮಹೇಂದ್ರ ಸಿಂಗ್​ ಸಿಸೋಡಿಯಾ, ಪ್ರದ್ಯುಮ್ನ ಸಿಂಗ್​ ತೋಮರ್​, ರಾಜ್ಯವರ್ಧನ್​ ಸಿಂಗ್​, ಬ್ರಿಜೇಂದ್ರ ಸಿಂಗ್​ ಯಾದವ್​, ಗಿರ್​ರಾಜ್​ ಡಾನ್​ದೊತಿಯಾ, ಒಪಿಎಸ್​ ಬಹದ್ದೂರಿಯಾ ಮತ್ತು ಸುರೇಶ್​ ಜಾಖಡ್​ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಪ್ರಮುಖರು.
ಶಿವರಾಜ್​ ಸಿಂಗ್​ ಚೌಹಾಣ್​ ಅವರು ಮಾ.23ರಂದು ಮಧ್ಯಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀರಿಸಿದ್ದರು. ಮಾ.25ರಿಂದ ದೇಶಾದ್ಯಂತ ಕೋವಿಡ್​-19 ಲಾಕ್​ಡೌನ್​ ಜಾರಿಗೆ ಬಂದಿದ್ದರಿಂದ, ಏಪ್ರಿಲ್​ 21ರವರೆಗೆ ಏಕಾಂಗಿಯಾಗಿ ಕಾರ್ಯನಿರ್ವಹಿಸಿದ್ದರು. ಸಿಂಧ್ಯಾ ಅವರ ಇಬ್ಬರು ಬೆಂಬಲಿಗರು ಸೇರಿ ಏ.21ರಂದು ಐವರನ್ನು ಸಚಿವರನ್ನಾಗಿ ನೇಮಿಸಿ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರು.
ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
