ಭೋಪಾಲ್​:ಮಧ್ಯಪ್ರದೇಶದ ಛತ್ತರ್​ಪುರ ಪ್ರದೇಶದಲ್ಲಿ ನೇಣು ಹಾಕಿಕೊಂಡ ಬಾಲಕನ ಶವವನ್ನು ಕೆಳಗಿಳಿಸಲು ಪೊಲೀಸರು ಬರೋಬ್ಬರಿ 15 ತಾಸು ಕಾದಿದ್ದಾರೆ….!
15 ವರ್ಷದ ಬಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ತೆರಳಿದ್ದಾರೆ. ಆದರೆ, ಆ ವೇಳೆಗಾಗಲೇ ಕತ್ತಲಾಗಿತ್ತು. ಕತ್ತಲಲ್ಲಿ ಪರಿಶೀಲನೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ಕೈಚೆಲ್ಲಿದ್ದಾರೆ.
ಇದನ್ನೂ ಓದಿ;ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?
ಬಾಲಕ ಶಿಯಾರಾಮ್​ ಕೊಂದಾರ್​ಗೆ ಗ್ರಾಮದ ಪಂಚಾಯತ್​ನವರು 10,000 ರೂ. ದಂಡ ವಿಧಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕ ಮನೆಗೆ ತೆರಳಿ ನೇಣಿಗೆ ಶರಣಾಗಿದ್ದಾನೆ. ಗ್ರಾಮಸ್ಥರು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದಾಗ ಕೊಠಡಿಯಲ್ಲಿ ಕತ್ತಲಿತ್ತು. ಅಲ್ಲಿ ವಿದ್ಯುತ್​ ಕೂಡ ಇರಲಿಲ್ಲ. ಹೀಗಾಗಿ ಕೊಠಡಿಗೆ ಬೀಗ ಹಾಕಲಾಗಿತ್ತು. ಯಾರೂ ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ ಪೊಲೀಸರನ್ನು ಕಾವಲಿರಿಸಲಾಗಿತ್ತು ಎಂದು ಇನ್​ಸ್ಪೆಕ್ಟರ್​ ಹೇಳಿದ್ದಾರೆ.
ನನ್ನ ಮಗನಿಗೆ ಮೇಲ್ಜಾತಿಯ ಜನರೆಲ್ಲ ಥಳಿಸಿದ್ದಾರೆ. ಆತ, ಬದುಕಿದ್ದಾನೋ, ಸತ್ತಿದ್ದಾನೋ ಎಂಬುದನ್ನು ಪೊಲೀಸರು ನೋಡಲಿಲ್ಲ, ರಾತ್ರಿಯಿಡೀ ದೇಹ ನೇತಾಡುತ್ತಿತ್ತು ಎಂದು ಬಾಲಕನ ತಂದೆ ಅಳಲು ತೋಡಿಕೊಂಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + sixteen =
Remember me
