ನವದೆಹಲಿ:ಕೋವಿಡ್​-19 ವೈರಸ್​ ವಿಶ್ವವ್ಯಾಪಿಯಾಗಿ ಮರಣ ಮೃದಂಗ ಬಾರಿಸುತ್ತಿದ್ದು, ಸಾವಿನ ಪಟ್ಟಿಯಲ್ಲಿ ವಯಸ್ಕರು-ವೃದ್ಧರು, ಶ್ರೀಮಂತರು-ಪ್ರಭಾವಿಗಳು ಎನ್ನದೆ ಎಲ್ಲರ ಹೆಸರೂ ದಾಖಲಾಗುತ್ತಿದೆ. ಆಕ್ಸಿಜನ್, ಐಸಿಯು, ಬೆಡ್ ಸಿಗುತ್ತಿಲ್ಲ ಎಂಬ ಎಲ್ಲ ಇಲ್ಲಗಳ ನಡುವೆಯೂ ಏನೇ ಇದ್ದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬಂಥ ಸಂಕಟದ ಸಂದರ್ಭಗಳನ್ನೂ ಈ ಕರೊನಾ ಕಗ್ಗಂಟು ಸೃಷ್ಟಿಸಿದೆ.
ಇದೀಗ ಮಾಜಿ ಡಿಸಿಎಂ ಒಬ್ಬರ ಸಹೋದರ ಕೂಡ ಕೋವಿಡ್​ಗೆ ಬಲಿಯಾಗಿದ್ದಾರೆ. ಬಿಹಾರದ ಮಾಜಿ ಡಿಸಿಎಂ, ಹಾಲಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರ ಸಹೋದರ ಅಶೋಕ್ ಕುಮಾರ್​ ಮೋದಿ (65) ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿಯವರ ಹತ್ತಿರದ ಸಂಬಂಧಿ ಕೋವಿಡ್‌ಗೆ ಬಲಿ; ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಕೊನೆಯುಸಿರು..
‘ನನ್ನ ಕಿರಿಯ ಸಹೋದರ ಅಶೋಕ್ ಕುಮಾರ್ ಮೋದಿ ಕರೊನಾ ಸೋಂಕಿನಿಂದಾಗಿ ಇಂದು ಮಧ್ಯಾಹ್ನ 2.45ಕ್ಕೆ ನಿಧನರಾದರು. ಪಾಟ್ನಾದ ವೈದ್ಯರು ಎಲ್ಲ ಪ್ರಯತ್ನ ಮಾಡಿದರೂ ತಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂಬುದಾಗಿ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
My younger brother Ashok Kumar Modi (65) died of CORONA at 2.45 PM in Patna Doctors made all effort but we could not save him.
— Sushil Kumar Modi (@SushilModi)May 2, 2021

ಮಗಳ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸ್ಮಶಾನ ಮೌನ, ನಿಶ್ಚಿತಾರ್ಥದ ಮುನ್ನಾ ದಿನವೇ ದುರಂತ

ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
