ಭೋಪಾಲ್​:ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷವುಣಿಸಿದ ಮಹಿಳೆ, ಪ್ರಿಯಕರನೊಂದಿಗೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾರಾಸನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ 12ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಪತಿ, ಮೈದುನ ಮತ್ತು ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ಮಹಿಳೆ ವಿಷವಿಕ್ಕಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಗ್ವಾಲಿಯರ್​ನ ಜಯ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಪತಿ ಮೃತಪಟ್ಟಾಗ ಪತಿ ಕಿರಿಯ ಸಹೋದರ ಛೋಟು ಖಾನ್​ನನ್ನು ಮಹಿಳೆಗೆ ಮರು ಮದುವೆ ಆಗಿದ್ದಳು. ಆದರೆ, ಮಹಿಳೆ ಛೋಟು ಖಾನ್ ಸೋದರ ಮಾವ ಲೋಖನ್​ ಖಾನ್​ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ:ಕುಡಿದು ಕಾರು ಚಲಾಯಿಸಿದ ನೀರಾವರಿ ಇಂಜಿನಿಯರ್‌, ಮೃತರಾದ ಬಿಎಸ್‌ಎನ್‌ಎಲ್‌ ನಿವೃತ್ತ ಉದ್ಯೋಗಿ
ಈ ವಿಚಾರ ತಿಳಿದು ಕುಟುಂಬದಲ್ಲಿ ಗಲಾಟೆಯು ನಡೆದಿತ್ತು. ಹೀಗಿರುವಾಗ ಶನಿವಾರ ಮಹಿಳೆ ಲೋಖನ್​ ಖಾನ್​ ಜತೆ ಓಡಿ ಹೋಗಿದ್ದಾಳೆ. ಅದಕ್ಕೂ ಮುನ್ನ ಆಹಾರದಲ್ಲಿ ವಿಷ ಬೆರೆಸಿಟ್ಟು ಪರಾರಿಯಾಗಿದ್ದಾಳೆ. ​
36 ವರ್ಷದ ಆರೋಪಿ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಪತಿ, ಅತ್ತೆ-ಮಾವ, ಮೈದುನ, ಅತ್ತಿಗೆ ಸೇರಿದಂತೆ ಇಡೀ ಕುಟುಂಬ ವಿಷಾಹಾರ ಸೇವಿ ಆಸ್ಪತ್ರೆ ಪಾಲಾಗಿದ್ದಾರೆ. ಇತ್ತ ಮಹಿಳೆಯ ಮೇಲೆ ಎಫ್​ಐಆರ್​ ದಾಖಲಾಗಿದ್ದು ಆಕೆಯ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಎಲ್ಲರಿಗೂ ಒಂದೇ ನಿಯಮ: ಮಾಸ್ಕ್​ ಧರಿಸದ ಸರ್ಕಲ್​ ಇನ್ಸ್​ಪೆಕ್ಟರ್​ಗೆ ದಂಡ ವಿಧಿಸಿದ ಎಸ್​ಪಿ!

ಕಾಫಿ ಕೃಷಿಯಲ್ಲಿ ಧರ್ಮರಾಜ್ ಖುಷಿ; ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು..

ಫೋನ್​ನಲ್ಲಿ ಬಾಡಿಗೆದಾರನ ಮಾತು ಕೇಳಿ ಆತನ ಮನೆಗೆ ಹೋದ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್!​

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × four =
Remember me
