ಮಧ್ಯಪ್ರದೇಶ:ನಗರದ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ನಾಯಿ ಸಾಕುವ ಮಾಲೀಕರು ಇನ್ನು ಮುಂದೆ ತೆರಿಗೆ ಪಾವತಿಸಬೇಕು ಎಂಬ ಹೊಸ ಕಾನೂನನ್ನು ಇದೀಗ ಸಾಗರ​ ಜಿಲ್ಲೆಯ ನಗರ ಪಾಲಿಕೆ 40 ಮಂದಿ ಸದಸ್ಯರು ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಮುಂದಿನ ಏಪ್ರಿಲ್ ವೇಳೆಗೆ ನೂತನ ಕಾನೂನು ಜಾರಿಯಾಗಬಹುದು ಎನ್ನಲಾಗಿದೆ. ಈಗಾಗಲೇ ದೆಹಲಿ, ಪ್ರಯಾಗ್​ರಾಜ್ ಮುಂತಾದ ಮಹಾನಗರಗಳಲ್ಲಿ ಸಾಕು ಪ್ರಾಣಿಗಳಿಗೆ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ.
ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಾಲೀಕರು ತಮ್ಮ ನಾಯಿಗಳನ್ನು ರಸ್ತೆ ಬದಿಗೆ ಕರೆತಂದು ಮಲವಿಸರ್ಜನೆ ಮಾಡಿಸುತ್ತಾರೆ. ಇದರಿಂದ ಸಾರ್ವಜನಿಕ ಸ್ಥಳ ಹೆಚ್ಚು ಕೊಳಕಾಗುತ್ತದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದು ಸಾಗರ್​​ನ ನಗರ ಪಾಲಿಕೆ ಆಯುಕ್ತ ಚಂದ್ರಶೇಖರ ಶುಕ್ಲಾ ಹೇಳಿದ್ದಾರೆ.
ಸಾಗರದ ಎಲ್ಲಾ ನಗರ ಪಾಲಿಕೆ ವಾರ್ಡ್‌ಗಳು ಕಟ್ಟುನಿಟ್ಟಾಗಿ ನಾಯಿಗಳು ಎಷ್ಟಿವೆ ಎಂದು ನೋಂದಣಿ ಮಾಡಿಕೊಂಡು, ರೋಗನಿರೋಧಕ ಚುಚ್ಚುಮದ್ದು ನೀಡಬೇಕು. ನಂತರ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಕೆಲವು ನಾಯಿ ಮಾಲೀಕರು ಸರಿಯಲ್ಲ ಎಂದು ವಿರೋಧಿಸಿದ್ದಾರೆ. ನಾಯಿ ಸಾಕಲು ತೆರಿಗೆ ವಿಧಿಸುತ್ತದೆ ಎಂದಾದರೆ, ನಾಯಿಗಳ ಮಲವಿಸರ್ಜನೆ ಇತ್ಯಾದಿ ಜಾಗಗಳಿಗೆ ಪಾಲಿಕೆ ಪ್ರತ್ಯೇಕ ಸ್ಥಳ ಒದಗಿಸಬೇಕು ಎಂದು ಕೆಲವರು ಬೇಡಿಕೆ ಸಲ್ಲಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + ten =
Remember me
