ಮುಂಬೈ:ಮದ್ರಾಸ್ ರಬ್ಬರ್ ಫ್ಯಾಕ್ಟರಿ (ಎಂಆರ್​ಎಫ್) ಕಂಪನಿ ಪ್ರತಿ ಷೇರಿನ ಮೌಲ್ಯ ಒಂದು ಲಕ್ಷ ರೂಪಾಯಿ ಮುಟ್ಟಿದ್ದು, ಭಾರತೀಯ ಕಂಪನಿಯೊಂದರ ಷೇರು ಆರು ಅಂಕಿಯ ಬೆಲೆ ದಾಟಿದ್ದು ಇದೇ ಮೊದಲಾಗಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ವಹಿವಾಟು ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಎಂಆರ್​ಎಫ್ ಷೇರು, ಮುಕ್ತಾಯದ ಹೊತ್ತಿಗೆ ಶೇ. 1.48ರಷ್ಟು ಹೆಚ್ಚಳ ಕಂಡು, ಪ್ರತಿ ಷೇರು ಮೌಲ್ಯ 1,00,439.95 ರೂ.ಗೆ ಸ್ಥಿತವಾಯಿತು. ಬಿಎಸ್​ಇಯಲ್ಲಿ 1,00,300 ರೂ.ಗೆ ಮಾರಾಟವಾಯಿತು. ಮೇ 8ರಂದು 99,933 ರೂ. ಮುಟ್ಟಿದ್ದು ಈ ಹಿಂದಿನ ಗರಿಷ್ಠ ಬೆಲೆಯಾಗಿತ್ತು.
ಕಳೆದ ಒಂದು ವರ್ಷದಿಂದ ಎಂಆರ್​ಎಫ್ ಷೇರು ಶೇ. 46ಕ್ಕೂ ಹೆಚ್ಚು ವೃದ್ಧಿಯನ್ನು ಕಂಡಿದೆ. 2012ರ ಫೆಬ್ರವರಿಯಲ್ಲಿ 10,000 ರೂ. ಇದ್ದ ಎಂಆರ್​ಎಫ್ ಷೇರುಮೌಲ್ಯ, 2021ರ ಜನವರಿಯಲ್ಲಿ 90,000 ರೂ. ಮುಟ್ಟಿತ್ತು. ಕಳೆದ ಸಾಲಿನ ಕಡೆಯ ತ್ರೖೆಮಾಸಿಕದಲ್ಲಿ ಕಂಪನಿಯ ಲಾಭ 410 ಕೋಟಿ ರೂ. ಆಗಿದ್ದು, ಅದರ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಿನ ಲಾಭ ದಾಖಲಿಸಿದೆ.
ಷೇರುಪೇಟೆಯಲ್ಲಿ ಹುಮ್ಮಸ್ಸು: ಭಾರತದ ಉಭಯ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟು ಹುಮ್ಮಸ್ಸಿನಿಂದ ಕೂಡಿದ್ದು, ಸೆನ್ಸೆಕ್ಸ್ 63 ಸಾವಿರ ಗಡಿ ದಾಟಿದ್ದು, ಆರು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಜಾಗತಿಕ ಷೇರುಪೇಟೆಯ ಧನಾತ್ಮಕತೆಯ ಪರಿಣಾಮ ಸೆನ್ಸೆಕ್ಸ್ ನಲ್ಲಿ 418.45 ಅಂಶ ಹೆಚ್ಚಳವಾಗಿ ವಹಿವಾಟು 63,143.16ರಲ್ಲಿ ಕೊನೆಗೊಂಡಿತು. ಮಧ್ಯಂತರದಲ್ಲಿ 452 ಪಾಯಿಂಟ್ ವರೆಗೂ ಜಿಗಿತ ಕಂಡಿತ್ತು. ನಿಫ್ಟಿಯಲ್ಲಿ 114.65 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು 18,716.15ರಲ್ಲಿ ಮುಕ್ತಾಯವಾಗಿದೆ. ಐಟಿಸಿ, ಟೈಟಾನ್, ಏಷ್ಯನ್ ಪೇಂಟ್ಸ್, ರಿಲಯನ್ಸ್, ಟಾಟಾ ಸ್ಟೀಲ್, ಬಜಾಜ್ ಫಿನ್​ಸರ್ವ್, ಆಕ್ಸಿಸ್ ಬ್ಯಾಂಕ್, ಹಿಂದುಸ್ತಾನ್ ಯುನಿಲಿವರ್, ಇನ್ಪೋಸಿಸ್, ಬಜಾಜ್ ಫೈನಾನ್ಸ್, ನೆಸ್ಲೆ, ಐಸಿಐಸಿಐ ಬ್ಯಾಂಕ್​ಗಳ ಷೇರು ಮೌಲ್ಯ ಹೆಚ್ಚಿದೆ. ಇನ್ನೊಂದೆಡೆ ಕೊಟಾಕ್ ಮಹೀಂದ್ರ ಬ್ಯಾಂಕ್, ಮಹೀಂದ್ರ ಆಂಡ್ ಮಹೀಂದ್ರ, ಎಚ್​ಸಿಎಲ್ ಟೆಕ್ನಾಲಜೀಸ್, ಎಸ್​ಬಿಐ, ಭಾರ್ತಿ ಏರ್​ಟೆಲ್, ಟಾಟಾ ಮೋಟಾರ್ಸ್​ಗಳಿಗೆ ನಷ್ಟವಾಗಿದೆ. ಕರೆನ್ಸಿ ವಿನಿಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಪ್ರತಿ ಡಾಲರ್​ಗೆ 82.25 ರೂ. ಇದೆ.
ಜಾಗತಿಕವಾಗಿ 2000 ಉತ್ತಮ ಕಂಪನಿಗಳ ರ‍್ಯಾಂಕಿಂಗ್ ಅನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ 45ನೇ ಸ್ಥಾನದಲ್ಲಿ ಇದೆ. ಕಳೆದ ಸಲಕ್ಕಿಂತ ಎಂಟು ಸ್ಥಾನ ಮೇಲಕ್ಕೇರಿದೆ. ಅಮೆರಿಕದ ಜೆಪಿಮಾರ್ಗನ್ ಮೊದಲ ಸ್ಥಾನದಲ್ಲಿದ್ದರೆ, ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ವಾರೆನ್ ಬಫೆಟ್​ರ ಬರ್ಕ್​ಷೈರ್ ಹಾಥ್​ವೇ 338ನೇ ಸ್ಥಾನಕ್ಕೆ ಕುಸಿದಿದೆ. ಸೌದಿ ಅರೇಬಿಯಾದ ತೈಲ ಕಂಪನಿ ಅರಾಮ್ಕೊ ಎರಡನೇ ಸ್ಥಾನದಲ್ಲಿದ್ದು, ನಂತರ ಸ್ಥಾನಗಳಲ್ಲಿ ಚೀನಾದ ಮೂರು ಬ್ಯಾಂಕ್​ಗಳು ಇವೆ. ಆಲ್ಪಾಬೆಟ್ ಮತ್ತು ಆಪಲ್ ಕಂಪನಿಗಳು ಕ್ರಮವಾಗಿ ಏಳು ಮತ್ತು 10ನೇ ರ್ಯಾಂಕ್​ನಲ್ಲಿ ಇವೆ. ಮಾರಾಟ, ಲಾಭ, ಆಸ್ತಿ ಮತ್ತು ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಕಂಪನಿ/ಸಂಸ್ಥೆಗಳ 2023ರ ಪಟ್ಟಿಯನ್ನು ಫೋರ್ಬ್ಸ್ ಸಿದ್ಧಪಡಿಸಿದೆ.
ಭಾರತ ಇತರ ಸಂಸ್ಥೆಗಳು ಸ್ಥಾನ ಇಂತಿವೆ:ಎಸ್​ಬಿಐ 77 (ಹಿಂದಿನ ವರ್ಷ 105), ಎಚ್​ಡಿಎಫ್​ಸಿ 128, (ಹಿಂದಿನ ವರ್ಷ 153), ಐಸಿಐಸಿಐ ಬ್ಯಾಂಕ್ 163 (ಹಿಂದಿನ ವರ್ಷ 204). ಈ ವರ್ಷ ಹೊಸದಾಗಿ ಸೇರ್ಪಡೆಯಾದ ಭಾರತೀಯ ಕಂಪನಿಗಳ ಪೈಕಿ ಎನ್​ಜಿಸಿ 226, ಎಚ್​ಡಿಎಫ್​ಸಿ 232, ಎಲ್​ಐಸಿ 363ಗಳಿವೆ.
ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + nineteen =
Remember me
