ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಆರಂಭವಾದ ಹಿಂಸಾಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಕೇವಲ 36 ಗಂಟೆಗಳಲ್ಲಿ ನಿಯಂತ್ರಣಕ್ಕೆ ತಂದರು ಎಂದು ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಸಮರ್ಥನೆ ಮಾಡಿಕೊಂಡರು.
ಬುಧವಾರ ಸಂಸತ್​ನಲ್ಲಿ ದೆಹಲಿ ಹಿಂಸಾಚಾರ ಕುರಿತು ನಡೆದ ಚರ್ಚೆಯಲ್ಲಿ ಅವರು ಕೇಂದ್ರ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡರು.
ದೆಹಲಿ ಹಿಂಸಾಚಾರ ತಡೆಯಲು ಸರ್ಕಾರ ವಿಫಲವಾಗಿದೆ ಎಂದ ಪ್ರತಿಪಕ್ಷಗಳ ಹೇಳಿಕೆಗೆ ಅವರು ತಿರುಗೇಟು ನೀಡಿದರು.
ಗಲಭೆ ಆರಂಭವಾದ 36 ತಾಸುಗಳಲ್ಲಿ ಗೃಹ ಸಚಿವರು ನಿಯಂತ್ರಣ ಮಾಡಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ಅಮಿತ್​ ಷಾ ಅವರು ದೆಹಲಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಗಲಭೆ ನಿಯಂತ್ರಿಸಿದರು. ಇದಕ್ಕಾಗಿ ಕೇಂದ್ರ ಗೃಹ ಸಚಿವರನ್ನು ನಾನು ಶ್ಲಾಘಿಸುತ್ತೇನೆ ಎಂದರು.ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಮಲೀಲಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಭಾಷಣೆ ಮಾಡಿದ ಮರುದಿನದಿಂದಲೇ ಶಾಹೀನ್​ಬಾಘ್​ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಎನ್ನು ತಿಳಿಯದ ಮುಗ್ಧರನ್ನು ಪ್ರತಿಭಟನೆ ಮಾಡುವಂತೆ ಪ್ರಚೋದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ನೆಹರು ಪ್ರಧಾನಿಯಾಗಿದ್ದ ವೇಳೆ 243 ಕೋಮು ಗಲಭೆಗಳು ರಾಷ್ಟ್ರದಲ್ಲಿ ಸಂಭವಿಸಿವೆ. ಇಂದಿರಾಗಾಂಧಿ ಸರ್ಕಾರದ ವೇಳೆ 337 ಕೋಮು ಗಲಭೆ, ರಾಜೀವ್​ಗಾಂಧಿ ಆಡಳಿತದ ವೇಳೆ 291 ಕೋಮು ಗಲಭೆಗಳು ನಡೆದಿವೆ. ದೇಶದಲ್ಲಿ ನಡೆದ ಶೇ.73ರಷ್ಟು ಕೋಮು ಗಲಭೆಗಳು ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ನಡೆದಿವೆ. ದೆಹಲಿಯಲ್ಲಿ ಕಳೆದ ತಿಂಗಳ ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್​ ಕುಮ್ಮಕ್ಕು ನೀಡಿದೆ ಎಂದು ಹೇಳಿದರು.
Kind of radicalism at Delhi protests is evident in how kids are made to say on videos that they will kill PM, HM
Congress Module of Riot Engineering, in play for decades, has been busted in Parliament. I congratulate Sh@AmitShahfor controlling riot & unraveling conspiracypic.twitter.com/s4avBbHZVS
— Tejasvi Surya (@Tejasvi_Surya)March 11, 2020


ಇಡೀ ದಿನದ ಕಲಾಪ ನುಂಗಿದ ಬೈಗುಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
