ನವದೆಹಲಿ:ಕೇರಳದ ಕಾಂಗ್ರೆಸ್​ ಸಂಸದ ಶಶಿ ತರೂರ್​ ಕೆಲವು ದಿನಗಳ ಹಿಂದೆ ಸಂಸತ್ತಿನ ಮಹಿಳಾ ಸದಸ್ಯೆಯರೊಂದಿಗಿನ ಒಂದು ಸೆಲ್ಫಿಯನ್ನು ಆಕ್ಷೇಪಾರ್ಹ ಶೀರ್ಷಿಕೆಯೊಂದಿಗೆ ಶೇರ್​​ ಮಾಡಿ ಸಖತ್​ ಟ್ರೋಲ್​ ಆಗಿದ್ದರು. ಇದೀಗ ಅವರ ಮತ್ತೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನ ತರೂರ್​, ಆರು ಜನ ಸಂಸದೆಯರೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿಯ ಶೀರ್ಷಿಕೆಯಲ್ಲಿ “ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ” ಎಂದು ಟ್ವೀಟ್​ ಮಾಡಿದ್ದು ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿತ್ತು. ಮಹಿಳೆಯರ ಬಗ್ಗೆ ಈ ರೀತಿಯ ಕಾಮೆಂಟ್​ ಎಷ್ಟು ಸಮಂಜಸ ಎಂದು ಜನ ಕೇಳಿದ್ದರು.
ಇದನ್ನೂ ಓದಿ:ಮಹಿಳಾ ಸದಸ್ಯರೊಂದಿಗೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೆಲ್ಫಿ! ಶೀರ್ಷಿಕೆ ನೋಡಿ ಸಿಟ್ಟಾದ ನೆಟ್ಟಿಗರು
ಇದೀಗ ಶಶಿ ತರೂರ್​ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರೊಂದಿಗೆ ಸೆಲ್ಫಿಗೆ ಪೋಸ್​ ಮಾಡುತ್ತಿರುವಂತಿರುವ ಫೋಟೋವೊಂದು ವೈರಲ್​ ಆಗಿದೆ. ​ಇತ್ತೀಚೆಗೆ ನವದೆಹಲಿಯ ಸಂಸತ್​​ ಆವರಣದಲ್ಲಿ ಕೆಲವು ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಧರಣಿ ನಡೆದ ಸಂದರ್ಭದ ಚಿತ್ರ ಇದಾಗಿದೆ.
ಗಾಂಧಿ ಪ್ರತಿಮೆಯ ಮುಂದೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರೊಂದಿಗೆ ಬಗ್ಗಿ ಮೊಬೈಲ್​ ಸ್ಕ್ರೀನಿನತ್ತ ಮುಖ ಮಾಡಿರುವ ಈ ಫೋಟೋವನ್ನು ಲೇಖಕಿಯೊಬ್ಬರು ಟ್ವೀಟ್​ ಮಾಡಿದ್ದು, “ಇದಕ್ಕೆ ಶೀರ್ಷಿಕೆ ಕೊಡಿ” ಎಂದಿದ್ದಾರೆ. ಪ್ರತಿಕ್ರಿಯಿಸಿರುವ ಟ್ವಿಟರಿಗರು ತರೂರ್​ರ ಹಿಂದಿನ ಟ್ವೀಟನ್ನು ಉಲ್ಲೇಖಿಸಿ ಬಗೆಬಗೆಯ ಕಾಮೆಂಟು ಮಾಡುವುದರೊಂದಿಗೆ, ಮೀಮ್​ಗಳನ್ನೂ ಪೋಸ್ಟ್​ ಮಾಡಿದ್ದಾರೆ. ಮತ್ತೊಬ್ಬ ಪ್ರೊಫೆಸರ್​ ಈ ಚಿತ್ರವನ್ನು ಶೇರ್​ ಮಾಡಿ, “ಇದೇನು, ನೀವು ಪಾರ್ಲಿಮೆಂಟಿಗೆ ಸೆಲ್ಫಿ ತೆಗೆಯೋಕೆ ಹೋಗ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ನೂರಕ್ಕೆ ನೂರು ಲಸಿಕಾ ಅಭಿಯಾನ ಪೂರೈಸಿದ ಮೊದಲ ರಾಜ್ಯವಿದು!

ಕತ್ರೀನಾ-ವಿಕಿ ಮದುವೆಯಲ್ಲಿ ಈತನದು ವಿಶೇಷ ಪಾತ್ರ! ಯಾರಿದು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
