ನವದೆಹಲಿ:ನಟಿ ಹಾಗೂ ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್ ಅವರು ವಿಡಿಯೋ ಡೇಟಿಂಗ್​ ಆ್ಯಪ್ FancyU​ ವಿರುದ್ಧ ತಿರುಗಿಬಿದ್ದಿದ್ದು, ತನ್ನ ಒಪ್ಪಿಗೆ ಇಲ್ಲದೆಯೇ ಫೋಟೋ ಬಳಸಿದ್ದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸೋಮವಾರ ಟ್ವೀಟ್​ ಮಾಡಿರುವ ನುಸ್ರತ್​, ಆ್ಯಪ್​ ವಿರುದ್ಧ ದೂರು ನೀಡಿದ್ದು, ನನ್ನ ಅನುಮತಿ ಇಲ್ಲದೆ FancyU​ ಆ್ಯಪ್ ನನ್ನ​ ಫೋಟೋ ಬಳಸಿದೆ. ಇದು ನಿಜಕ್ಕೂ ಸ್ವೀಕೃತವಲ್ಲ. ಈಗಾಗಲೇ ನಾನು ಕಾನೂನು ಕ್ರಮದ ಹೆಜ್ಜೆ ಇಟ್ಟಿದ್ದೇನೆಂದು ಕೋಲ್ಕತ ಸೈಬರ್ ಸೆಲ್​ ಪೊಲೀಸರು ಮತ್ತು ಪೊಲೀಸ್​ ಆಯುಕ್ತ ಅನುಜ್​ ಶರ್ಮಾ ಅವರಿಗೆ ಟ್ಯಾಗ್​ ಮಾಡಿದ್ದು, ಈ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
This is totally unacceptable – using pictures without consent. Would request the Cyber Cell of@KolkataPoliceto kindly look into the same. I am ready to take this up legally. 🙏@CPKolkatahttps://t.co/KBgXLwSjR4
— Nussrat Jahan (@nusratchirps)September 21, 2020

ಇದನ್ನೂ ಓದಿ:ಸ್ನೇಹಿತನಿಗೆ ಹೇಳಿದ ಜೋಕ್ಸ್​ ನಿಜವಾಗೋಯ್ತು: ಒಂದೇ ದಿನದಲ್ಲಿ 12 ಕೋಟಿ ರೂ. ಒಡೆಯನಾದ ಯುವಕ!​ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕೋಲ್ಕತ ಅಪರಾಧ ವಿಭಾಗದ ಜಂಟಿ ಆಯುಕ್ತರು ತಕ್ಷಣ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.
Sir,We have taken a note of the matter and the same is being looked into by our concerned section for necessary action.Regards
— Jt CP Crime, Kolkata (@KPDetectiveDept)September 21, 2020

ಯಾವುದು ಈ FancyU ಆ್ಯಪ್?FancyU ಆ್ಯಪ್​ ತನ್ನ ಬಳಕೆದಾರರಿಗೆ ಜಾಗತಿಕವಾಗಿ ಯಾರೊಂದಿಗಾದರೂ ವಿಡಿಯೋ ಚಾಟ್​ ಮಾಡಲು ಅನುಮತಿ ನೀಡುತ್ತದೆ. ತನ್ನ ಜಾಹಿರಾತು ಪೋಸ್ಟರ್​ನಲ್ಲಿ ಆ್ಯಪ್​ ನುಸ್ರತ್​​ ಅವರ ಫೋಟೋ ಬಳಸಿಕೊಂಡಿದ್ದು, ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲೇ ಕುಳಿತು ಹೊಸ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.
ಇನ್ನು ಕೋವಿಡ್​ ಲಾಕ್​ಡೌನ್​ನಿಂದಾಗಿ ವಿಡಿಯೋ ಚಾಟ್​ ಆ್ಯಪ್​ ಈಗಾಗಲೇ ಲಕ್ಷಾಂತರ ಬಳಕೆದಾರರನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ. ಗೂಗಲ್​ ಪ್ಲೇಸ್ಟೋರ್​ನಲ್ಲಿ ಲಕ್ಷಾಂತರ ಮಂದಿ ಆ್ಯಪ್​ ಡೌನ್​ಲೋಡ್​ ಮಾಡಿದ್ದಾರೆ.(ಏಜೆನ್ಸೀಸ್​)
https://www.vijayavani.net/drug-case-raginidwivedi-and-sanjana-was-not-granted-bail/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
